Advertisement
ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಸಮೀಪ, ಮಳೆ ಬಂದಲ್ಲಿ ನೀರು ನಿಂತು ಓಡಾಟಕ್ಕೆ ಇನ್ನಷ್ಟು ಸಮಸ್ಯೆಯಾಗಲಿದೆ. ಎರಡು ತಿಂಗಳ ಹಿಂದೆ ಪೈಪ್ಲೈನ್ ಕಾಮಗಾರಿಗೆ ಇಲ್ಲಿನ ರಸ್ತೆಬದಿಯಲ್ಲಿ ಮಣ್ಣು ಅಗೆಯಲಾಗಿತ್ತು. ಸದ್ಯದ ಮಳೆಗೆ ನೀರು ನಿಂತು ರಸ್ತೆ ಕೆಸರಾಗಿದೆ. ಈ ಹಾಸ್ಟೆಲ್ಗಳಲ್ಲಿ ನೂರಾರು ವಿದ್ಯಾರ್ಥಿಗಳಿದ್ದು, ಬೆಳಗ್ಗೆ-ಸಂಜೆ ಓಡಾಟದ ಸಮಯದಲ್ಲಿ ಸಾಕಷ್ಟು ಸಮಸ್ಯೆ ಪಡುತ್ತಿದ್ದಾರೆ.ಈ ಬಗ್ಗೆ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ವಿದ್ಯಾರ್ಥಿಗಳ ಓಡಾಟಕ್ಕೆ ಸಮಸ್ಯೆಯಾಗದಂತೆ ಕ್ರಮ ಈಗಾಗಲೇ ಇಲ್ಲಿನ ಸಮಸ್ಯೆ ಬಗ್ಗೆ ದೂರು ಬಂದಿದೆ. ದ್ದು, ಪೈಪ್ಲೈನ್ ವ್ಯವಸ್ಥೆ ಮತ್ತು ಮೇಲ್ಮೆ„ಮಣ್ಣು ಪೂರಕವಾಗಿ ಹೊಂದಿಕೊಳ್ಳಲು ಮಳೆಗಾಲ ಮುಗಿಯಬೇಕು. ಮತ್ತೆ ಮಳೆ ಸುರಿದ ಅನಂತರ ಸಮಸ್ಯೆ ಮರುಕಳಿಸಿದ್ದು, ತಾತ್ಕಾಲಿಕ ನೆಲೆಯಲ್ಲಿ ಇದನ್ನು ಮತ್ತೆ ಸರಿಪಡಿಸಿಕೊಡಲಾಗುವುದು. ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿ ವಿದ್ಯಾರ್ಥಿಗಳ ಓಡಾಟಕ್ಕೆ ಸಮಸ್ಯೆಯಾಗದಂತೆ ಹೆಚ್ಚುವರಿ ಗ್ರಿಟ್ ಪೌಡರ್ ಹಾಕಿಸಲಾಗುವುದು.
– ಆರ್.ಪಿ. ನಾಯ್ಕ, ಪೌರಾಯುಕ್ತರು, ಉಡುಪಿ ನಗರಸಭೆ