Advertisement

ಅರ್ಜಿ ಇಲ್ಲದೆ ಸಾಧಕರನ್ನು ಗುರುತಿಸಲು ಕ್ರಮ: ಸುನಿಲ್‌

12:56 AM Dec 12, 2021 | Team Udayavani |

ಕಾರ್ಕಳ: ಮುಂದಿನ ರಾಜ್ಯೋತ್ಸವ ಸಂದರ್ಭ ಅರ್ಜಿಗಳನ್ನು ಸ್ವೀಕರಿಸದೆ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತರಂಗ ವಾರಪತ್ರಿಕೆಯ ಸಂಪಾದಕಿ ಡಾ| ಯು.ಬಿ. ರಾಜಲಕ್ಷ್ಮೀ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ ಕುಮಾರ್‌ ಕಟೀಲು ಅವರಿಗೆ ಕಾರ್ಕಳದಲ್ಲಿ ಶನಿವಾರ ಜರಗಿದ ಹುಟ್ಟೂರ ಪೌರ ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌ ಉದ್ಘಾಟಿಸಿದರು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಭಿನಂದನ ಭಾಷಣ ಮಾಡಿ, ಡಾ| ರಾಜಲಕ್ಷ್ಮೀ ಸದ್ದುಗದ್ದಲವಿಲ್ಲದೆ ಎಲೆಮರೆಯ ಕಾಯಿಯಂತೆ ಸಾಧನೆಯ ಹಾದಿಯಲ್ಲಿ ನಡೆದು ಬಂದವರು. ದೀರ್ಘಾವಧಿ ತರಂಗ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿರುವುದಲ್ಲದೆ ತರಂಗ ಪತ್ರಿಕೆಯ ವ್ಯವಸ್ಥಾಪಕಿ ಡಾ| ಸಂಧ್ಯಾ ಪೈ ಪ್ರೀತಿಗೆ ಪಾತ್ರರಾದವರು ಎಂದರು.

ಅಂತೆಯೇ ರೋಹಿತ್‌ ಕಟೀಲು ಅವರಲ್ಲಿ ಹಿರಿಯರಲ್ಲಿ ರಕ್ತಗತವಾಗಿದ್ದ ನಾಯಕತ್ವ, ಹೋರಾಟ ಮನೋಭಾವ, ಸೌಂದರ್ಯ ಪ್ರಜ್ಞೆ ಬೆಳೆದು ಬಂದಿದೆ ಎಂದರು.

ಇದನ್ನೂ ಓದಿ:ಒಂಟೆ ಸವಾರಿ ವಿಡಿಯೋ ಹಂಚಿಕೊಂಡ ಸಚಿವ ಕಿರಣ್‌ ರಿಜಿಜು 

Advertisement

ಹಿರಿಯ ಉದ್ಯಮಿ ಬೋಳ ಪ್ರಭಾಕರ ಕಾಮತ್‌, ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ| ಮಂಜುನಾಥ ಕೋಟ್ಯಾನ್‌, ಬಿಲ್ಲವ ಸಮಾಜ ಅಧ್ಯಕ್ಷ ಡಿ.ಆರ್‌. ರಾಜು, ಉದ್ಯಮಿಗಳಾದ ಮಹೇಶ್‌ ಶೆಟ್ಟಿ, ಕುಡುಪುಲಾಜೆ, ಚಿತ್ರ ನಟಿಯರಾದ ದುನಿಯ ರಶ್ಮಿ, ಭಾವನಾ ಮಾತನಾಡಿ ದರು. ಕರಿಯಣ್ಣ ಶೆಟ್ಟಿ, ಶಿವರಾಮ ಶೆಟ್ಟಿ, ಅಪ್ಸರಾ ರೋಹಿತ್‌ ಕುಮಾರ ಕಟೀಲು, ಸಮಿತಿ ಅಧ್ಯಕ್ಷ ಸುನಿಲ್‌ ಕುಮಾರ್‌ ವೇದಿಕೆಯಲ್ಲಿದ್ದರು.

ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಣಿರಾಜ ಶೆಟ್ಟಿ ಸ್ವಾಗತಿಸಿದರು. ಬಾಲಕೃಷ್ಣ ಶೆಟ್ಟಿ ವಂದಿಸಿದರು. ರಾಜೇಂದ್ರ ಭಟ್‌ ನಿರೂಪಿಸಿದರು. ಪ್ರಶಸ್ತಿ ಪುರಸ್ಕೃತರಿಬ್ಬರಿಗೂ ತುಪ್ಪದ ನಂದಾದೀಪ ಬೆಳಗಿ, ಪನ್ನೀರು ಚಿಮುಕಿಸಿ, ಅವರದೇ ಎತ್ತರದ ಮಾನ ಪತ್ರ, ಸ್ಮರಣಿಕೆ ಫ‌ಲಪುಷ್ಪ ನೀಡಿ ಗೌರವಿಸಲಾಯಿತು. ಡಾ| ರಾಜಲಕ್ಷ್ಮೀ ಸಮ್ಮಾನ ಸ್ವೀಕರಿಸಿದ ವೇಳೆ ತರಂಗ ಪತ್ರಿಕೆಯ ವ್ಯವಸ್ಥಾಪಕಿ ಡಾ| ಸಂಧ್ಯಾ ಎಸ್‌. ಪೈ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next