Advertisement
ಶುಕ್ರವಾರ ನಡೆಯುವ ಫೈನಲ್‌ನಲ್ಲಿ ಅದು ಇನ್ನೊಂದು ಬಲಿಷ್ಠ ತಂಡವಾದ ಕ್ಯಾಲಿಕಟ್ ಹೀರೋಸ್ ವಿರುದ್ಧ ಸೆಣಸಲಿದೆ.ಲೀಗ್ ಹಂತದ ತೃತೀಯ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದ್ದ ಚೆನ್ನೈ, ಬುಧವಾರದ ಸೆಮಿಫೈನಲ್‌ನಲ್ಲಿ ತೀವ್ರ ಪೈಪೋಟಿಯ ಮೊದಲ ಸೆಟ್ ಗೆದ್ದು ಶುಭಾರಂಭ ಮಾಡಿತು (16-14). ಬಳಿಕ ಮುಂದಿನೆರಡು ಸೆಟ್‌ಗಳನ್ನು 9-15, 10-15 ಅಂತರದಿಂದ ಕಳೆದುಕೊಂಡಿತು. ಆಗ ಕೊಚ್ಚಿಯ ಫೈನಲ್ ಬಹುತೇಕ ಖಚಿತವಾಗಿತ್ತು. ಆದರೆ ಚೆನ್ನೈ ಕೊನೆಯ 2 ಸೆಟ್‌ಗಳಲ್ಲಿ ತಿರುಗಿ ಬಿದ್ದು 15-8, 15-13 ಅಂತರದ ಮೇಲುಗೈ ಸಾಧಿಸಿ ಕೊಚ್ಚಿಯನ್ನು ಹೊರದಬ್ಬಿಯೇ ಬಿಟ್ಟಿತು.