Advertisement

ಸಾಂಪ್ರದಾಯಿಕ ಮೀನುಗಾರಿಕೆಗೆ ಧಕ್ಕೆ: ಅಗತ್ಯ ಕ್ರಮಕ್ಕೆ ಆಗ್ರಹ

08:17 PM Aug 05, 2021 | Team Udayavani |

ಮಲ್ಪೆ: ಒಂದೆಡೆ ಪ್ಲಾಸ್ಟಿಕ್‌ ನಿಷೇಧದ ಚರ್ಚೆಯಾಗುತ್ತಿದ್ದರೆ ಇನ್ನೊಂ ದೆಡೆ ಅದರ ಬಳಕೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಇಂದು ನದಿ ತೀರಗಳಲ್ಲಿ, ಸಮುದ್ರ ದಂಡೆಯಲ್ಲಿ ಪ್ಲಾಸ್ಟಿಕ್‌ ತಾಜ್ಯಗಳು ಅಪಾರ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಮಹಾನಗರಗಳಿಗೆ ಸೀಮಿತವಾಗಿದ್ದ ಸಮುದ್ರ ಮಾಲಿನ್ಯ ಇದೀಗ ಉಡುಪಿ ಜಿಲ್ಲೆಯಲ್ಲೂ ಕಾಡತೊಡಗಿದೆ. ಈ ಬಾರಿ ಮಲ್ಪೆ ಕಡಲ ತೀರದ ಉದ್ದಕ್ಕೂ ಅಗಾಧ ಪ್ರಮಾಣದಲ್ಲಿ ತ್ಯಾಜ್ಯ ರಾಶಿ ಕಂಡು ಬರುತ್ತಿದ್ದು, ದಿನದಿಂದ ದಿನಕ್ಕೆ ಅದರ ಪ್ರಮಾಣ ಹೆಚ್ಚಾಗುತ್ತಿದೆ.

Advertisement

ಜನರು ಚರಂಡಿ, ನದಿಗಳಿಗೆ ಎಸೆಯುವ ಕಸ ನದಿಯ ಮೂಲಕ ಸಮುದ್ರವನ್ನು ಸೇರುತ್ತದೆ. ಸಮುದ್ರದ ಅಲೆಗಳಲ್ಲಿ ಮತ್ತೆ ಅದು ತೀರಕ್ಕೆ ಬಂದು ಸೇರುತ್ತದೆ. ಮಲ್ಪೆ ಬೀಚ್‌ ನಿರ್ವಾಹಕರು ಕೆಲ ದಿನಗಳ ಹಿಂದೆ ಕೇವಲ ಅರ್ಧ ಕಿ. ಮೀ ವ್ಯಾಪ್ತಿಯಲ್ಲಿ ಕಡಲತೀರವನ್ನು ಸ್ವತ್ಛ ಗೊಳಿಸಿದ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಟನ್‌ಗಳಷ್ಟು ಕಸ ಸಂಗ್ರಹ ಮಾಡಿದ್ದಾರೆ. ಇದೀಗ ಮತ್ತೆ ಅಷೇr ಪ್ರಮಾಣದಲ್ಲಿ  ತ್ಯಾಜ್ಯರಾಶಿ ಬಿದ್ದಿದೆ. ಜು. 27ರಂದು ಕೊಳ ಸಮೀಪದ ಕಡಲತೀರದಲ್ಲಿ ಲೋಡುಗಟ್ಟಲೆ ತ್ಯಾಜ್ಯ ಸಂಗ್ರಹವಾಗಿರುವುದು ಕಂಡು ಬಂದಿದೆ.  ಕಸದ ರಾಶಿಯಲ್ಲಿ ತೆಂಗಿನಕಾಯಿ ಸಹಿತ ಕೆಲವೊಂದು ಉಪಯುಕ್ತ ವಸ್ತುಗಳು ಸೇರಿವೆ. ಇದನ್ನು ಕೆಲವರು ಬೆಳ್ಳಂಬೆಳಗ್ಗೆ ಮನೆಗೆ ಕೊಂಡೊಯ್ಯುತ್ತಾರೆ.

ಪ್ಲಾಸ್ಟಿಕ್‌ ಬಾಟಲಿ, ಚಪ್ಪಲಿ ಅಧಿಕ : ಕಡಲತೀರದಲ್ಲಿ ಸಂಗ್ರಹವಾಗುವ ಕಸದ ರಾಶಿಯಲ್ಲಿ ಪ್ಲಾಸ್ಟಿಕ್‌ ಬಾಟಲಿ ಗಳು, ಚಪ್ಪಲಿಯದೇ  ಸಿಂಹಪಾಲು ಉಳಿದಂತೆ ಮದ್ಯದ ಖಾಲಿ ಪ್ಯಾಕೇಟ್‌ಗಳು, ಎಳನೀರು ಸಿಪ್ಪೆ, ಬಾಟಲಿ, ಮದ್ಯದ ಬಾಟಲಿ, ಪ್ಯಾಕೇಟ್‌, ಬಟ್ಟೆಬರೆ, ಬಲೆಗಳು, ರೋಪ್‌ ಗಳು ಸೇರಿಕೊಂಡಿದೆ. ತೀರದ ಉದ್ದಕ್ಕೂ ಹರಡಿಕೊಂಡ ತ್ಯಾಜ್ಯದ ದುರ್ವಾಸನೆಯಿಂದ ಇಲ್ಲಿ  ವಾಕಿಂಗ್‌ ತೆರಳುವವರಿಗೆ ನಡೆದಾಡಲು ಕಷ್ಟ ಎನ್ನಲಾಗುತ್ತಿದೆ. ಸಮುದ್ರ ಪರಿಸರ ಮಾಲಿನ್ಯ ತಡೆಗಟ್ಟಲು ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಪರಿಸರ ಪ್ರಿಯರ ಆಗ್ರಹವಾಗಿದೆ.

ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ಹಲವು ಬಾರಿ ಮೀನಿನ ಜತೆ ರಾಶಿ ರಾಶಿ ಪ್ಲಾಸ್ಟಿಕ್‌ ತ್ಯಾಜ್ಯಗಳು ಬಲೆಗೆ ಬೀಳುತ್ತದೆ. ವಿಷಕಾರಿ ಕಸಗಳಿಂದ ಸಾಂಪ್ರದಾಯಿಕ ಮೀನುಗಾರಿಕೆಗೂ ಧಕ್ಕೆಯಾಗಲಿದೆ. ಮೀನುಗಳು ಈ ಕಸವನ್ನು ತಿಂದರೆ ಮೀನಿನ ಸಂತತಿ ನಾಶವಾಗಬಹುದು. ಹಾಗಾಗಿ ಕಸವನ್ನು ಸಮುದ್ರ ಸೇರಲು ಬಿಡದೆ ನೆಲದಲ್ಲಿಯೇ ವಿಲೇವಾರಿ  ಮಾಡುವ ಹಾಗೆ ಆಡಳಿತ, ಗ್ರಾಮ ಮಟ್ಟದಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ  ಮುಂದಾಗಬೇಕು. ಕೃಷ್ಣ  ಎಸ್‌. ಸುವರ್ಣ,  ಅಧ್ಯಕ್ಷರು ಮಲ್ಪೆ ಮೀನುಗಾರರ ಸಂಘ

ಸಮುದ್ರದಲ್ಲಿನ ಕಸ ಅಲೆಯೊಂದಿಗೆ ತೀರದಲ್ಲಿ ಸಂಗ್ರಹವಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ತೀರದ ಕಸ ವಿಲೇವಾರಿ, ಸ್ವಚ್ಛತೆ ಕಾರ್ಯಗಳು ನಗರಸಭೆ ಆಡಳಿತದ ವ್ಯಾಪ್ತಿಗೆ ಬರುವುದಿಲ್ಲ. ಟೆಂಡರ್‌ ವಹಿಸಿಕೊಂಡ ಬೀಚ್‌ ಅಭಿವೃದ್ಧಿ ಸಮಿತಿ ನೋಡಿಕೊಳ್ಳುತ್ತದೆ. ಸಮಿತಿಯವರು ಸಕಾಲದಲ್ಲಿ  ಕಸ ವಿಲೇವಾರಿಗೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.ಲಕ್ಷ್ಮೀ ಮಂಜುನಾಥ್‌, ನಗರಸಭೆ ಸದಸ್ಯರು, ಕೊಳ ವಾರ್ಡ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next