Advertisement
ಸಮಸ್ಯೆಗಳೆಂಬುದು ಸದ್ದು ಮಾಡದೆ ಬಂದು ನಮ್ಮ ಮಾನಸಿಕ ಸಮತೋಲನವನ್ನು ಹದಗೆಡಿಸುತ್ತವೆ. ನಾವಿರುವ ಜಗತ್ತಿನಲ್ಲಿ ಎಷ್ಟು ವಿಧ ವಿಧವಾದ ಮುಖಗಳಿವೆಯೋ ಅಷ್ಟು ವಿಧವಾದ ಸಮಸ್ಯೆಗಳಿವೆ.
ಬಹುತೇಕ ತೊಡಕುಗಳಿಂದ ಪಾರಾಗಲು ನಮ್ಮ ಅಂತರಂಗ ದಲ್ಲಿಯೇ ಮಾರ್ಗಗಳಿವೆ. ಜೀವನದ ಸಮಸ್ಯೆಗಳು ಮಾರಕವಲ್ಲ. ಅವುಗಳಿಗೆ ನಾವು ನೀಡುವ ಪ್ರಾಧಾನ್ಯ ಅವನ್ನು ವಿಷಕಾರಿ ಯನ್ನಾಗಿಸುತ್ತವೆ. ಬಹುವಾಗಿ ತೊಂದರೆಗಳು ನಮ್ಮ ಮೂಢ ವಿಚಾರಗಳಿಂದ ಹುಟ್ಟುತ್ತವೆ. ಒಂದು ಸಮಸ್ಯೆಗೆ ನಾವೆಷ್ಟು ಕಾರಣೀಭೂತರು ಎಂಬುದನ್ನರಿತಾಗ ಆ ಸಮಸ್ಯೆಯ
ತೀವ್ರತೆ ಕ್ಷೀಣಿಸುತ್ತದೆ. ಉತ್ತಮ ಮಟ್ಟದ ಆಲೋಚನೆಗಳನ್ನು, ವಿಚಾರಗಳನ್ನು ಪ್ರಜ್ಞಾವಂತರಾಗಿ ಬಾಳಿನಲ್ಲಿ ಅಳವಡಿಸಿ ಕೊಂಡಾಗ ಸಮಸ್ಯೆಗಳ ನಿಜರೂಪವನ್ನು ತಿಳಿದುಕೊಳ್ಳುವುದು ಕಠಿನವಲ್ಲ. ಆದ್ದರಿಂದ ಬದುಕಿನ ಪಂಥಾಹ್ವಾನಗಳನ್ನು ನೋವಿನ ಮನೆ ಯೆಂದು ಪರಿಗಣಿಸಿದರೆ ಶಾಂತಮನಸ್ಕರಾಗಿ ಸಮಸ್ಯೆ ಗಳನ್ನು ಬಗೆಹರಿಸುವ ಸಂಕಲ್ಪವನ್ನು ಮಾಡಿ ಉತ್ಸಾಹದಿಂದ ನಡೆಯಬೇಕು.
Related Articles
ಜಟಿಲ ಸಮಸ್ಯೆಗಳ ಗಂಡಾಂತರಗಳನ್ನು ಪ್ರತಿಭಟಿಸಿ ವಿಜಯ ಶಾಲಿಗಳಾದ ಜೀವಿಗಳಿಂದಲೇ ಲೋಕ ಪ್ರಗತಿಯನ್ನು ಕಂಡಿದೆ. ಅನಿವಾರ್ಯ ಸಮಸ್ಯೆಗಳನ್ನು ಬಗೆಹರಿಸುವ ಬುದ್ಧಿಮತ್ತೆೆ ಪ್ರತಿಯೊಬ್ಬರ ಸ್ವತ್ತು ಆಗಬೇಕು. ಬದುಕಿನ ಸವಾಲುಗಳನ್ನು ಎದುರಿಸುವ ಛಲಗಾರಿಕೆ, ಆತ್ಮಸ್ಥೈರ್ಯ ಯಾರಿಗೆ ಇರುತ್ತದೋ ಅಂಥವರಿಗೆ ಸೋಲೆಂಬುದಿಲ್ಲ. ಇಂತಹ ವ್ಯಕ್ತಿಗಳ ಸಮೀಪಕ್ಕೆ ಬರಲು ಸಮಸ್ಯೆಗಳೂ ಅಂಜುತ್ತವೆ. ಆದಕಾರಣ ಬಾಳೆಂಬ ನಿರಂತರ ಸಂಗ್ರಾಮದಲ್ಲಿ ತೊಡಕುಗಳಿಂದ ಉದ್ಭವಿಸುವ ನಿರಾಶೆಗಳ ಜತೆಗೆ ಬದುಕುವುದು ಸಮಂಜಸವಲ್ಲ. ಈ ರೀತಿಯ ನಿಕೃಷ್ಟವಾದ ನಿರ್ವಿಣ್ಣತೆ ಮನುಷ್ಯನ ಅನೇಕ ಸುಮಧುರ ಕನಸುಗಳನ್ನು ಅವುಗಳ ಶೈಶವದಲ್ಲಿಯೇ ಕತ್ತು ಹಿಸುಕಿ ಹಾಕುತ್ತದೆ.
Advertisement
ಸ್ವಾಭಿಮಾನವೊಂದು ದೈವಿಕ ರೆಕ್ಕೆಲೋಕದಲ್ಲಿ ಲೋಕಮಾನ್ಯರೆನಿಸಲು ಅನೇಕ ಸತ್ಯ-ತಣ್ತೀಗಳನ್ನು ಶ್ರದ್ಧೆಯಿಂದ ಪಾಲಿಸುವುದು ಅನಿವಾರ್ಯ. ಇಂತಹ ಉತ್ತುಂಗ ಗುಣಗಳಲ್ಲಿ ಸ್ವಾಭಿಮಾನವೂ ಒಂದು. ತಪ್ಪು ಮಾಡದಿದ್ದರೆ ಕ್ಷಮೆ ಕೇಳದಿರುವುದು, ನುಡಿದಂತೆ ನಡೆಯುವುದು, ಅನ್ಯರ ಹಂಗಿನಲ್ಲಿ ಬದುಕದಿರುವುದು, ವಿನಾಕಾರಣ ಇನ್ನೊಬ್ಬರ ಸಹಾಯವನ್ನು ಯಾಚಿಸದಿರುವುದು, ಅವಮಾನವನ್ನು ಸಹಿಸದಿರುವುದು ಇವೆಲ್ಲ ಸ್ವಾಭಿಮಾನದ ಸಂಕೇತಗಳು. ಸ್ವಾಭಿಮಾನಿಗೆ ಸಹಜವಾಗಿಯೇ ಪ್ರಪಂಚದಲ್ಲಿ ಗೌರವ ಸಿಗುತ್ತದೆ. ಉಳಿದವರ ಘನತೆಯನ್ನು ಲೆಕ್ಕಿಸದ ಅಹಂಭಾವ, ತಾತ್ಸಾರ ಸ್ವಾಭಿಮಾನಿಯಲ್ಲಿ ಕಾಣುವುದಿಲ್ಲ. ನಮ್ಮಲ್ಲಿ ಸ್ವಾಭಿಮಾನವಿರಬೇಕು, ದುರಭಿಮಾನವಲ್ಲ. ದುರಭಿಮಾನ ಎಂಬುದು ಸ್ವಾಭಿಮಾನಕ್ಕೆ ಧಕ್ಕೆ ತರುವ ದುರ್ಗುಣ. ದುರಭಿಮಾನವನ್ನು ಬಿಡದ ಕಾರಣ ದುರಂತ ಮಯ ಅಂತ್ಯವನ್ನು ಕಂಡ ದುರ್ಯೋಧನನ ಜೀವನದ ಚಿತ್ರಣ ಇದಕ್ಕೆ ಅತ್ಯುತ್ತಮ ಉದಾಹರಣೆ. ಸ್ವಾಭಿಮಾನವೆಂಬುದು ಒಂದು ಪ್ರಬಲವಾದ ಪ್ರೇರಣ ಶಕ್ತಿ. ಹೇಡಿಗಳಾಗದೆ, ದುರ್ಬಲರಾಗದೆ, ಗುಲಾಮರಾಗದೆ, ಕರ್ತವ್ಯ ಶೂನ್ಯರಾಗದೆ ಬದುಕುವುದೇ ಸ್ವಾಭಿಮಾನ. ಸ್ವಾಭಿಮಾನಿಗಳು ಜೀವನದ ಆಪತ್ತು-ವಿಪತ್ತುಗಳಿಗೆ ತತ್ತರಿಸಿ ಅಧೀನರಾಗುವುದಿಲ್ಲ. ಅಂಥವರು ಸೋಲೆಂಬ ಹಾಲಾಹಾಲವನ್ನು ನುಂಗುವ ಪರಿಸ್ಥಿತಿ ಬಂದರೂ ಹೆದರದೆ ಪ್ರಗತಿ ಪಥದಲ್ಲಿ ಸಾಗುತ್ತಾರೆ. ಸ್ವಾಭಿಮಾನಿ ಗಳು ಇಹಲೋಕದಲ್ಲೂ ಸಲ್ಲುವರು, ಪರಲೋಕದಲ್ಲೂ ಸಲ್ಲುವರು. ಇಂತಹ ಜನರು ಬಹುಮುಖೀ ಸಾಧ್ಯತೆಗಳಿಗೆ ತೆರೆದುಕೊಳ್ಳಬಲ್ಲರು. ಸ್ವಾಭಿಮಾನಿಗಳು ಸರಳ ವ್ಯಕ್ತಿಗಳಾಗಿರುತ್ತಾರೆ, ಸಾತ್ವಿಕರಾ ಗಿರುತ್ತಾರೆ, ಸಹೃದಯಿಗಳಾಗಿರುತ್ತಾರೆ. ಆದರ್ಶ ವ್ಯಕ್ತಿಯ ಲ್ಲಿರಬೇಕಾದ ಸಮದೃಷ್ಟಿ, ಪ್ರೇಮದೃಷ್ಟಿ, ವಿಶಾಲದೃಷ್ಟಿ ಎಂಬ ಗುಣ ವಿಶೇಷಗಳು ಇಂಥವರಲ್ಲಿ ಸದಾ ಕಾಣುತ್ತವೆ. ಮುಖಕ್ಕೆ ಮಂದಹಾಸ, ಮಾತಿಗೆ ಮಮತೆ, ಹಣಕ್ಕೆ ಗುಣ, ಸಂಪತ್ತಿಗೆ ಸರಳತೆ, ಅಧಿಕಾರಕ್ಕೆ ಅನುಕಂಪ, ಶಿಕ್ಷಣಕ್ಕೆ ಸಂಸ್ಕಾರ, ವಿದ್ಯೆಗೆ ವಿನಯ, ಬಾಹ್ಯ ಸೌಂದರ್ಯಕ್ಕೆ ಆಂತರಿಕ ಸೌಂದರ್ಯಗಳನ್ನು ಬೆರೆಸಿಕೊಂಡು ಜೀವಿ ಸುವುದು ಇವರ ಸ್ವಭಾವ. ಇನ್ನೊಬ್ಬರ ಬೆಳ್ಳಿ ತಟ್ಟೆಯಲ್ಲಿ ಪಂಚಭಕ್ಷಗಳನ್ನು ಸೇವಿಸುವುದಕ್ಕಿಂತ ಸ್ವಂತದ ಮುತ್ತುಗದೆಲೆಯಲ್ಲಿ ಅನ್ನವನ್ನು ತಿನ್ನುವುದು ರುಚಿಕರ ಎಂಬುದು ಅಂಥವರ ಜೀವನ ಸಿದ್ಧಾಂತ. “ಸ್ವಾತಂತ್ರ್ಯವು ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ’ ಎಂಬ ಸಿಂಹ ಗರ್ಜನೆಯಷ್ಟೇ ಭಯಂಕರವಾದ ತಿಲಕರ ಸ್ವಾಭಿಮಾನದ ಮಾತುಗಳು ಹೊಸ ಕ್ರಾಂತಿಯನ್ನೇ ಬೆಳಕಿಗೆ ತಂದಿತು. ಮಹಾತ್ಮಾ ಗಾಂಧಿಯವರು “ಭಾರತ ಬಿಟ್ಟು ತೊಲಗಿ’ ಎಂದು ಸ್ವಾಭಿಮಾನದಿಂದ ಗಟ್ಟಿಯಾಗಿ ನುಡಿದಾಗ ಬ್ರಿಟಿಷರ ನಿರ್ಗಮನವಾಯಿತು. “ನನ್ನ ಝಾನ್ಸಿಯನ್ನು ಬಿಟ್ಟುಕೊಡಲಾರೆ’ ಎಂಬ ರಾಣಿ ಲಕ್ಷ್ಮೀಬಾಯಿಯ ಸ್ವರದಿಂದ ಸ್ವಾಭಿಮಾನದ ಪ್ರವಾಹ ಹರಿದು ಬಂತು. ರಾಮಕೃಷ್ಣ ಪರಮ ಹಂಸ, ಸ್ವಾಮಿ ವಿವೇಕಾನಂದ, ಮಹರ್ಷಿ ದಯಾನಂದ, ಸ್ವಾಮೀ ರಾಮತೀರ್ಥರಂತಹವರ ಜೀವನ ಚರಿತ್ರೆ ಸ್ವಾಭಿ ಮಾನದ ಶ್ರೇಷ್ಠತೆಯನ್ನು ಸಾರುತ್ತದೆ. ಸ್ವಾಭಿಮಾನದ ಪ್ರಬಲತೆಯನ್ನು ನಂಬಿ ಮನುಷ್ಯ ಕಾರ್ಯ ತತ್ಪರನಾದರೆ ಸುಖ ಪ್ರಾಪ್ತಿ ಸುಲಭವೂ, ಸುಖಕರವೂ ಆಗುವುದರಲ್ಲಿ ಸಂಶಯವಿಲ್ಲ. ಯಾರಲ್ಲಿ ಸ್ವಾಭಿಮಾನವು ಇರುವುದಿಲ್ಲವೋ ಅಂಥವರಲ್ಲಿ ಮಾನವತೆಯೂ ಇರುವುದಿಲ್ಲ. ಸ್ವಾಭಿಮಾನವೆಂ ಬುದು ಒಂದು ಮನೋವೃತ್ತಿ. ಇದನ್ನು ನಮ್ಮ ಬಾಳಿನಲ್ಲಿ ಸೇರಿಸಬಹುದಾದ ವಿಶಿಷ್ಟ ಚೈತನ್ಯ ಎಂದು ಪರಿಭಾವಿಸಿದರೆ ಜೀವನಶೈಲಿ ಸುಂದರವಾಗಿ, ಚೆಲುವಾಗಿ ಕಂಗೊಳಿಸುತ್ತದೆ. ಸ್ವಾಭಿಮಾನವು ಎಲ್ಲರಿಗೆ ಮೈಬಾಗಿಸದೆ, ದೀನತೆಯಿಂದ ಇನ್ನೊಬ್ಬರನ್ನು ಬೇಡದೆ, ಭುಜವನ್ನು ನೇರವಾಗಿ ಇಟ್ಟುಕೊಂಡು ಆತ್ಮವಿಶ್ವಾಸದಿಂದ ಬದುಕಲು ಸಕಲ ರೀತಿಯ ಪ್ರೋತ್ಸಾಹವನ್ನು, ಉತ್ಸಾಹವನ್ನು ಕರುಣಿಸುತ್ತದೆ. ಆದ್ದರಿಂದಲೇ ಜಗದ ಜ್ಞಾನಿಗಳು ಸ್ವಾಭಿಮಾನವನ್ನು ಅಮೃತ ಬಳ್ಳಿಗೆ ಹೋಲಿಸಿ¨ªಾರೆ. ಅತೀ ಸಾಧಾರಣವಾದ ಜೀವನದ ಆದಿಯನ್ನು ಶ್ಲಾಘನೀಯ ಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಸ್ವಾಭಿಮಾನದ ಕೊಡುಗೆ ಅಪಾರ, ಅಗಾಧ. – ಶಿವಾನಂದ ಪಂಡಿತ, ಗೋವಾ