Advertisement
ವಿಶೇಷವೆಂದರೆ, ಯುಪಿ ಯೋಧಾ ತಂಡಕ್ಕೆ ಇದು ಸತತ ಎರಡನೇ ಟೈ ಆಗಿದೆ. ಹಿಂದಿನ ಪಂದ್ಯದಲ್ಲಿ ಅದು ತೆಲುಗು ಟೈಟಾನ್ಸ್ ವಿರುದ್ಧ 20-20 ಅಂಕಗಳ ಟೈ ಸಾಧಿಸಿತ್ತು.ದಿನದ ದ್ವಿತೀಯ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ 35-26 ಅಂಕಗಳ ಅಂತರದಿಂದ ಪಾಟ್ನಾ ಪೈರೇಟ್ಸ್ ತಂಡಕ್ಕೆ ಸೋಲುಣಿಸಿತು. ಇದು 6 ಪಂದ್ಯಗಳಲ್ಲಿ ಪಾಟ್ನಾಕ್ಕೆ ಎದುರಾದ 4ನೇ ಸೋಲು. ಇನ್ನೊಂದೆಡೆ ಹರ್ಯಾಣ 5 ಪಂದ್ಯಗಳಲ್ಲಿ ಎರಡನೇ ಜಯ ಸಾಧಿಸಿತು.
ಕೊನೆಯ ರೈಡ್‌ನಲ್ಲಿ ತಮಿಳ್ ತಲೈವಾಸ್ ತಂಡದ ರೈಡರ್ ಅಜಯ್ ಠಾಕೂರ್ (3 ಅಂಕ) ನಿತೀಶ್ ಕುಮಾರ್ ಅವರನ್ನು ಔಟ್ ಮಾಡುತ್ತಿದ್ದಂತೆ 28-28ರಿಂದ ಪಂದ್ಯ ಟೈ ಆಯಿತು. ಇದಕ್ಕೂ ಮೊದಲು ಯುಪಿ ಯೋಧಾ ಕೇವಲ ಒಂದು ಅಂಕದಿಂದ ಮುಂದಿತ್ತು. ಆದರೆ ಠಾಕೂರ್ ಅವರ ಮಿಂಚಿನ ರೈಡ್ ತಂಡದ ಸೋಲನ್ನು ತಪ್ಪಿಸಿತು. ತಲೈವಾಸ್ ಪರ ರಾಹುಲ್ ಚೌಧರಿ (5 ಅಂಕ) ಮತ್ತು ಶಬ್ಬೀರ್ ಬಾಪು (5 ಅಂಕ) ರೈಡಿಂಗ್‌ನಿಂದ ಗಮನ ಸೆಳೆದರು. ಯುಪಿ ಪರ ರಿಷಾಂಕ್ ದೇವಾಡಿಗ (5 ಅಂಕ) ರೈಡಿಂಗ್‌ನಿಂದ ಹಾಗೂ ಸುಮಿತ್ (4 ಅಂಕ) ಟ್ಯಾಕಲ್‌ನಲ್ಲಿ ಮಿಂಚಿದರು.