Advertisement

ದಕ್ಷಿಣದಲ್ಲಿ ಪರ-ವಿರುದ್ಧ ಟ್ವೀಟ್‌ ಸರಣಿ

11:43 AM Mar 27, 2019 | Team Udayavani |

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸೀಟು ಹಂಚಿಕೆಯ ನಂತರ ಆಕಾಂಕ್ಷಿಗಳಲ್ಲಿ ಮೊದಲನೆಯವರಾಗಿದ್ದ ತೇಜಸ್ವಿನಿ ಅನಂತಕುಮಾರ್‌ ಅವರು, ಟಿಕೆಟ್‌ ಕೈತಪ್ಪಿದ ಮೇಲೂ ಪಕ್ಷ, ಸಿದ್ಧಾಂತಗಾಗಿ ದುಡಿಯುವೆ, ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದು ಟ್ವೀಟ್‌ ಮಾಡಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Advertisement

ಇದೇ ವೇಳೆ ಬಿಜೆಪಿ ಅಧಿಕೃತ ಅಭ್ಯರ್ಥಿ ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿ, ಓ ದೇವರೆ! ನನಗೆ ಇದನ್ನು ನಂಬಲು ಸಾಧ್ಯವಿಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿ ಹಾಗೂ ಅತಿದೊಡ್ಡ ರಾಜಕೀಯ ಪಕ್ಷದ ರಾಷ್ಟ್ರಾಧ್ಯಕ್ಷರು 28 ವರ್ಷದ ಯುವಕನ ಮೇಲೆ ನಂಬಿಕೆ ಇಟ್ಟು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡಿದ್ದಾರೆ. ಇದು ನನ್ನ ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಇದು ನರೇಂದ್ರ ಮೋದಿಯವರ ನವ ಭಾರತ ಎಂದು ಟ್ವೀಟ್‌ ಮಾಡಿದರು.

ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ ಸುಮಾರು ಒಂದು ಗಂಟೆಯ ಬಳಿಕ ತೇಜಸ್ವಿನಿ ಅನಂತಕುಮಾರ್‌ ಅವರು ಟ್ವೀಟ್‌ ಮಾಡಿ “ನಾನು ನನ್ನೆಲ್ಲ ಕಾರ್ಯಕರ್ತರು, ಸ್ನೇಹತರು ಹಾಗೂ ಹಿತೈಷಿಗಳಲ್ಲಿ ಬೇಡಿಕೊಳ್ಳುತ್ತೇನೆ. ಏನೇ ಭಿನ್ನಾಭಿಪ್ರಾಯಗಳು ಇದ್ದರೂ ನಾವೆಲ್ಲರೂ ಒಂದು ಸಿದ್ಧಾಂತಕ್ಕೆ ಬದ್ಧರಾಗಿರುವವರು ಮತ್ತು ಅದಕ್ಕಾಗಿ ಕೆಲಸ ಮಾಡುವವರು, ಮೋದಿಮತ್ತೂಮ್ಮೆ’ ಎಂದರು.

ಇದಾದ ನಂತರ ಅವರು ದಿನಪೂರ್ತಿ ಒಂದೇ ಒಂದು ಟ್ವೀಟ್‌ ಮಾಡಿರಲಿಲ್ಲ. ತೇಜಸ್ವಿಯವರು ಮೇಲಿಂದ ಮೇಲೆ ಟ್ವೀಟ್‌ ಮಾಡಿದ್ದು ಮಾತ್ರವಲ್ಲ, ಅವರ ಪರವಾಗಿ ಟ್ವೀಟ್‌ ಮಾಡಿದವರಿಗೆ ಧನ್ಯವಾದಗಳನ್ನು ಹೇಳುತ್ತಿದ್ದರು. ಇನ್ನು ಟ್ವಿಟ್ಟರ್‌, ಫೇಸ್‌ಬುಕ್‌ ಮೊದಲಾದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಅತ್ಛರಿ ಆಯ್ಕೆಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ತೇಜಸ್ವಿ ಸೂರ್ಯ ಅವರನ್ನು ಬೆಂಬಲಿಸಿದ್ದರೆ ಕೆಲವರು ವಿರೋಧವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next