ದಾಂಡೇಲಿ : ನಗರದಲ್ಲಿ ಬಿಡಾಡಿ ದನ ಕರುಗಳ ನಿಯಂತ್ರಣ ಕಷ್ಟಸಾಧ್ಯ ಎನ್ನುವ ಮಟ್ಟಿಗೆ ಏರತೊಡಗಿದೆ. ನಗರದ ಪ್ರಮುಖ ರಸ್ತೆಗಳಲ್ಲೆ ಠಿಕಾಣಿ ಹೂಡುತ್ತಿರುವ ಬಿಡಾಡಿ ದನ ಕರುಗಳಿಂದಾಗಿ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗತೊಡಗಿದೆ.
ಈ ಬಗ್ಗೆ ಸಂಬಂಧಪಟ್ಟ ನಗರ ಸಭೆಯ ಗಮನಕ್ಕೆ ತಂದರೂ ನಗರ ಸಭೆ ಮಾತ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ.
ಇದನ್ನೂ ಓದಿ: ಭಾರತದಲ್ಲಿ 9,765 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಸಂಖ್ಯೆ ಅಲ್ಪ ಹೆಚ್ಚಳ
ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಜೆ.ಎನ್.ರಸ್ತೆಯಲ್ಲಿ ಅತೀ ಹೆಚ್ಚು ವಾಹನಗಳು ಓಡಾಡುತ್ತಿದ್ದು, ಇವುಗಳ ನಡುವೆ ಬಿಡಾಡಿ ದನ ಕರುಗಳು ರಸ್ತೆಯನ್ನೆ ಆಶ್ರಯ ತಾಣವನ್ನಾಗಿಸಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಇನ್ನಾದರೂ ನಗರಾಡಳಿತ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬಹುದೇ ಕಾದು ನೋಡಬೇಕಾಗಿದೆ.