Advertisement
ಇದುವರೆಗೆ 7 ಪಂದ್ಯವಾಡಿರುವ ಬೆಂಗಳೂರು 3ನೇ ಸೋಲನುಭವಿಸಿದೆ. ಆದರೆ 22 ಅಂಕ ಗಳಿಸಿ ದ್ವಿತೀಯ ಸ್ಥಾನ ಉಳಿಸಿಕೊಂಡಿದೆ. ಇನ್ನೊಂದು ಕಡೆ ಯುಪಿ ಯೋಧಾಗೆ 7 ಪಂದ್ಯಗಳಲ್ಲಿ ಒಲಿದ 2ನೇ ಜಯ ಇದಾಗಿದೆ. ಮೂರರಲ್ಲಿ ಸೋತಿದ್ದರೆ, 2 ಪಂದ್ಯ ಟೈಗೊಂಡಿದೆ.
ಬೆಂಗಳೂರು ತಂಡದ ಸೋಲಿಗೆ ಮುಖ್ಯ ಕಾರಣ ನಾಯಕ ರೋಹಿತ್ ಕುಮಾರ್ ಅವರ ತೀವ್ರ ವೈಫಲ್ಯ. ಅವರು 13 ಬಾರಿ ದಾಳಿ ನಡೆಸಿದರೂ ಯಶಸ್ಸು ಕಂಡಿದ್ದು ಕೇವಲ 3 ಬಾರಿ. ಗಳಿಸಿದ ಅಂಕ 4. ರವಿವಾರ ಹೇಳಿಕೊಳ್ಳುವಂತಹ ಯಶಸ್ಸು ಸಾಧಿಸದ ಪವನ್ ಸೆಹ್ರಾವತ್, ಸೋಮವಾರ ತಮ್ಮ ಎಂದಿನ ಲಯಕ್ಕೆ ಮರಳಿದರು. ಅವರ ಸರ್ವಾಂಗೀಣ ಪ್ರದರ್ಶನವಿತ್ತರು. 16 ಬಾರಿ ಎದುರಾಳಿ ಅಂಕಣಕ್ಕೆ ನುಗ್ಗಿಹೋದ ಪವನ್ 9 ಬಾರಿ ಯಶಸ್ವಿಯಾದರು. ಒಟ್ಟು 12 ಅಂಕ ಗಳಿಸಿದರು. ರಕ್ಷಣೆಯಲ್ಲೂ ಪವನ್ ಪರಾಕ್ರಮ ಮೆರೆದು 3 ಅಂಕ ಗಳಿಸಿದರು. ಯುಪಿ ತಂಡದ ಶ್ರೀಕಾಂತ್ ಜಾಧವ್ ದಾಳಿಯಲ್ಲಿ ಮಿಂಚಿದರು. ಅವರು ಗಳಿಸಿದ ಅಂಕ 8. ರಕ್ಷಣೆಯಲ್ಲಿ ಸುಮಿತ್ ಮಿಂಚಿ 5 ಅಂಕ ಗಳಿಸಿದರು. ಇವರಿಬ್ಬರ ಒಗ್ಗಟ್ಟಿನ ಆಟ ಬೆಂಗಳೂರು ಸೋಲಿಗೆ ಕಾರಣವಾಯಿತು.
Related Articles
ಬೆಂಗಾಲ್ ವಾರಿಯರ್ಸ್-ತೆಲುಗು ಟೈಟಾನ್ಸ್ ನಡುವೆ ನಡೆದ ಮೊದಲ ಪಂದ್ಯ ಟೈಗೊಂಡಿದೆ.
Advertisement
ಬೆಂಗಾಲ್ ವಾರಿಯರ್ಸ್ ಪರ ಮೊಹಮ್ಮದ್ ನಬಿ ಭಕ್ಷ್ ಸರ್ವಾಂಗೀಣ ಪ್ರದರ್ಶನ ನೀಡಿದರು. ದಾಳಿಯಲ್ಲಿ ಮತ್ತು ರಕ್ಷಣೆಯಲ್ಲಿ ಅವರು ಪ್ರದರ್ಶಿಸಿದ ಅದ್ಭುತ ಆಟದ ನೆರವಿನಿಂದ ಬೆಂಗಾಲ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ನಬಿ ಭಕ್ಷ್ ದಾಳಿಯಲ್ಲಿ 8, ರಕ್ಷಣೆಯಲ್ಲಿ 3 ಅಂಕ ಪಡೆದರು. ಇವರಿಗೆ ಮಣಿಂದರ್ ಸಿಂಗ್ ದಾಳಿಯಲ್ಲಿ ನೆರವು ನೀಡಿದರು.