Advertisement

ಪ್ರೊ ಕಬಡ್ಡಿ: ಮುಂಬಾ, ತಮಿಳ್‌ಗೆ ಸೋಲಿನ ಆಘಾತ

07:50 AM Aug 27, 2017 | Harsha Rao |

ಮುಂಬಯಿ: ಪ್ರೊ ಕಬಡ್ಡಿ ಲೀಗ್‌ ಐದರಲ್ಲಿ ಯು ಮುಂಬಾ ತವರಿನ ಪಂದ್ಯದಲ್ಲಿ ಮತ್ತೆ ಸೋಲು ಕಂಡಿದೆ. ಶುಕ್ರವಾರ ಜೈಪುರಕ್ಕೆ ಶರಣಾಗಿದ್ದ ಯು ಮುಂಬಾ ತಂಡವು ಶನಿವಾರದ ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್‌ ತಂಡದೆದುರು 24-26 ಅಂಕಗಳಿಂದ ಸೋತು ಆಘಾತಕ್ಕೆ ಒಳಗಾಯಿತು.

Advertisement

ಈ ಮೊದಲು ನಡೆದ ಪಂದ್ಯದಲ್ಲಿ ಯಶಸ್ಸಿನ ಅಲೆಯಲ್ಲಿರುವ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ 35-24ರಿಂದ ತಮಿಳ್‌ ತಲೈವಾಸ್‌ ವಿರುದ್ಧ ಜಯ ಸಾಧಿಸಿದೆ. ತಲೈವಾಸ್‌ ಪರ ನಾಯಕ ಅಜಯ್‌ ಠಾಕೂರ್‌ (10 ರೈಡಿಂಗ್‌ ಅಂಕ) ಮಾಡಿದ ಹೋರಾಟವೂ ವ್ಯರ್ಥವಾಯಿತು. ಈ ಮೂಲಕ ಪಾಟ್ನಾ ಕೂಟದಲ್ಲಿ 4ನೇ ಜಯ ಸಾಧಿಸಿದೆ.

ಇಲ್ಲಿನ ಎನ್‌ಎಸ್‌ಸಿಐ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ತಲೈವಾಸ್‌ ಉತ್ತಮ ಪ್ರದರ್ಶನ ನೀಡಿತು. ಕನ್ನಡಿಗ ದರ್ಶನ ಆರಂಭದಲ್ಲಿಯೇ ಮೂರು ಅದ್ಭುತ ಕ್ಯಾಚ್‌ ತೆಗೆದುಕೊಂಡರು. ಹೀಗಾಗಿ 15ನೇ ನಿಮಿಷದಲ್ಲಿ ತಲೈವಾಸ್‌ 8-4ರಿಂದ ಮುನ್ನಡೆಯಲ್ಲಿತ್ತು. ಪಾಟ್ನಾದ ತಾರಾ ಆಟಗಾರ ಪ್ರದೀಪ್‌ ನರ್ವಾಲ್‌ ರೈಡಿಂಗ್‌ನಲ್ಲಿ ವೈಫ‌ಲ್ಯ ಎದುರಿಸಿದರು. ಇದರಿಂದಾಗಿ ಪ್ರದೀಪ್‌ ಅಂಕಣದ ಹೊರಗೆ ಹೆಚ್ಚಿನ ಸಮಯ ಕಳೆಯುಬೇಕಾಯಿತು.

ಆದರೆ 15ನೇ ನಿಮಿಷದ ಅನಂತರ ಪಾಟ್ನಾ ಚೇತರಿಸಿಕೊಂಡಿತು. ತಲೈವಾಸ್‌ ಮೇಲೆ ದಾಳಿ ಮಾಡುತ್ತಾ ತನ್ನ ಅಂಕವನ್ನು ಹೆಚ್ಚಿಸಿಕೊಂಡಿತು. ಅತ್ತ ತಲೈವಾಸ್‌ ಕೋಟೆಯೂ ಖಾಲಿಯಾಗುತ್ತಾ ಸಾಗಿತು. ಇದರಿಂದಾಗಿ 19ನೇ ನಿಮಿಷದಲ್ಲಿ ತಲೈವಾಸ್‌ ಆಲೌಟ್‌ ಆಯಿತು.

– ಮಂಜು ಮಳಗುಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next