Advertisement

ಪ್ರದೀಪ್‌ ಪರಾಕ್ರಮ; ಪಾಟ್ನಾ ಜಯಭೇರಿ

06:00 AM Nov 22, 2018 | Team Udayavani |

ಅಹ್ಮದಾಬಾದ್‌: ಪ್ರೊ ಕಬಡ್ಡಿ 6ನೇ ಆವೃತ್ತಿ ಅಹ್ಮದಾಬಾದ್‌ ಚರಣದ ಬುಧವಾರದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ 45-27 ಅಂಕಗಳ ಅಂತರದಿಂದ ತಮಿಳ್‌ ತಲೈವಾಸ್‌ಗೆ ಆಘಾತ ನೀಡಿದೆ. ಇದು ಪಾಟ್ನಾಗೆ 13 ಪಂದ್ಯಗಳಲ್ಲಿ ಒಲಿದ 7ನೇ ಜಯ. ತಮಿಳ್‌ 13ರಲ್ಲಿ ಎಂಟನ್ನು ಸೋತು “ಬಿ’ ವಲಯದ ಕೆಳ ಸ್ಥಾನದಲ್ಲೇ ಉಳಿಯಿತು. 

Advertisement

ದಿನದ ಇನ್ನೊಂದು ಪಂದ್ಯದಲ್ಲಿ ಗುಜರಾತ್‌ ತಂಡ ಯು ಮುಂಬಾವನ್ನು 39-35 ಅಂತರದಿಂದ ಮಣಿಸಿತು. ಟ್ರಾನ್ಸ್‌ಸ್ಟೇಡಿಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಟ್ನಾದ ಪರಾಕ್ರಮಿಗಳಾದ ಪ್ರದೀಪ್‌ ನರ್ವಾಲ್‌ (13 ಅಂಕ), ದೀಪಕ್‌ ನರ್ವಾಲ್‌ (10 ಅಂಕ) ರೈಡಿಂಗ್‌ನಿಂದ ಎದುರಾಳಿಯ ಕೋಟೆಯನ್ನು ನುಚ್ಚುನೂರು ಮಾಡಿದರು. ಇವರಿಬ್ಬರು ರೌಡಿಂಗ್‌ನಿಂದ ಅಬ್ಬರಿಸುತ್ತಿದ್ದರೆ ಮನ್‌ಜಿàತ್‌ (8 ಅಂಕ) ಆಲ್‌ರೌಂಡ್‌ ಆಟದ ಮೂಲಕ ಗಮನ ಸೆಳೆದರು. ಮನ್‌ಜಿತ್‌ ರೈಡಿಂಗ್‌ನಿಂದ 5 ಅಂಕ ಹಾಗೂ ಟ್ಯಾಕಲ್‌ನಿಂದ 3 ಅಂಕ ಪಡೆದರು.

ತಮಿಳ್‌ ತಲೈವಾಸ್‌ ಗೆಲ್ಲಬೇಕಿದ್ದ ಮಹತ್ವದ ಪಂದ್ಯದಲ್ಲಿ ಸೋಲು ಕಂಡಿತು. ತಂಡದ ತಾರಾ ಆಟಗಾರ ಅಜಯ್‌ ಠಾಕೂರ್‌ (8 ಅಂಕ) ಅವರೇನೋ ಮಿಂಚಿದರು. ಅನುಭವಿ ಮಂಜಿತ್‌ ಚಿಲ್ಲರ್‌ 5 ಅಂಕ ಗಳಿಸಲಷ್ಟೇ ಶಕ್ತರಾದರು. ಮಂಗಳವಾರದ ಪಂದ್ಯದಲ್ಲಿ ತಲೈವಾಸ್‌ 27-23 ಅಂಕಗಳ ಅಂತರದಿಂದ  ಟೈಟಾನ್ಸ್‌ಗೆ ಸೋಲುಣಿಸಿ ಲಯ ಕಂಡಿತ್ತು. ಆದರೆ ಪಾಟ್ನಾ ವಿರುದ್ಧ ತಮಿಳರ ಆಟ ನಡೆಯಲಿಲ್ಲ.

ಇಂದಿನ ಪಂದ್ಯ 
ಗುಜರಾತ್‌ – ಹರ್ಯಾಣ ಸ್ಟೀಲರ್
ಸ್ಥಳ: ಅಹ್ಮದಾಬಾದ್‌ 
ಆರಂಭ: ರಾತ್ರಿ 8.00

Advertisement

Udayavani is now on Telegram. Click here to join our channel and stay updated with the latest news.

Next