Advertisement

ತಲೈವಾಸ್‌ -ಯೋಧಾ ಮುಖಾಮುಖೀ

03:34 AM Aug 07, 2019 | sudhir |

ಪಾಟಲಿಪುತ್ರ (ಬಿಹಾರ): ಪ್ರೊ ಕಬಡ್ಡಿ ಲೀಗ್‌ನ ಬುಧವಾರದ ಮೊದಲ ಪಂದ್ಯದಲ್ಲಿ ಬಲಿಷ್ಠ ತಮಿಳ್‌ ತಲೈವಾಸ್‌ ಮತ್ತು ಯುಪಿ ಯೋಧಾ ಮುಖಾಮುಖೀಯಾದರೆ, ದಿನದ ಎರಡನೇ ಪಂದ್ಯದಲ್ಲಿ ಪಾಟ್ನಾ ಮತ್ತು ಹರ್ಯಾಣ ಪರಸ್ಪರ ಸೆಣಸಾಡಲಿವೆ.

Advertisement

ಪ್ರೊ ಕಬಡ್ಡಿಯ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ತಮಿಳ್‌ ತಲೈವಾಸ್‌ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫ‌ಲವಾಗಿದೆ. ಅಜಯ್‌ ಠಾಕುರ್‌, ಮನ್‌ಜಿತ್‌ ಚಿಲ್ಲರ್‌, ರಾಹುಲ್‌ ಚೌದರಿ, ಶಬ್ಬಿರ್‌ ಬಾಪು ಅವರಂ ತಹ ಸ್ಟಾರ್‌ ಮತ್ತು ಅನುಭವಿ ಆಟಗಾರರಿದ್ದರೂ ತಂಡ ಆಡಿದ 4 ಪಂದ್ಯದಲ್ಲಿ 2 ಪಂದ್ಯ ದಲ್ಲಿ ಗೆಲುವು ದಾಖಲಿಸಲು ಯಶಸ್ವಿಯಾಗಿದೆ.

ತಂಡದ ಆರಂಭ ಉತ್ತಮವಾಗಿ ಸಾಗಿ ಮುನ್ನಡೆ ಸಾಧಿಸಿಕೊಂಡರೂ ಅದೇ ಉತ್ಸಾಹವನ್ನು ಕೊನೆತನಕವೂ ಉಳಿಸಿಕೊಳ್ಳಲು ವಿಫ‌ಲವಾಗುತ್ತಿದೆ. ಕೊನೆಯ ಹಂತದಲ್ಲಿ ಕೆಲವು ತಪ್ಪುಗಳಿಂದ ತಲೈವಾಸ್‌ ಸೋಲನುಭವಿಸುತ್ತಿದೆ. ಈ ತಪ್ಪನ್ನು ತಿದ್ದಿಕೊಂಡಲ್ಲಿ ಗೆಲುವು ನಿಶ್ಚಿತ.

ಇದೇ ವೇಳೆ ಯುಪಿ. ಯೋಧಾ ತಂಡದ ಸ್ಥಿತಿ ಶೋಚನೀಯ ವಾಗಿದೆ. ಆಡಿದ 4 ಪಂದ್ಯದಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಗೆದ್ದಿದೆ. ತಂಡದಲ್ಲಿ ರಿಷಾಂಕ್‌ ದೇವಾಡಿಗ, ಮೋನು ಗೋಯತ್‌ ಪದೇ ಪದೇ ವಿಫ‌ಲವಾಗುತ್ತಿರುವುದು ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ತಂಡವು ನಾಯಕ ನಿತೇಶ್‌ ಕುಮಾರ್‌ ಅವರ ಟ್ಯಾಕಲ್‌ ಬಲದ ಮೇಲೆ ನಿಂತಿದೆ. ಬಲಾಬಲದ ಲೆಕ್ಕಾಚಾರದಲ್ಲಿ ತಮಿಳ್‌ ತಲೈವಾಸ್‌ಗೆ ಹೆಚ್ಚಿನ ಅವಕಾಶ ಎನ್ನಲಡ್ಡಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next