Advertisement

ಗಾಜಿನ ಕಿಟಕಿ, ಶಟರ್‌ಗಳಿರುವ ಬಸ್‌ಗಳಲ್ಲಿ ತೀವ್ರ ಧಗೆ : ಕ್ರಮಕ್ಕೆ ಪ್ರಯಾಣಿಕರ ಆಗ್ರಹ

04:49 PM Apr 27, 2019 | keerthan |

ಬದಿಯಡ್ಕ : ಗಾಜಿನ ಕಿಟಕಿ ಶಟರ್‌ಗಳಿರುವ ಬಸ್‌ಗಳಲ್ಲಿಯ ಪ್ರಯಾಣ ಸುಡು ಬಿಸಿಲಿನಲ್ಲಿ ಪ್ರಯಾಣಿಕರಿಗೆ ಸಂಕಷ್ಟ ಉಂಟು ಮಾಡುತ್ತಿದೆ. ವಿವಾಹ-ವಿನೋದ-ತೀರ್ಥಾಟನೆಗೆ ಉಪಯೋಗಿಸುವ ವಾಹನಗಳಲ್ಲಿ ಗಾಜಿನ ಕಿಟಕಿ ಶಟರ್‌ಗಳನ್ನು ಉಪಯೋಗಿಸುವುದರಿಂದ ಬೆವರುತ್ತಿರುವುದಾಗಿ ಪ್ರಯಾಣಿಕರು ದೂರುತ್ತಿದ್ದಾರೆ.

Advertisement

ನೋಡಲು ಆಕರ್ಷಣೀಯವಾಗಿರಲು ಗಾಜಿನ ಶಟರ್‌ ಅಳವಡಿಸಿದ ಬಸ್‌ಗಳಿಗೆ ಹೊರಗಿನ ಸುಡು ಬಿಸಿಲಿನಿಂದ ಪ್ರಯಾಣಿಕರು ಹತ್ತಿದರೆ ಬೆವರಿ ಅಸ್ವಸ್ಥರಾಗುವುದು ಸಾಮಾನ್ಯವಾಗಿದೆ. ಬಸ್‌ನೊಳಗೆ ಗಾಳಿ ಪ್ರವೇಶಿಸಲು ಅಡ್ಡಿಯಾಗುವ ರೀತಿಯಲ್ಲಿ ಎರಡೂ ಬದಿಗಳಲ್ಲಿ ಗಾಜಿನ ಶಟರ್‌ ಅಳವಡಿಸಲಾಗಿದೆ. ಅಲ್ಪ ಗಾಳಿ ಲಭಿಸುವುದಕ್ಕಾಗಿ ಸರ್ವಶಕ್ತಿ ಉಪಯೋಗಿಸಿ ದೂಡಿದರೂ ಕೂಡ ಹಲವು ಶಟರ್‌ಗಳು ತೆರೆಯುವುದಿಲ್ಲ .

ಕಾನೂನು ವಿಧೇಯವಾಗಿ ಹವಾ ನಿಯಂತ್ರಿತ ಕಾರ್ಯಾಚರಿಸುತ್ತಿರುವ ಬಸ್‌ಗಳ ಇಂತಹ ಸಜಿಜೀಕರಣಗಳನ್ನು ಎಲ್ಲ ಬಸ್‌ಗಳಲ್ಲಿ ಏರ್ಪಡಿಸಿದ್ದರೂ ಪ್ರಯಾಣಿಕರಿಗೆ ಈ ಮೂಲಕ ಉಂಟಾಗುವ ತೊಂದರೆಗಳನ್ನು ಸಂಬಂಧಪಟ್ಟವರು ಪರಿಗಣಿಸುತ್ತಿಲ್ಲ . ಮಕ್ಕಳು ಸೇರಿದಂತೆ ಪ್ರಯಾಣಿಕರೂ ಸಹ ಕ್ಷೀಣತೆಯಿಂದ ಕಷ್ಟಪಡುತ್ತಿದ್ದಾರೆ. ಜನದಟ್ಟಣೆ ಹೆಚ್ಚಿರುವ ಸಮಯಗಳಲ್ಲಿ ಪ್ರಯಾಣಿಕರಿಗೆ ಪ್ರಯಾಣ ನಡೆಸಲು ಮಾತ್ರವಲ್ಲ ; ಬಸ್‌ಗೆ ಹತ್ತಲು, ಇಳಿಯಲು ಕೂಡ ಸಮಸ್ಯೆಯಾಗುವ ರೀತಿಯಲ್ಲಿ ಇಂತಹ ಬಸ್‌ಗಳ ಸೀಟುಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಸಿರಾಡಲು ಕೂಡಾ ಅಸಾಧ್ಯವಾದ ಸ್ಥಿತಿ ಉಂಟಾಗಿದೆ.

ಇಕ್ಕಟ್ಟಿನ ಸೀಟುಗಳ ವ್ಯವಸ್ಥೆ ಕಾರಣ ಒಂದೇ ಸೀಟಿನಲ್ಲಿ ಕುಳಿತುಕೊಳ್ಳುವ ಸಹ ಯಾತ್ರಿಕರಿಗೆ ಬಿಸಿಲ ಧಗೆಯಿಂದ ಬೆವರುವಾಗ ಗಾಳಿ ಕೂಡಾ ಸಿಗದಂತಹ ಸ್ಥಿತಿಯುಂಟಾಗಿದೆ. ಬಸ್‌ನೊಳಗಿನ ಬಿಸಿಗಾಳಿ ಹೊರಹೋಗಲು ಬಸ್‌ಗಳ ಮೇಲ್ಭಾಗದಲ್ಲಿ ಮುಚ್ಚಲು ಹಾಗೂ ತೆರೆಯಲು ವೆಂಟಿಲೇಟರ್‌ಗಳನ್ನು ಸ್ಥಾಪಿಸಲಾಗುತ್ತದೆ. ಆದರೆ, ಅವುಗಳನ್ನು ತೆರೆಯುವುದಿಲ್ಲ ಎಂಬುದು ಪ್ರಯಾಣಿಕರ ಆರೋಪವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next