Advertisement

ಗಜೇಂದ್ರಗಡದಲ್ಲಿ ಕರವೇ ಅದ್ಧೂರಿ ಮೆರವಣಿಗೆ

03:05 PM Jan 28, 2021 | Team Udayavani |

ಗಜೇಂದ್ರಗಡ: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ಸಂಗೊಳ್ಳಿ ರಾಯಣ್ಣನವರ ಹುತಾತ್ಮ ದಿನಾಚರಣೆ ಹಾಗೂ ಬೆಳಗಾವಿ ವಿಭಾಗ ಮಟ್ಟದ ಕರವೇ ಸಮಾವೇಶ ಪ್ರಯುಕ್ತ ಬುಧವಾರ ಭರ್ಜರಿ ಮೆರವಣಿಗೆ ನಡೆಯಿತು.

Advertisement

ಪಟ್ಟಣದ ಮೈಸೂರ ಮಠದಿಂದ ಸಂಗೊಳ್ಳಿ ರಾಯಣ್ಣರವರ ಭಾವಚಿತ್ರ ಮೆರವಣಿಗೆಗೆ ಕಸಾಪ ತಾಲೂಕಾಧ್ಯಕ್ಷ ಐ.ಎ. ರೇವಡಿ ಚಾಲನೆ ನೀಡಿದರು. ತೆರೆದ ವಾಹನದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌. ಪಾಟೀಲ, ಕರವೇ ಮಹಿಳಾ ರಾಜ್ಯ ಉಪಾಧ್ಯಕ್ಷೆ ಅಶ್ವನಿಗೌಡ, ಕರವೇ ರಾಜ್ಯ ಉಪಾಧ್ಯಕ್ಷ ಎಚ್‌. ಎಸ್‌. ಸೋಂಪೂರ ಸಾಗಿದರು. ಮೆರವಣಿಯಲ್ಲಿ ಡೊಳ್ಳು, ನಗಾರಿ, ಗೆಜ್ಜೆ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಮೇಳೈಸಿದವು.

ಇದನ್ನೂ ಓದಿ:ರೈತರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿಲ್ಲ: ಸತೀಶ

ಮೆರವಣಿಗೆಯುದ್ದಕ್ಕೂ ಕನ್ನಡದ ಬಾವುಟಗಳು ರಾರಾಜಿಸಿದವು. ಕನ್ನಡ ಘೋಷವಾಕ್ಯಗಳು ಮಾರ್ಧನಿಸಿದವು. ಮೆರವಣಿಗೆಯು ದುರ್ಗಾ ವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತದ ಮೂಲಕ ಎಪಿಎಂಸಿ ಬಯಲುಜಾಗೆಯಲ್ಲಿನ ಸಮಾರಂಭದ ಸ್ಥಳ ತಲುಪಿತು.

Advertisement

Udayavani is now on Telegram. Click here to join our channel and stay updated with the latest news.

Next