Advertisement

ನಾಡಕಚೇರಿ ವ್ಯವಸ್ಥೆ ‘ನೆಟ್‌’ಗಿಲ್ಲ !

04:40 PM Sep 23, 2018 | |

ತಾವರಗೇರಾ: ಪಟ್ಟಣದ ನಾಡ ಕಚೇರಿಯ ಅಂರ್ತಜಾಲ ಸಂಪರ್ಕ ಕಡಿತಗೊಂಡಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ನಾಡ ಕಚೇರಿಗೆ ಅರ್ಜಿ ಸಲ್ಲಿಸಲು ಬಂದಿದ್ದ ವಿವಿಧ ಗ್ರಾಮಗಳ ಜನತೆ ಬರಿಗೈಯಲ್ಲಿ ವಾಪಸ್‌ ತೆರಳಿದರು. ನಾಡ ಕಚೇರಿಯವರು ಬಿಎಸ್‌ಎನ್‌ಎಲ್‌ ಬಿಲ್‌ ಪಾವತಿಸದಿರುವುದಕ್ಕೆ ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಇದರಿಂದ ನಿತ್ಯ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಲು ಬರುವ ಹೋಬಳಿ ವ್ಯಾಪ್ತಿಯ ನಾಗರಿಕರು ಪರದಾಡುವಂತಾಗಿದೆ. ಕಚೇರಿಗೆ ಬರುವ ನೂರಾರು ಜನಕ್ಕೆ ಇಲ್ಲಿನ ಸಿಬ್ಬಂದಿ ವಿವಿಧ ಕಾರಣ ಕೊಟ್ಟು ವಾಪಸ್‌ ಕಳುಹಿಸುತ್ತಿರುವಯದು ಶನಿವಾರ ಕಂಡು ಬಂದಿತು.

Advertisement

2013 ರಿಂದ ನಮ್ಮ ಕಚೇರಿಗೆ ಕಲ್ಪಿಸಿರುವ ನೆಟ್‌ ಸಂಪರ್ಕದ ಬಿಲ್‌ನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಾವತಿ ಮಾಡಲಾಗುತ್ತಿತ್ತು. ಆದರೆ ಈ ತಿಂಗಳ ಬಿಲ್‌ ಪಾವತಿ ಆಗಿಲ್ಲ. ಆದ ಕಾರಣ ನಮಗೆ ಬಿಲ್‌ ಪಾವತಿ ಮಾಡಲು ಬಿಎಸ್‌ಎನ್‌ಎಲ್‌ ಕಚೇರಿಯಿಂದ ಕರೆ ಮಾಡಲಾಗಿತ್ತು. ಈಗಾಗಲೇ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇಲ್ಲಿನ ಬಿಎಸ್‌ಎನ್‌ಎಲ್‌ ಅಧಿಕಾರಿಗಳು ರಾಯಚೂರು ಕಚೇರಿ ಮೇಲಾಧಿಕಾರಿಗಳ ಜೊತೆ ಮಾತನಾಡಿ ಎಂದು ಹೇಳುತ್ತಾರೆ. ಸೋಮವಾರದೊಳಗೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು.
∙ಹಸನಸಾಬ್‌ ಗುಳೇದಗುಡ್ಡ, ನಾಡ ತಹಶೀಲ್ದಾರ್‌ ತಾವರಗೇರಾ

Advertisement

Udayavani is now on Telegram. Click here to join our channel and stay updated with the latest news.

Next