ಶಿರಾ: ನಗರದ ಪೇಶುಮಾಂ ಮೊಹಲ್ಲಾ 26ನೇ ವಾರ್ಡ್ ನಲ್ಲಿ ಮೂಲಸೌಕರ್ಯಗಳೇ ಮರೀಚಿಕೆ ಯಾಗಿದೆ. ಚರಂಡಿ ಸ್ವಚ್ಛತೆ ಕೊರತೆ, ಖಾಲಿ ನಿವೇಶನಗಳಲ್ಲಿ ಜಾಲಿ ಗಿಡಗಳು ಬೆಳೆದಿರುವುದು ಸೇರಿ ಸಮಸ್ಯೆಗಳ ಸರಮಾಲೆ ಇಲ್ಲಿದೆ.
ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿರು ವುದರಿಂದ ಜನರಿಗೆ ಬಯಲು ಬಹಿರ್ದೆಸೆ ಸ್ಥಳ ವಾಗಿದೆ. ಮನೆಗಳಲ್ಲಿ ಶೌಚಗೃಹವಿದ್ದರೂ ಕೆಲವರು ಖಾಲಿ ನಿವೇಶನಕ್ಕೆ ಹೋಗುತ್ತಾರೆ. ಪ್ರತಿಷ್ಠಿತ ಆಸ್ಪತ್ರೆ ಮುಂಭಾಗ ಇಂತಹ ಪರಿಸ್ಥಿತಿ ಇರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಸಾಂಕ್ರಾಮಿಕ ರೋಗ ಭೀತಿ: ಗಲ್ಲಿ ಗಲ್ಲಿಗಳಲ್ಲಿರುವ ಚರಂಡಿಗಳಲ್ಲಿ ಹಂದಿಗಳ ಹಿಂಡು ಬಿದ್ದು ಹೊರಳಾ ಡುತ್ತಿರುತ್ತವೆ. ಚರಂಡಿ ನೀರು ಸರಾಗವಾಗಿ ಹರಿಯದೆ ಸೊಳ್ಳೆ, ನೊಣಗಳ ಉತ್ಪತ್ತಿ ತಾಣವಾಗಿದ್ದು, ಸಾಂಕ್ರಾ ಮಿಕ ರೋಗ ಭೀತಿ ಎದುರಾಗಿದೆ. ಸೊಳ್ಳೆಗಳ ಕಾಟ ದಿಂದ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆ ದುರ್ವಾಸನೆ ಹಾಗೂ ನೊಣಗಳ ಕಾಟದಿಂದ ದೈನಂದಿನ ಯಾವುದೇ ಕೆಲಸ ಮಾಡಲು ಸಾಧ್ಯ ವಾಗುತ್ತಿಲ್ಲ. ಹಲವು ಬಾರಿ ಜನರು ದೂರು ನೀಡಿ ದ್ದರೂ ನಗರಸಭೆ ತಲೆ ಕೆಡಿಸಿಕೊಂಡಿಲ್ಲ.
ಮೂಗು ಮುಚ್ಚಿಕೊಂಡೇ ಓಡಾಡುವ ದುಸ್ಥಿತಿ: ಇತ್ತೀಚೆಗೆ ಮಳೆಯಿಂದ ವಾರ್ಡ್‌ನ ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯದೆ ರಸ್ತೆಯಲ್ಲಿ ನೀರು ಹರಿಯುತಿತ್ತು. ನಗರಸಭೆಯವರು ಜೆಸಿಬಿ ತಂದು ಚರಂಡಿಗಳ ಮೇಲಿನ ಸ್ಲ್ಯಾಬ್ ತೆಗೆದು 15-20 ದಿನ ಕಳೆದರೂ ಮತ್ತೆ ಜೋಡಿಸದಿರುವುದರಿಂದ ಮೂಗು ಮುಚ್ಚಿಕೊಂಡೇ ಓಡಾಡುವ ದುಸ್ಥಿತಿ ಇದೆ. ವಾರ್ಡ್ ಸದಸ್ಯರು ಚುನಾವಣೆ ವೇಳೆ ಭರವಸೆ ನೀಡಿ ಗೆದ್ದ ಬಳಿಕ ಇತ್ತ ತಲೆ ಹಾಕಿಲ್ಲ ಎಂಬುದು ಜನರ ಆರೋಪ ವಾಗಿದೆ. ನಗರಸಭೆ ಆಯುಕ್ತರು ಪದೇಪದೆ ಬದ ಲಾಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಪರಿಸರ ಎಂಜಿನಿಯರ್ ಕಾರ್ಯನಿರ್ವಹಿಸುವಲ್ಲಿ ವಿಫಲ ರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಾಗಿದೆ.
● ಎಸ್.ಕೆ. ಕುಮಾರ್