Advertisement

ಸಂಸ್ಕಾರಭರಿತ ಭವಿಷ್ಯನಿರ್ಮಿಸಲು ಮುಂದಾಗಿ: ಕೋಟ್ಯಾನ್‌

04:15 PM Sep 18, 2017 | |

ಬೆಳ್ತಂಗಡಿ : ಇಂದು ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ವ್ಯಾಪಾರೀಕರಣ ಹೆಚ್ಚಾಗುತ್ತಿದ್ದು ಇದಕ್ಕೆ  ಹೆತ್ತವರು ಬಲಿಯಾಗದೆ ನಾರಾಯಣ ಗುರುಗಳ ಚಿಂತನೆಯಂತೆ ಸಂಸ್ಕಾರಭರಿತ ಭವಿಷ್ಯ ರೂಪಿಸುವ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್‌ ಹೇಳಿದ್ದಾರೆ.

Advertisement

ರವಿವಾರ ಬೆಳ್ತಂಗಡಿ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್‌ ಕಲ್ಯಾಣ ಮಂಟಪದಲ್ಲಿ  ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಇವುಗಳ  ಸಂಯುಕ್ತ ಅಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಗುರು ಜಯಂತಿ, ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಬೆಳ್ತಂಗಡಿ ಶ್ರೀ ಗು. ನಾ. ಸೇ. ಸಂಘದ ಅಧ್ಯಕ್ಷ ಭಗೀರಥ ಜಿ. ಅಧ್ಯಕ್ಷತೆ ವಹಿಸಿ, ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಸಂಘಟನೆಗಳನ್ನು ಬೆಳೆಸಿ ಬಿಲ್ಲವ ಸಮಾಜದ ಕಟ್ಟಕಡೆಯ ಕುಟುಂಬ ಗಳನ್ನು ಮುಖ್ಯವಾಹಿನಿಗೆ ತರುವ ಕಾರ್ಯನಡೆಯಬೇಕು ಎಂದರು.

ಶಾಸಕ, ರಾಜ್ಯಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ  ಕಾರ್ಯಕ್ರಮ ಉದ್ಘಾಟಿಸಿದರು.

ಸಮ್ಮಾನ
ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್‌ ಕಾಶಿಪಟ್ನ, ಬೆಳ್ತಂಗಡಿ ತಾ| ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ್‌ ಬಳಂಜ ಅವರನ್ನು ಸಮ್ಮಾನಿಸಲಾಯಿತು. ಎಪಿಎಂಸಿ ಸದಸ್ಯರಾದ ಚಿದಾನಂದ ಎಲ್ದಡ್ಕ‌, ಜಯಾ ನಂದ ಕಲ್ಲಾಪು, ಪಲ್ಲವಿ ರಾಜು ಹಾಗೂ ಗ್ರಾ. ಪಂ. ಸದಸ್ಯರಾದ ನೀತಾ ಮಹೇಶ್‌ ಕುಮಾರ್‌ ನಡಕ್ಕರ, ಹರೀಶ್‌ ಕನ್ಯಾಡಿ, ಎಂಬಿಬಿಎಸ್‌ ನೀಟ್‌  ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಸಮರ್ಥ್, ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕಲಾವಿದೆ ರಕ್ಷಾ ಇವರನ್ನು ಗುರುತಿಸಲಾಯಿತು. ಶೇ. 95ಕ್ಕೂ ಅಧಿಕ ಅಂಕ ಪಡೆದ ಬಿಲ್ಲವ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಶ್ರೀ ಗು. ನಾ. ಸೇ. ಸಂಘದ ಮಾಜಿ ಅಧ್ಯಕ್ಷರಾದ ಕೆ. ವಸಂತ ಸಾಲ್ಯಾನ್‌, ಪಿ. ಕೆ. ರಾಜು ಪೂಜಾರಿ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ತನುಜಾ ಶೇಖರ್‌  ಮತ್ತಿತರರು ಉಪಸ್ಥಿತರಿದ್ದರು.

Advertisement

ವಸಂತ ಪುದುವೆಟ್ಟು ಸಮ್ಮಾನಿತರ ಪರಿಚ‌ಯ ವಾಚಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಕುಮಾರ್‌ ಕಾಪಿನಡ್ಕ ಸ್ವಾಗತಿಸಿ, ನಿರ್ದೇಶಕ ಸೋಮನಾಥ ಬಂಗೇರ ವರ್ಪಾಳೆ ಪ್ರಸ್ತಾವಿಸಿದರು. ಸುಧಾ ರಮಾನಂದ, ಸ್ಮಿತೇಶ್‌ ಕಾರ್ಯಕ್ರಮ ನಿರೂಪಿಸಿ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಚಿದಾನಂದ ಇಡ್ಯ ವಂದಿಸಿದರು.

ಒಂದೇ ಜಾತಿ
ಜಾತಿ ಸಮಾಜವು ಇನ್ನೊಂದು ಜಾತಿ ಸಮಾಜವನ್ನು ತಿರಸ್ಕರಿಸುವ,  ಸ್ಪರ್ಧಿಸುವ ಉದ್ದೇಶದಿಂದಿರಬಾರದು. ಎಲ್ಲ  ಜಾತಿ ಧರ್ಮವನ್ನು ಪ್ರೀತಿಸುವ ಜತೆಗೆ ಸ್ವಜಾತಿ ಸಂಘಟನೆ ಬೆಳೆಸಿ ಸಮಾಜದಲ್ಲಿ ಆದರ್ಶ ಜಾತಿ ಸಮಾಜ ಎಂಬುದಕ್ಕೆ ಪಾತ್ರರಾಗಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ  ಆಗುತ್ತಿರುವ ದೌರ್ಜನ್ಯ, ಕೀಳರಿಮೆ ನೋಡಲಾಗದೆ ಸುಮಾರು 150 ವರ್ಷಗಳ ಹಿಂದೆಯೇ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಂದೇಶ ಸಾರಿದವರು. ಜತೆಗೆ ವಿದ್ಯೆಯಿಂದ ಸ್ವತಂತ್ರರಾಗಿರಿ ಎಂಬ ಧ್ಯೇಯವನ್ನಿಟ್ಟು ಸಂದೇಶವನ್ನು ಸಾರಿದ ಮಹಾನ್‌ ಸಂತರು.

ಉಮಾನಾಥ ಕೋಟ್ಯಾನ್‌, ಕರ್ನಾಟಕ ತುಳು ಸಾಹಿತ್ಯ 
ಅಕಾಡೆಮಿಯ ಮಾಜಿ  ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next