Advertisement

Congress: ಸಂಭಾವ್ಯ ಅಭ್ಯರ್ಥಿ: ವೀಕ್ಷಕರ ನೇಮಕ

10:46 PM Sep 23, 2023 | Team Udayavani |

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿರುವ ಆಡಳಿತಾರೂಢ ಕಾಂಗ್ರೆಸ್‌, ಸಂಭವನೀಯ ಅಭ್ಯರ್ಥಿಗಳ ಮಾಹಿತಿ ಸಂಗ್ರಹಕ್ಕೆ ಪ್ರತಿ ಲೋಕಸಭಾ ಕ್ಷೇತ್ರಕ್ಕೂ ಸಚಿವರನ್ನು ವೀಕ್ಷಕರನ್ನಾಗಿ ನೇಮಿಸಿದೆ.

Advertisement

ಕ್ಷೇತ್ರ ವ್ಯಾಪಿ ಪ್ರವಾಸ ಮಾಡಿ ಪಕ್ಷದ ಎಲ್ಲ ಹಂತಗಳ ಮುಖಂಡರನ್ನು ಸಂಪರ್ಕಿಸಿ ಸಭೆಗಳನ್ನು ಏರ್ಪಡಿಸಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವೀಕ್ಷಕರಾಗಿ ನೇಮಕಗೊಂಡಿರುವ ಕ್ಷೇತ್ರ ಹಾಗೂ ಸಚಿವರ ವಿವರ ಕೆಳಗಿನಂತಿದೆ.
ದ.ಕ.- ಮಧು ಬಂಗಾರಪ್ಪ, ಉಡುಪಿ- ಚಿಕ್ಕಮಗಳೂರು- ಮಂಕಾಳ ವೈದ್ಯ, ಉತ್ತರ ಕನ್ನಡ-ಎಚ್‌.ಕೆ. ಪಾಟೀಲ್‌. ಬಾಗಲಕೋಟೆ- ಪ್ರಿಯಾಂಕ್‌ ಖರ್ಗೆ, ಬೆಂಗಳೂರು ಕೇಂದ್ರ-ಎನ್‌. ಎಸ್‌. ಬೋಸರಾಜ್‌, ಬೆಂಗಳೂರು ಉತ್ತರ- ಡಾ| ಜಿ.ಪರಮೇಶ್ವರ, ಬೆಂ.ಗ್ರಾಮಾಂತರ- ಕೆ.ವೆಂಕಟೇಶ್‌, ಬೆಂಗಳೂರು ದಕ್ಷಿಣ-ಡಾ| ಶರಣ ಪ್ರಕಾಶ್‌ಪಾಟೀಲ್‌, ಬೆಳಗಾವಿ- ಶಿವರಾಜ್‌ ತಂಗಡಗಿ, ಕಲಬುರಗಿ- ಬಿ.ನಾಗೇಂದ್ರ, ಬೀದರ್‌- ಸಂತೋಷ್‌ ಲಾಡ್‌,

ವಿಜಯಪುರ- ಸತೀಶ್‌ ಜಾರಕಿಹೊಳಿ, ಚಾಮರಾಜನಗರ- ದಿನೇಶ್‌ ಗುಂಡೂರಾವ್‌, ಚಿಕ್ಕಬಳ್ಳಾಪುರ- ಜಮೀರ್‌ ಅಹ್ಮದ್‌ ಖಾನ್‌, ಚಿಕ್ಕೋಡಿ- ಡಿ.ಸುಧಾಕರ್‌, ಚಿತ್ರದುರ್ಗ- ಡಾ| ಎಚ್‌.ಸಿ. ಮಹದೇವಪ್ಪ, ದಾವಣಗೆರೆ- ಈಶ್ವರ ಖಂಡ್ರೆ, ಧಾರವಾಡ- ಲಕ್ಷ್ಮೀ ಹೆಬ್ಟಾಳ್ಕರ್‌, ಬಳ್ಳಾರಿ- ಶಿವಾನಂದ ಪಾಟೀಲ್‌, ಹಾಸನ- ಚಲುವರಾಯ ಸ್ವಾಮಿ, ಹಾವೇರಿ- ಎಸ್‌. ಎಸ್‌. ಮಲ್ಲಿಕಾರ್ಜುನ, ಕೋಲಾರ- ರಾಮಲಿಂಗಾ ರೆಡ್ಡಿ, ಕೊಪ್ಪಳ- ಆರ್‌. ಬಿ.ತಿಮ್ಮಾಪುರ, ಮಂಡ್ಯ ಡಾ| ಎಂ.ಸಿ. ಸುಧಾಕರ್‌, ಮೈಸೂರು- ಬಿ.ಎಸ್‌.ಸುರೇಶ್‌, ರಾಯಚೂರು- ಕೆ.ಎಚ್‌.ಮುನಿಯಪ್ಪ, ಶಿವಮೊಗ್ಗ-ಕೆ.ಎನ್‌.ರಾಜಣ್ಣ, ತುಮಕೂರು- ಕೃಷ್ಣಬೈರೇಗೌಡ.

Advertisement

Udayavani is now on Telegram. Click here to join our channel and stay updated with the latest news.

Next