ಬೆಳ್ತಂಗಡಿ : ರಾಜಕೀಯ ಹಿತಾಸಕ್ತಿ ಬದಿಗೊತ್ತಿ ಸಾಮಾಜಿಕ ಕಳಕಳಿಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಗುತ್ಯಡ್ಕ ಶಾಲೆಗೆ ಭೇಟಿ
ಗುತ್ಯಡ್ಕ ಶಾಲೆ ಮತ್ತು ಅಂಗನವಾಡಿಗೆ ಭೇಟಿ ನೀಡಿದ ಶಾಸಕರು, ಶಾಲಾ ಶಿಕ್ಷಕರ ಜತೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಬಿಜೆಪಿ ಗ್ರಾಮ ಸಮಿತಿಯವರು ಶಾಸಕರಿಗೆ ನೀಡಿದ ಪುಸ್ತಕಗಳನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಮೂಲಕ ಮಕ್ಕಳಿಗೆ ನೀಡಲು ಸೂಚಿಸಿದರು.
ಗ್ರಾ.ಪಂ. ಸದಸ್ಯ ಪ್ರಕಾಶ್‌ಕುಮಾರ್ ಜೈನ್ ಮಾತನಾಡಿ, ಶಾಸಕರೊಬ್ಬರು ವರ್ಷದಲ್ಲಿ ಎರಡು ಸಲ ಕುಗ್ರಾಮಕ್ಕೆ ಭೇಟಿ ನೀಡಿರುವುದು ಇದೇ ಮೊದಲು. ಎಳನೀರಿಗೆ ಮೊಬೈಲ್ ಟವರ್, ವಿದ್ಯುತ್ ಸಂಪರ್ಕ, ರಸ್ತೆ ಅಭಿವೃದ್ಧಿಗೆ ವಿಶೇಷ ಅನು ದಾನ ನೀಡಬೇಕು ಎಂದು ಆಗ್ರಹಿಸಿದರು.
Advertisement
ಎಳನೀರಿನ ಅಂಗನವಾಡಿ ಕೇಂದ್ರದಲ್ಲಿ ಉಜ್ವಲ ಯೋಜನೆ ಫಲಾನುಭವಿ ಗಳಿಗೆ ಗ್ಯಾಸ್ ಕಿಟ್ ವಿತರಿಸಿ ಅವರು ಮಾತನಾಡಿದರು.
Related Articles
Advertisement
ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆಳಾಲ್, ಯುವಮೋರ್ಚಾ ಕಾರ್ಯದರ್ಶಿ ರಕ್ಷಿತ್ ಕಣಿಯೂರು, ವಿಜಯ್ ಬಡಮನೆ, ಹರೀಶ್ ಎಳನೀರ್ ಉಪಸ್ಥಿತ ರಿದ್ದರು. ಪ್ರಕಾಶ್ ಜೈನ್ ಸ್ವಾಗತಿಸಿ, ರತ್ನಾಕರ್ ನಿರೂಪಿಸಿ, ವಂದಿಸಿದರು.
ಎಳನೀರು ಪಂ. ಕ್ಷೇತ್ರಕ್ಕೆ ಒಳಪಟ್ಟ ಬಡಮನೆ ರಸ್ತೆ, ಗುತ್ಯಡ್ಕ ಶಾಲೆ ರಸ್ತೆ, ಕುರೆಕಲ್ ರಸ್ತೆ, ಬಂಗಾರಪಲ್ಕೆ, ಎಳನೀರು ರಸ್ತೆಗಳನ್ನು ಜನರ ಜತೆಯಲ್ಲಿ ಜೀಪ್‌ನಲ್ಲಿ ಸಾಗಿ ವೀಕ್ಷಿಸಿದ ಶಾಸಕ ಹರೀಶ್ ಪೂಂಜ, 2019-20ನೇ ಸಾಲಿನಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿಗೆ 30 ಲಕ್ಷ ರೂ. ಒದಗಿಸಲಾಗುವುದು. ಇಲ್ಲಿಯ ವರೆಗೆ ಒಟ್ಟು 11 ಲಕ್ಷ ರೂ. ಈ ಭಾಗದ ಅಭಿವೃದ್ಧಿಗೆ ನೀಡಲಾಗಿದೆ. ಮಾಧ್ಯಮಗಳು ಈ ಭಾಗದ ಸಮಸ್ಯೆಯನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದಿರು ವುದು ಶ್ಲಾಘನೀಯ. ಬಂಗಾರ ಪಲ್ಕೆ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ ಎಂದರು.
ಸೇತುವೆ ನಿರ್ಮಿಸಲು ಅನುದಾನಕ್ಕೆ ಯತ್ನ