Advertisement

ಕೆ-ಟಿಇಟಿ ಕೇಂದ್ರದಲ್ಲಿ ಗೊಂದಲ

01:03 AM Feb 04, 2019 | |

ಬೆಂಗಳೂರು: ರಾಜಧಾನಿ ಬೆಂಗಳೂರು, ಶಿವಮೊಗ್ಗ, ರಾಮನಗರ, ಮೊದಲಾದ ಜಿಲ್ಲೆಗಳಲ್ಲಿ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಉಂಟಾದ ಗೊಂದಲ ಹೊರತುಪಡಿಸಿ ರಾಜ್ಯಾದ್ಯಂತ ಭಾನುವಾರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆ-ಟಿಇಟಿ) ಯಶಸ್ವಿಯಾಗಿ ನಡೆದಿದೆ. ಮಂಡ್ಯ, ರಾಮನಗರ, ಶಿವಮೊಗ್ಗ, ಬೆಂಗಳೂರು, ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಯ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಕೊಠಡಿ ಸಮಸ್ಯೆ, ನಿರ್ದಿಷ್ಟ ಸಮಯದಲ್ಲಿ ಸೌಲಭ್ಯ ನೀಡದೆ ಇರುವುದು ಹಾಗೂ ಪಟ್ಟಿಯಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿನ ಹೆಸರಿನ ವ್ಯತ್ಯಾಸದಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅರ್ಧಗಂಟೆ ಹೆಚ್ಚುವರಿಯಾಗಿ ನೀಡಲಾಗಿತ್ತು.

Advertisement

2.39 ಲಕ್ಷ ಅಭ್ಯರ್ಥಿಗಳು ಹಾಜರು: 2,60,073 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 2,39,726 ಅಭ್ಯರ್ಥಿಗಳು ಹಾಜರಾಗಿದ್ದರೆ 20,347 ಮಂದಿ ಗೈರಾಗಿದ್ದಾರೆ. ಪ್ರಥಮ ಪತ್ರಿಕೆಗೆ 87,166 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು 79,151 ಮಂದಿ ಹಾಜರಾ ಗಿದ್ದು, 8,015 ಮಂದಿ ಗೈರಾಗಿದ್ದರು. ದ್ವಿತೀಯ ಪತ್ರಿಕೆಗೆ ನೋಂದಣಿ ಮಾಡಿಕೊಂಡಿದ್ದ 1,72,907 ಅಭ್ಯರ್ಥಿಗಳಲ್ಲಿ 1,60,575 ಹಾಜರಾಗಿ, 12,332 ಮಂದಿ ಗೈರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next