Advertisement

ತನಿಖಾ ಸಂಸ್ಥೆಗಳ ಕಾರ್ಯವಿಧಾನ ಲೋಪ ಬಯಲು

01:27 AM Jan 14, 2020 | Team Udayavani |

ಪ್ರತಿ ಸಲ ಭಯೋತ್ಪಾದಕ ದಾಳಿ ಸಂಭವಿಸಿದಾಗ ನಾವು ಪಾಕಿಸ್ಥಾನವನ್ನು ದೂಷಿಸಿ ಸುಮ್ಮನಾಗುತ್ತಿದ್ದೆವು.ಇಷ್ಟು ವ್ಯವಸ್ಥಿತ ದಾಳಿ ನಡೆಸಲು ಸ್ಥಳೀಯರ ನೆರವಿಲ್ಲದೆ ಅಸಾಧ್ಯವಾಗಿದ್ದರೂ ಇದನ್ನು ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸದಿರುವ ಪರಿಣಾಮ ಏನಾಗಬಹುದು ಎಂಬುದಕ್ಕೆ ದೇವಿಂದರ್‌ ಸಿಂಗ್‌ ಪ್ರಕರಣ ಉದಾಹರಣೆಯಾಗಬಹುದು.

Advertisement

ರಾಷ್ಟ್ರಪತಿ ಪದಕ ಪುರಸ್ಕೃತ ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ಉಗ್ರರ ಜೊತೆಗೆ ಶಾಮೀಲಾಗಿ ಸಿಕ್ಕಿ ಬಿದ್ದಿರುವುದು ಆಘಾತಕಾರಿ ಮಾತ್ರವಲ್ಲದೆ ಕಳವಳಕಾರಿಯೂ ಹೌದು. ಡಿಎಸ್‌ಪಿ ದರ್ಜೆಯ ಅಧಿಕಾರಿ ದೇವಿಂದರ್‌ ಸಿಂಗ್‌ ಅವರನ್ನು ಹಿಜ್ಬುಲ್‌ ಉಗ್ರ ಸಂಘಟನೆಯ ಕಮಾಂಡರ್‌ ಸೇರಿ ಇಬ್ಬರು ಉಗ್ರರ ಜೊತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಂಧಿಸಲಾಗಿದೆ. ಪ್ರಸ್ತುತ ಜಮ್ಮು-ಕಾಶ್ಮೀರದ ವಿಮಾನ ನಿಲ್ದಾಣದಲ್ಲಿ ಡಿಎಸ್‌ಪಿ ಆಗಿರುವ ಸಿಂಗ್‌ 90ರ ದಶಕದಿಂದಲೂ ಕಣಿವೆ ರಾಜ್ಯದಲ್ಲಿ ಕರ್ತವ್ಯದಲ್ಲಿದ್ದಾರೆ. ಉಗ್ರರ ವಿರುದ್ಧ ಹಲವು ಕಾರ್ಯಾಚರಣೆಗಳನ್ನೂ ಮಾಡಿದ್ದಾರೆ. ಆದರೆ ಕಳೆದ ಕೆಲವು ಸಮಯದಿಂದೀಚೆಗೆ ಅವರು ಪೊಲೀಸರ ರಹಸ್ಯ ಕಣ್ಗಾವಲಿನಲ್ಲಿದ್ದರು.

ಓರ್ವ ಪೊಲೀಸ್‌ ಅಧಿಕಾರಿ ಅದೂ ಡಿಎಸ್‌ಪಿ ದರ್ಜೆಯ ಅಧಿಕಾರಿ ಉಗ್ರರ ಜೊತೆಗೆ ಕೈಜೋಡಿಸಲು ಸಾಧ್ಯವೇ ಎಂಬ ಅಪನಂಬಿಕೆಯ ಪ್ರಶ್ನೆಯೊಂದು ಜನಮಾನಸದಲ್ಲಿದೆ. ಆದರೆ ದೇವಿಂದರ್‌ ಸಿಂಗ್‌ ಪೂರ್ವಾಪರ ಬೇರೆಯದ್ದೇ ಕತೆ ಹೇಳುತ್ತಿದೆ. 2001ರಲ್ಲಿ ದೇಶದ ಪ್ರಜಾತಂತ್ರದ ಮುಕುಟ ಮಣಿಯಂತಿರುವ ಸಂಸತ್‌ ಮೇಲೆ ನಡೆದ ಉಗ್ರರ ದಾಳಿ ಪ್ರಕರಣದಲ್ಲೇ ದೇವಿಂದರ್‌ ಸಿಂಗ್‌ ಹೆಸರು ಪ್ರಸ್ತಾವಕ್ಕೆ ಬಂದಿತ್ತು. ದಾಳಿಯ ರೂವಾರಿ ಅಫ‌jಲ್‌ ಗುರು ವಿಚಾರಣೆ ಸಂದರ್ಭದಲ್ಲಿ ದೇವಿಂದರ್‌ ಸಿಂಗ್‌ ಈ ದಾಳಿಯಲ್ಲಿ ಶಾಮೀಲಾಗಿರುವ ಕುರಿತು ತಿಳಿಸಿದ್ದ. ಆದರೆ ಇದರ ಹೊರತಾಗಿಯೂ ದೇವಿಂದರ್‌ ಸಿಂಗ್‌ ವಿರುದ್ಧ ತನಿಖೆ ನಡೆಸಿರಲಿಲ್ಲ. 2003ರಲ್ಲಿ ಅಫ‌‌jಲ್‌ ಗುರುವನ್ನು ನೇಣಿಗೇರಿಸುವ ಮೂಲಕ ಸಂಸತ್‌ ಮೇಲಣ ದಾಳಿ ಪ್ರಕರಣ ಮುಕ್ತಾಯವಾಗಿತ್ತು. ಸಂಸತ್‌ ಮೇಲಣ ದಾಳಿಗೂ ಕೆಲವು ತಿಂಗಳು ಮೊದಲು ದೇವಿಂದರ್‌ ಸಿಂಗ್‌, ಅಫ‌jಲ್‌ನನ್ನು ಬಂಧಿಸಿದ್ದರು. “ದೇವಿಂದರ್‌ ಸೂಚನೆ ಮೇರೆಗೆ ಸಂಸತ್‌ ಮೇಲೆ ದಾಳಿ ಮಾಡಿದ ಉಗ್ರ ಮೊಹಮ್ಮದ್‌ ಎಂಬಾತನನ್ನು ದಿಲ್ಲಿಗೆ ಕರೆದುಕೊಂಡು ಹೋಗಿ ತಂಗುವ ವ್ಯವಸ್ಥೆ ಮಾಡಿದ್ದೆ’ ಎಂದು ಅಫ‌jಲ್‌ ಅಂದು ಹೇಳಿರುವುದು ಈಗ ವ್ಯಾಪಕ ಚರ್ಚೆಗೊಳಗಾಗುತ್ತಿದೆ. ಇಷ್ಟೆಲ್ಲ ಸಾಕ್ಷ್ಯವಿದ್ದರೂ ಭಯೋತ್ಪಾದನೆಯಂಥ ಗಂಭೀರ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಯನ್ನು ವಿಚಾರಣೆ ನಡೆಸಲಿಲ್ಲ ಎನ್ನುವ ಅಂಶ ನಮ್ಮ ತನಿಖಾ ಸಂಸ್ಥೆಗಳ ಕಾರ್ಯವಿಧಾನಗಳ ಲೋಪವೆಂದೇ ಹೇಳಬೇಕಾಗುತ್ತದೆ.

ಸಂಸತ್‌ ದಾಳಿ ಸಂಭವಿಸಿ 19 ವರ್ಷಗಳೇ ಕಳೆದು ಹೋಗಿದೆ. ಇಷ್ಟೆಲ್ಲ ವರ್ಷಗಳಲ್ಲಿ ದೇವಿಂದರ್‌ ಸಿಂಗ್‌ ಇನ್ನೆಷ್ಟು ಅನಾಹುತಗಳನ್ನು ಎಸಗಿದ್ದಾರೆ ಎನ್ನುವುದು ತನಿಖೆಯಿಂದಷ್ಟೆ ಬಯಲಾಗಬೇಕಿದೆ.
ಪ್ರತಿ ಸಲ ಭಯೋತ್ಪಾದಕ ದಾಳಿ ಸಂಭವಿಸಿದಾಗ ನಾವು ಪಾಕಿಸ್ತಾನವನ್ನು ದೂಷಿಸಿ ಸುಮ್ಮನಾಗುತ್ತಿದ್ದೆವು.ಇಷ್ಟು ವ್ಯವಸ್ಥಿತವಾಗಿ ದಾಳಿ ನಡೆಸಲು ಸ್ಥಳೀಯರ ನೆರವಿಲ್ಲದೆ ಅಸಾಧ್ಯವಾಗಿದ್ದರೂ ಇದನ್ನು ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸದಿರುವ ಪರಿಣಾಮ ಏನಾಗಬಹುದು ಎಂಬುದಕ್ಕೆ ದೇವಿಂದರ್‌ ಸಿಂಗ್‌ ಪ್ರಕರಣ ಉದಾಹರಣೆಯಾಗಬಹುದು. ದೇವಿಂದರ್‌ ಸಿಂಗ್‌ ಇದನ್ನೆಲ್ಲ ಮಾಡುತ್ತಿದ್ದದ್ದು ಹಣಕ್ಕಾಗಿ ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಯಾರಿಂದ ಅವರಿಗೆ ಹಣ ಸಂದಾಯವಾಗುತ್ತಿತ್ತು? ಬೇರೆ ಯಾರೆಲ್ಲ ಅವರ ಜೊತೆಗೆ ಈ ಸಂಚಿನಲ್ಲಿ ಶಾಮೀಲಾಗಿದ್ದಾರೆ ಎಂಬುದರ ಕುರಿತೂ ತನಿಖೆಯಾಗಬೇಕು.

2008ರಲ್ಲಿ ಹತ್ತು ಮಂದಿ ಪಾಕ್‌ ಉಗ್ರರು ಮುಂಬಯಿಗೆ ನುಗ್ಗಿ ಬಂದು ಮಾರಣಹೋಮ ನಡೆಸಿದ ಸಂದರ್ಭದಲ್ಲಿ ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ದೇಶದ ಒಳಗಿನವರ ಸಹಾಯವಿಲ್ಲದೆ ಇಷ್ಟು ವ್ಯವಸ್ಥಿತವಾಗಿ ದಾಳಿ ನಡೆಸಲು ಸಾಧ್ಯವಿಲ್ಲ. ಈ ಒಳಗಿನವರ ಕುರಿತು ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು. ಆಗ ಕೇಂದ್ರ ಗೃಹ ಸಚಿವರಾಗಿದ್ದ ಚಿದಂಬರಂ ಈ ಆರೋಪವನ್ನು ಅಲ್ಲಗಳೆದು ಮೋದಿ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ಅನಂತರ ಮೋದಿ ತಾನು ಯಾವ ಅರ್ಥದಲ್ಲಿ ಈ ಮಾತನ್ನು ಹೇಳಿದ್ದೇನೆ ಎಂದು ಸ್ಪಷ್ಟೀಕರಣ ನೀಡಬೇಕಾಯಿತು.

Advertisement

ಅಫ್ಜಲ್‌ ಕಸಬ್‌ನನ್ನು ನೇಣಿಗೇರಿಸುವ ಮೂಲಕ ಈ ಪ್ರಕರಣವನ್ನೂ ನಾವು ಮುಗಿಸಿಬಿಟ್ಟಿದ್ದೇವೆ. ಉಗ್ರರಿಗೆ ನೆರವಾದವರು ಯಾರು ಎನ್ನುವುದು ಕೊನೆಗೂ ಬೆಳಕಿಗೆ ಬರಲೇ ಇಲ್ಲ. ಇದೀಗ ಮೋದಿಯವರು ಪ್ರಧಾನಿಯಾಗಿದ್ದಾರೆ. ದೇವಿಂದರ್‌ ಸಿಂಗ್‌ ಪ್ರಕರಣ ಭಯೋತ್ಪಾದನಾ ಚಟುವಟಿಕೆಗಳ ಸ್ಥಳೀಯ ಸಂಪರ್ಕಗಳನ್ನು ತನಿಖೆಗೊಳಪಡಿಸಲು ಅವಕಾಶವೊಂದನ್ನು ಕಲ್ಪಿಸದೆ. ಈ ಅವಕಾಶವನ್ನು ಕೇಂದ್ರ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಎಲ್ಲ ಪ್ರಮುಖ ಉಗ್ರ ಪ್ರಕರಣಗಳನ್ನು ತನಿಖೆಗೊಳಪಡಿಸಿ ವ್ಯವಸ್ಥೆಯೊಳಗಿರುವ ದ್ರೋಹಿಗಳ ಮುಖವಾಡ ಕಳಚುವ ಕೆಲಸವಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next