Advertisement

ಮಲ್ಯ ಆಸ್ತಿ ಜಪ್ತಿಗೆ ಅವಕಾಶ ನೀಡಿ

06:00 AM Jun 23, 2018 | Team Udayavani |

ಮುಂಬೈ/ನವದೆಹಲಿ: ಸಾಲ ಮಾಡಿ ದೇಶಬಿಟ್ಟು ಓಡಿ ಹೋಗಿರುವ ಕಿಂಗ್‌ಫಿಶರ್‌ ಉದ್ಯಮಿ ವಿಜಯ್‌ ಮಲ್ಯ ಅವರನ್ನು ದೇಶಭ್ರಷ್ಟ ಅಪರಾಧಿ ಎಂದು ಘೋಷಿಸುವಂತೆ ಮನವಿ ಮಾಡಿರುವ ಜಾರಿ ನಿರ್ದೇಶನಾಲಯ ಶುಕ್ರವಾರ ಮುಂಬೈನ ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

Advertisement

ಇತ್ತೀಚೆಗಷ್ಟೇ ಹೊರಡಿಸಲಾಗಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ಸುಗ್ರೀ ವಾಜ್ಞೆಯ ಬಲವನ್ನು ಬಳಸಿ ಕೊಂಡಿರುವ ಜಾರಿ ನಿರ್ದೇಶಾನಲಯ ಇದೇ ಮೊದಲ ಬಾರಿಗೆ ವಿಜಯ್‌ ಮಲ್ಯ ವಿರುದ್ಧ ಇಂಥ ದ್ದೊಂದು ಕಠಿಣ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ, ಮಲ್ಯ ಅವರ 12,500 ಕೋಟಿ ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡುವಂತೆಯೂ ಕೋರ್ಟ್‌ಗೆ ಮನವಿ ಮಾಡಲಾಗಿದೆ. ವಿಜಯ್‌ ಮಲ್ಯ ಮಾಲೀಕತ್ವದಲ್ಲಿರುವ ಆಸ್ತಿ ಪಾಸ್ತಿ ಬಗ್ಗೆ ಈಗಾಗಲೇ ಲೆಕ್ಕ ಹಾಕಲಾಗಿದ್ದು, ಒಟ್ಟಾರೆಯಾಗಿ 12,500 ಕೋಟಿ ರೂ. ಮೌಲ್ಯವಿದೆ ಎಂದು ಗೊತ್ತಾಗಿದೆ. ಮಲ್ಯ 9 ಸಾವಿರ ಕೋಟಿ ರೂ. ಸಾಲ ಮಾಡಿ ಓಡಿ ಹೋಗಿದ್ದಾರೆ. ಹೀಗಾಗಿ ಸಾಲ ಚುಕ್ತಾ ಮಾಡಿಕೊಳ್ಳುವ ಸಲುವಾಗಿ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಬೇಕಾಗಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಿದೆ. ಇದಕ್ಕೆ ಪೂರಕವಾಗಿ ಜಾರಿ ನಿರ್ದೇಶ ನಾಲಯವು ಎರಡು ಚಾರ್ಜ್‌ಶೀಟ್‌ಗಳನ್ನೂ ಸಲ್ಲಿಸಿದೆ.

ನೀರವ್‌ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌?: ಇನ್ನೊಂದೆಡೆ, ಬ್ಯಾಂಕುಗಳಿಗೆ ವಂಚನೆ ಮಾಡಿ ಪರಾರಿಯಾಗಿರುವ ಮತ್ತೂಬ್ಬ ಉದ್ಯಮಿ ನೀರವ್‌ ಮೋದಿ ವಿರುದ್ಧ ಇಂಟರ್‌ಪೋಲ್‌ ಸದ್ಯದಲ್ಲೇ ರೆಡ್‌ಕಾರ್ನರ್‌ ನೋಟಿಸ್‌ ಹೊರಡಿಸುವ ಸಾಧ್ಯತೆಯಿದೆ. ಈಗಾಗಲೇ ನೋಟಿಸ್‌ ಜಾರಿಗೆ ಕೋರಿ ಸಿಬಿಐ ಅನೇಕ ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದು, ಅವುಗಳ ಪರಿಶೀಲನೆ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next