Advertisement
ಕುದ್ರೋಳಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಅ. 5ರ ಮಧ್ಯಾಹ್ನ 2 ಗಂಟೆಯಿಂದ ಅ. 6ರ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಕೊಟ್ಟಾರ ಚೌಕಿ ಜಂಕ್ಷನ್ ಮುಖಾಂತರ ನಗರಕ್ಕೆ ಬರುವ ವಾಹನಗಳ ನಗರ ಪ್ರವೇಶ ನಿಷೇಧಿಸಲಾಗಿದೆ. ವಾಹನಗಳು ಕುಂಟಿಕಾನ, ಕೆಪಿಟಿ, ನಂತೂರು ಮಾರ್ಗವಾಗಿ ನಗರ ಪ್ರವೇಶಿಸುವುದು.
Related Articles
Advertisement
ಕೆಎಸ್‌ಆರ್‌ಟಿಸಿ ಜಂಕ್ಷನ್ ಕಡೆಯಿಂದ ಎಂ.ಜಿ.ರಸ್ತೆಗೆ (ಲಾಲ್‌ಬಾಗ್ ಜಂಕ್ಷನ್ ಕಡೆಗೆ) ಹಾಗೂ ಬಿಜೈ ಮಾರ್ಕೆಟ್ ಜಂಕ್ಷನ್ ಕಡೆಯಿಂದ ಕೆಎಸ್‌ಆರ್‌ಟಿಸಿ ಕಡೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಕುಂಟಿಕಾನ ಕಡೆಯಿಂದ ಬರುವ ವಾಹನಗಳು ಕೆಎಸ್ ಆರ್‌ಟಿಸಿ ಜಂಕ್ಷನ್ ಬಳಿ ಎಡಕ್ಕೆ ತಿರುಗಿ ಬಿಜೈ ಮಾರ್ಕೆಟ್ ಜಂಕ್ಷನ್ ಮೂಲಕ ಸಂಚರಿಸುವುದು. ಬಿಜೈ ಮಾರ್ಕೆಟ್ ಜಂಕ್ಷನ್ ಕಡೆಯಿಂದ ಎಂ.ಜಿ. ರಸ್ತೆಗೆ (ಲಾಲ್‌ಬಾಗ್ ಜಂಕ್ಷನ್ ಕಡೆಗೆ) ಬರುವ ವಾಹನಗಳು ಕೆಎಸ್‌ಆರ್‌ಟಿಸಿ ಜಂಕ್ಷನ್ ಬಳಿ “ಯು’ ತಿರುವು ಪಡೆದುಕೊಂಡು ಬಿಜೈ ಮಾರ್ಕೆಟ್ ಜಂಕ್ಷನ್ ಕಡೆಗೆ ಸಂಚರಿಸುವುದು.
ಪಶು ಆಸ್ಪತ್ರೆ ಜಂಕ್ಷನ್ (ಕಪುಚಿನ್‌ಚರ್ಚ್)ನಿಂದ ಕೋರಿರೊಟ್ಟಿ ಜಂಕ್ಷನ್ (ಎಂ.ಜಿ.ರಸ್ತೆ) ಕಡೆಗೆ ಸಾಗುವ ಎಲ್ಲ ವಾಹನ ಸಂಚಾರ ನಿಷೇಧಿಸಲಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಹೋಗುವ ಎಲ್ಲ ಕೆಎಸ್‌ಆರ್‌ಟಿಸಿ ಬಸ್ ಪೈಕಿ ಪಂಪ್‌ವೆಲ್ ಕಡೆಗೆ ಸಂಚರಿಸುವ ಬಸ್‌ಗಳು ಕೆಪಿಟಿ ಜಂಕ್ಷನ್ ಮೂಲಕ ಮತ್ತು ಉಡುಪಿ ಕಡೆಗೆ ಸಂಚರಿಸುವ ಬಸ್‌ಗಳು ಕುಂಟಿಕಾನ ಜಂಕ್ಷನ್ ಮೂಲಕ ಸಂಚರಿಸುವುದು.
ಮೆರವಣಿಗೆ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿ ಸಲಾಗಿದೆ. ಕುದ್ರೋಳಿ ನಾರಾಯಣಗುರು ಕಾಲೇಜು ಜಂಕ್ಷನ್ ರಸ್ತೆಯಿಂದ ಬರ್ಕೆ ಜಂಕ್ಷನ್ ತನಕ ಮತ್ತು ಬರ್ಕೆಜಂಕ್ಷನ್‌ನಿಂದ ದುರ್ಗಾಮಹಲ್ ಜಂಕ್ಷನ್ ವರೆಗೆ, ದುರ್ಗಾಮಹಲ್ ಜಂಕ್ಷನ್‌ನಿಂದ ಅಳಕೆ ಬ್ರಿಡ್ಜ್ ತನಕ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆ ಇರುವುದಿಲ್ಲ.
ಮಣ್ಣಗುಡ್ಡೆ ಗುರ್ಜಿ ಜಂಕ್ಷನ್‌ನಿಂದ ಉರ್ವಮಾರ್ಕೆಟ್ ಜಂಕ್ಷನ್ ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ, ಮಣ್ಣಗುಡ್ಡೆ ಗಾಂಧಿನಗರ ಪಾರ್ಕ್ ಮುಂಭಾಗದ ರಸ್ತೆ, ಗಾಂಧಿನಗರ 1ರಿಂದ 8ರ ವರೆಗಿನ ಅಡ್ಡ ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆ ಇಲ್ಲ.
ರಥಬೀದಿ ಶೋಭಾಯಾತ್ರೆ: ಸಂಚಾರ ಬದಲಾವಣೆ
ರಥಬೀದಿ ಶಾರದಾ ಮೂರ್ತಿಯ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಅ. 6ರ ಸಂಜೆ 6 ಗಂಟೆಯಿಂದ ಅ. 7ರ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.
ಬಾಲಾಜಿ ಜಂಕ್ಷನ್‌ನಿಂದ ರಥಬೀದಿ ವೆಂಕಟರಮಣ ದೇವಸ್ಥಾನದ ಕಡೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ಬಾಲಾಜಿ ಜಂಕ್ಷನ್‌ನಿಂದ ಲೋವರ್ ಕಾರ್‌ಸ್ಟ್ರೀಟ್‌ನಿಂದಾಗಿ ಅಜೀಜುದ್ದೀನ್ ರಸ್ತೆಯ ಮುಖಾಂತರ ಸಂಚರಿಸುವುದು. ಗಣಪತಿ ಹೈಸ್ಕೂಲ್ ರಸೆ ¤ಜಂಕ್ಷನ್ ಮುಖಾಂತರ ಕಾರ್‌ಸ್ಟ್ರೀಟ್ ಕಡೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ತಾರಾಕ್ಲಿನಿಕ್ ಮುಂದುಗಡೆಯಿಂದ ಶರವುದೇವಸ್ಥಾನದ ಎದುರಿನಿಂದಾಗಿ ಕೆ.ಎಸ್. ಆರ್. ರಸ್ತೆ ಮುಖೇನ ಸಂಚರಿಸುವುದು. ಕೇಂದ್ರ ಮಾರುಕಟ್ಟೆಯಿಂದ ಕಾರ್‌ಸ್ಟ್ರೀಟ್ ಕಡೆಗೆ ಬರುವ ವಾಹನಗಳ ಸಂಚಾರ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ವಾಹನಗಳು ಕೇಂದ್ರ ಮಾರುಕಟ್ಟೆ ರಸ್ತೆಯಲ್ಲಿ ಸಂಚರಿಸಿ ಕ್ಲಾಕ್‌ಟವರ್ ಮುಖೇನ ಮುಂದುವರಿಯುವುದು, ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲ ತರಹದ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.