Advertisement
ಶೈಕ್ಷಣಿಕ ಪ್ರಗತಿ ಮೇಲೆ ಪರಿಣಾಮ: ಆಂಧ್ರದಗಡಿಯಲ್ಲಿರುವ ಜಿಲ್ಲೆಯಲ್ಲಿ ತೆಲುಗು ಪ್ರಾಬಲ್ಯ ಮೊದಲಿನಿಂದಲೂ ಇರುವ ಪರಿಣಾಮ ಜಿಲ್ಲೆಯಲ್ಲಿ ಅನಕ್ಷರಸ್ಥರ ಸಂಖ್ಯೆ ಜಿಲ್ಲೆಯಲ್ಲಿ ಶೇ.28.74 ರಷ್ಟು ಇದ್ದು ಅದರಪರಿಣಾಮ ಜಿಲ್ಲೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿ ಮೇಲೆ ಬಿದ್ದಿದೆ. ಜಿಲ್ಲೆಯ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಹೊರತುಪಡಿಸಿದರೆ ಉಳಿದಂತೆ ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲೂಕುಗಳು ಆಂಧ್ರಪ್ರದೇಶಕ್ಕೆ ಕೂಗಳತೆಯ ದೂರದಲ್ಲಿದ್ದು, ತೆಲುಗು ಪ್ರಾಬಲ್ಯದ ಮಧ್ಯೆ ಕನ್ನಡ ಇಲ್ಲಿ ಮಂಕಾಗಿದ್ದರೂ ಹೇಳ್ಳೋರೂ ಕೇಳ್ಳೋರು ಇಲ್ಲವಾಗಿದೆ.
Related Articles
Advertisement
ಹಳ್ಳ ಹಿಡಿದ ಸಾಕ್ಷರತಾ ಕಾರ್ಯಕ್ರಮ: ಜಿಲ್ಲೆಯಾಗಿ ಚಿಕ್ಕಬಳ್ಳಾಪುರ ಕಳೆದ ಆ.23ಕ್ಕೆ 12 ವರ್ಷ ತುಂಬಿ 13ಕ್ಕೆ ಪದಾರ್ಪಣೆ ಮಾಡುತ್ತಿದೆ. ಆದರೆ ಜಿಲ್ಲೆಯಲ್ಲಿ ವಯಸ್ಕರ ಶಿಕ್ಷಣ ಇಲಾಖೆ ರೂಪಿಸುತ್ತಿರುವ ಸಾಕ್ಷರತಾ ಕಾರ್ಯಕ್ರಮಗಳು ಕೇವಲ ಕಾಟಾಚಾರಕ್ಕೆ ಮಾತ್ರ ಸೀಮಿತವಾಗಿದ್ದು, ಸಮರ್ಪಕವಾಗಿ ಪಾರದರ್ಶಕವಾಗಿ ವಯಸ್ಕರ ಶಿಕ್ಷಣ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯದೇ ಅನಕ್ಷರಸ್ಥರು ಸಾಕ್ಷರರಾಗದೇ ಉಳಿದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಅನಕ್ಷರಸ್ಥರ ಪೈಕಿ ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಚಿಂತಾಮಣಿ ತಾಲೂಕುಗಳು ಮೊದಲಿದ್ದರೆ, ನಂತರ ಸ್ಥಾನದಲ್ಲಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಇದೆ. ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಹಿಂದೆಯೆಲ್ಲಾ ನಡೆದ ವಯಸ್ಕರ ಶಿಕ್ಷಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ವಯಸ್ಕರ ಪರೀಕ್ಷೆಗಳಲ್ಲಿ ಕೂಡ ನಕಲು ಮಾಡಿಸಲಾಗಿದೆ ಎಂಬ ಆರೋಪಗಳು ದೊಡ್ಡ ಮಟ್ಟದಲ್ಲಿ ಕೇಳಿ ಬಂದಿದೆ.
ಯಥಾಸ್ಥಿತಿ: ಜಿಲ್ಲೆಯಲ್ಲಿ ಅನಕ್ಷಸ್ಥರಿಗೆ ಕನಿಷ್ಠ ಸಹಿ ಮಾಡುವುದರ ಜೊತೆಗೆ ಓದು ಬರಹ ಬರೆಯುವ ರೀತಿಯಲ್ಲಿ ಸಾಕ್ಷರರನ್ನು ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಾರ್ಷಿಕ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದರೂ ಗಡಿ ಜಿಲ್ಲೆಯ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಯಾವುದೇ ಪರಿಣಾಮ ಬೀರದೆ ಅನಕ್ಷರಸ್ಥರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುವುದರ ಬದಲು ಯಥಾಸ್ಥಿತಿ ಇದೆ.
ಅದರ ಪರಿಣಾಮ ಜಿಲ್ಲೆಯ ಒಟ್ಟಾರೆ ಪ್ರಗತಿ, ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರುತ್ತಿದೆಯೆಂಬ ಆರೋಪ ಪ್ರಜ್ಞಾವಂತ ನಾಗರಿಂದ ಕೇಳಿ ಬರುತ್ತಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಿಲ್ಲೆಯ ಅನಕ್ಷರಸ್ಥರಿಗೆ ಕನಿಷ್ಠ ಕನ್ನಡ ಓದು, ಬರಹ ಬರೆಯುವ ರೀತಿಯಲ್ಲಿ ಅವರಲ್ಲಿನ ಅಕ್ಷರದ ಹಸಿವನ್ನು ನೀಗಿಸು ಕೆಲಸವನ್ನು ರಾಜ್ಯೋತ್ಸವದ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಲಿ ಎನ್ನುವುದು ಕನ್ನಡ ಪ್ರೇಮಿಗಳ ಆಶಯವಾಗಿದೆ.
-ಕಾಗತಿ ನಾಗರಾಜಪ್ಪ