Advertisement

50% ಸ್ಥಳಾವಕಾಶದ ಆದೇಶದಿಂದ ‘ಯುವರತ್ನ’ಕ್ಕೆ ಸಂಕಷ್ಟ: ಆದೇಶ ಹಿಂಪಡೆಯುವಂತೆ ‘ಅಪ್ಪು’ ಮನವಿ

08:01 PM Apr 02, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ಪ್ರಕರಣ ಹೆಚ್ಚಳದ ಹಿನ್ನೆಲೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಶೇ 50 ನಿರ್ಬಂಧಿಸಿ ರಾಜ್ಯ ಸರ್ಕಾರ ನೂತನ ಸುತ್ತೋಲೆ ಹೊರಡಿಸಿದ್ದು, ಇದು ಗುರುವಾರ ತೆರೆಗೆ ಬಂದಿರುವ ಯುವರತ್ನ ಚಿತ್ರಕ್ಕೆ ದೊಡ್ಡ ಆಘಾತ ತಂದೊಡ್ಡಿದೆ.

Advertisement

ಸರ್ಕಾರದ ನೂತನ ಆದೇಶಕ್ಕೆ ಕಳವಳ ವ್ಯಕ್ತಪಡಿಸಿರುವ ಯುವರತ್ನ ಚಿತ್ರದ ನಾಯಕ ನಟ ಪುನೀತ್ ರಾಜಕುಮಾರ್ ಅವರು, ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳ ಭರ್ತಿಗೆ ಅವಕಾಶ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.  ಶುಕ್ರವಾರ ಸಂಜೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಪುನೀತ್‌, ‘ಮಾಲ್‌ಗಳಲ್ಲಿ, ಚಿತ್ರಮಂದಿರಗಳಲ್ಲಿ ಜನರು ಸರ್ಕಾರದ ನಿಯಮಗಳನ್ನು ಪಾಲಿಸಿಯೇ ಸಿನಿಮಾ ನೋಡುತ್ತಿದ್ದಾರೆ. ದಯವಿಟ್ಟು, ನಿರ್ಬಂಧ ಹೇರಬೇಡಿ. ಕನ್ನಡ ಚಿತ್ರರಂಗಕ್ಕೆ ಇದು ಕಷ್ಟವಾಗಲಿದೆ ಎಂದರು.

ನಾವು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ನಮ್ಮ ಪ್ರಯತ್ನಗಳಿಗೆ ಏನಾದರೂ ಸಿಗಬೇಕಾದರೆ ಅದು ಅಭಿಮಾನಿಗಳಿಂದ ಮಾತ್ರ. ಇಂತಹ ಸಂದರ್ಭದಲ್ಲಿ 50% ಸ್ಥಳಾವಕಾಶಕ್ಕೆ ಅನುಮತಿ ನೀಡಿದ್ರೆ ನಮಗೆ ತೊಂದರೆಯಾಗುತ್ತದೆ. ದಯವಿಟ್ಟು 100% ಸೀಟು ಭರ್ತಿಗೆ ಅನುಮತಿ ನೀಡಿ ಎಂದು ಪುನೀತ್ ರಾಜಕುಮಾರ್ ಕೇಳಿಕೊಂಡಿದ್ದಾರೆ.

ಇದೇ ವೇಳೆ ಚಿತ್ರಮಂದಿರಗಳಿಗೆ ತೆರಳುವ ಅಭಿಮಾನಿಗಳಿಗೆ ಕಿವಿ ಮಾತು ಹೇಳಿರುವ ಪುನೀತ್, ಮಾಸ್ಕ್ ಧರಿಸಿ, ಹ್ಯಾಂಡ್ ವಾಶ್ ಮಾಡಿ ಎಂದು ಪ್ರೇಕ್ಷಕರಿಗೆ ಸಲಹೆ ನೀಡಿದ್ದಾರೆ. 45 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆದುಕೊಳ್ಳಿ, ನಾನು ಕೂಡ ಲಸಿಕೆ ತೆಗೆದುಕೊಳ್ಳಲ್ಲಿದ್ದೇನೆ ಎಂದಿದ್ದಾರೆ.

ಬಳಿಕ ಫೇಸ್‍ಬುಕ್ ಲೈವ್‍ನಲ್ಲಿ ಮಾತಾಡಿದ ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಅವರು, ಜನರು ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ಬಂದು ಚಿತ್ರಗಳನ್ನು ನೋಡುತ್ತಿದ್ದಾರೆ. ಎಲ್ಲರೂ ತಮ್ಮ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ 50% ಸೀಟು ಭರ್ತಿಗೆ ಕನ್ನಡ ಚಿತ್ರರಂಗಕ್ಕೆ ತೊಂದರೆಯಾಗಲಿದೆ. ‘ಎಲ್ಲ ಕಡೆ ಚುನಾವಣೆ ರ್‍ಯಾಲಿ ಸೇರಿದಂತೆ ಹಲವು ಚಟುವಟಿಕೆಗಳು  ನಡೆಯುತ್ತಿದೆ. ಇದರ ನಡುವೆ ಸಿನಿಮಾವನ್ನು ಮಾತ್ರ ಗುರಿಯಾಗಿಸಿ ಏಕೆ ನಿರ್ಬಂಧ ಹಾಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಚಿತ್ರಮಂದಿರದೊಳಗೆ ಕೇವಲ 500–600 ಜನರಷ್ಟೇ ಇರುತ್ತಾರೆ. ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಕೊಂಡು ಚಿತ್ರಗಳನ್ನು ನೋಡುತ್ತಿದ್ದಾರೆ. ಧೈರ್ಯವಾಗಿ ಚಿತ್ರಮಂದಿರಕ್ಕೆ ಜನರು ಬರುತ್ತಿದ್ದಾರೆ. ಎರಡೆರಡು ಇಂಟರ್‌ವಲ್‌ಗಳು ಇವೆ. ಏಕಾಏಕಿ ಈ ನಿರ್ಬಂಧ ಹೇರಿರುವುದು, ಉದ್ಯಮ, ಚಿತ್ರರಂಗವನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next