Advertisement

34ನೇ ನೆಕ್ಕಿಲಾಡಿ ಗ್ರಾ.ಪಂ. ಸದಸ್ಯೆಯಿಂದ ವಾರ್ಡ್‌ ಸಮಸ್ಯೆಗಳ ಪಟ್ಟಿ

01:20 AM Jun 09, 2019 | sudhir |

ಉಪ್ಪಿನಂಗಡಿ : ಇತ್ತೀಚೆಗೆ ನಡೆದ 34ನೇ ನೆಕ್ಕಿಲಾಡಿ ಗ್ರಾ.ಪಂ.ನ ವಾರ್ಡ್‌ ನಂ. 2ರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾದ ಅನಿ ಮಿನೇಜಸ್‌ ಅವರು ತನ್ನ ವಾರ್ಡ್‌ನಲ್ಲಿ ಸಂಚರಿಸಿ ಅಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿದರು.

Advertisement

ತನ್ನ ವಾರ್ಡ್‌ನ ವ್ಯಾಪ್ತಿಗೊಳಪಟ್ಟ ಸುಭಾಷ್‌ನಗರ, ಕರ್ವೇಲು ಹಾಗೂ ಮತ್ತಿತರ ಕಡೆ ಜೂ. 7 ಮತ್ತು 8ರಂದು ಭೇಟಿ ನೀಡಿ, ಅಲ್ಲಿನ ಜನರೊಂದಿಗೆ ಚರ್ಚಿಸಿ ಅಲ್ಲಿನವರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ತನ್ನ ವಾರ್ಡ್‌ನ ಜನರ ಸಮಸ್ಯೆಗಳನ್ನು ತಾನು ಆಲಿಸಿದ್ದು, ಇಲ್ಲಿ ಮುಖ್ಯವಾಗಿ ಚರಂಡಿ ಹಾಗೂ ದಾರಿ ದೀಪದ ಬೇಡಿಕೆ ಜನರಿಂದ ಬಂದಿದೆ. ಇನ್ನು ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆ ಇದೆ. ಇನ್ನು ಕೆಲವು ಕಡೆ ಹೆಚ್ಚು ಬಜೆಟ್‌ನ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿಗಳು ನಡೆಯಬೇಕಾಗಿದೆ. ಜೂ. 10ರಂದು 34ನೇ ನೆಕ್ಕಿಲಾಡಿಯ ಗ್ರಾ.ಪಂ. ಸಾಮಾನ್ಯ ಸಭೆ ನಡೆಯಲಿದ್ದು, ಈ ಸಂದರ್ಭ ನನ್ನ ವಾರ್ಡ್‌ಗೆ ತುರ್ತಾಗಿ ಬೇಕಾದ ಚರಂಡಿ, ದಾರಿದೀಪ ಹಾಗೂ ಕುಡಿಯುವ ನೀರಿಗೆ ಬೇಡಿಕೆ ಮಂಡಿಸುತ್ತೇನೆ. ಇನ್ನು ಹೆಚ್ಚು ಬಜೆಟ್‌ನ ದೊಡ್ಡ ಕಾಮಗಾರಿಗಳನ್ನು ಕ್ರಿಯಾ ಯೋಜನೆಗೆ ಇಟ್ಟು ಮಂಜೂರಾತಿ ಪಡೆದುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಗ್ರಾ.ಪಂ. ಸದಸ್ಯೆಯಾಗಿ ತನಗಿರುವ ಅಲ್ಪ ಅವಧಿಯಲ್ಲಿ ವಾರ್ಡ್‌ನ ಜನರಿಗೆ ತನ್ನಿಂದಾ ದಷ್ಟು ಸೇವೆ ನೀಡಬೇಕೆನ್ನುವ ಇರಾದೆಯಿದೆ. ಈ ವಾರ್ಡ್‌ ನಲ್ಲಿ ಕೆಲವರು ಅರ್ಹರಿದ್ದರೂ ಅವರಿಗೆ ಸರಕಾರಿ ಸೌಲಭ್ಯಗಳು ತಲುಪಿಲ್ಲ. ಅದನ್ನು ತೆಗೆಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.

34ನೇ ನೆಕ್ಕಿಲಾಡಿ ಗ್ರಾ.ಪಂ. ಸದಸ್ಯ ಬಾಬು, ಕಾಂಗ್ರೆಸ್‌ನ ಸುಭಾಷ್‌ನಗರ ವಾರ್ಡ್‌ ಅಧ್ಯಕ್ಷ ಶಾಹುಲ್ ಹಮೀದ್‌, ಸ್ಥಳೀಯರಾದ ಶರೀಫ್, ರಝಾಕ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next