Advertisement

ಪ್ರೊ ಕಬಡ್ಡಿ ಲೀಗ್‌: ಮೊದಲ ಪಂದ್ಯದಲ್ಲೇ ಬುಲ್ಸ್‌ಗೆ ಸೋಲು

09:53 AM Sep 01, 2019 | sudhir |

ಬೆಂಗಳೂರು: ಶನಿವಾರ ಮೊದಲ್ಗೊಂಡ ಪ್ರೊ ಕಬಡ್ಡಿ ಲೀಗ್‌ನ ಬೆಂಗಳೂರು ಚರಣದ ಆರಂಭಿಕ ಮುಖಾಮುಖೀಯಲ್ಲೇ ಆತಿಥೇಯ ಬೆಂಗಳೂರು ಸೋತು ನಿರಾಸೆ ಮೂಡಿಸಿದೆ. ಅದು 23-32ರಿಂದ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ಗೆ ಶರಣಾಯಿತು.

Advertisement

ದಿನದ ಇನ್ನೊಂದು ಪಂದ್ಯದಲ್ಲಿ ಯು ಮುಂಬಾ ಭರ್ಜರಿ ಪ್ರದರ್ಶನ ನೀಡಿ ಜೈಪುರ್‌ ಪಿಂಕ್‌ ಪ್ಯಾಂಥರ್ಗೆ 47-21 ಅಂತರದ ಸೋಲುಣಿಸಿದೆ.

ದಾಳಿಗಾರರ ವೈಫ‌ಲ್ಯ :
ಈ ಸೋಲಿನ ಬಳಿಕ ಅಂಕಪಟ್ಟಿಯಲ್ಲಿ ಬೆಂಗಳೂರು ಕುಸಿತ ಕಂಡು 5ನೇ ಸ್ಥಾನಕ್ಕಿಳಿದಿದೆ. ಆದರೆ ಈಗಿನ ಲೆಕ್ಕಾಚಾರದಲ್ಲಿ ಅದರ ಪ್ಲೇ-ಆಫ್ ಹಾದಿಗೇನೂ ಸಮಸ್ಯೆ ಇಲ್ಲ.

ಬೆಂಗಳೂರಿನ ಸೋಲಿಗೆ ಪ್ರಮುಖ ಕಾರಣ ದಾಳಿಗಾರರ ಸಂಪೂರ್ಣ ವೈಫ‌ಲ್ಯ. ನಾಯಕ ರೋಹಿತ್‌ ಕುಮಾರ್‌, ತಾರಾ ಆಟಗಾರ ಪವನ್‌ ಸೆಹ್ರಾವತ್‌ ಸೇರಿ ಯಾರೂ ಕೂಡ ಮೆರೆದಾಡಲಿಲ್ಲ. ಎಲ್ಲರೂ ಎದುರಾಳಿ ಅಂಕಣಕ್ಕೆ ತೆರಳಿ ಸತತವಾಗಿ ವಿಫ‌ಲರಾಗುತ್ತಲೇ ಬಂದರು.

ನಾಯಕ ರೋಹಿತ್‌ ಕುಮಾರ್‌ 16 ಬಾರಿ ಎದುರಾಳಿ ಅಂಕಣಕ್ಕೆ ನುಗ್ಗಿ ಗಳಿಸಿದ್ದು ಕೇವಲ 3 ಅಂಕ. ಇದರಲ್ಲಿ ಒಂದು ಬೋನಸ್‌ ಅಂಕ. ಪವನ್‌ ಸೆಹ್ರಾವತ್‌ ಅವರು 11 ಬಾರಿ ಎದುರಾಳಿ ಕೋಟೆಗೆ ತೆರಳಿ ಕೇವಲ 3 ಅಂಕ ಗಳಿಸಿದರು. ಇದು ತಂಡಕ್ಕೆ ಬಹಳ ದುಬಾರಿಯಾಯಿತು. ಈ ಪಂದ್ಯದಲ್ಲಿ ಇಬ್ಬರೂ ಏಕಕಾಲಕ್ಕೆ ವಿಫ‌ಲರಾಗಿ ಅಚ್ಚರಿ ಹುಟ್ಟಿಸಿದರು.

Advertisement

ಬೆಂಗಳೂರು ಪರ ಅದ್ಭುತವಾಗಿ ಆಡಿದ ಏಕೈಕ ಆಟಗಾರ ಸೌರಭ್‌ ನಂದಲ್‌. ರಕ್ಷಣೆಯಲ್ಲಿ ಅವರು ಯಶಸ್ವಿಯಾಗಿ ಆಡಿ ತಮ್ಮ ಪಾತ್ರ ನಿರ್ವಹಿಸಿದರು. 7 ಬಾರಿ ಎದುರಾಳಿಯನ್ನು ಟ್ಯಾಕಲ್‌ ಮಾಡಲು ಯತ್ನಿಸಿದ ಅವರು 8 ಅಂಕ ಗಳಿಸಿದರು. ಗುಜರಾತ್‌ ಪರ ಸಚಿನ್‌ ದಾಳಿಯಲ್ಲಿ (5), ಪರ್ವೇಶ್‌ ಭೇನ್ಸ್‌ವಾಲ್‌ (4) ರಕ್ಷಣೆಯಲ್ಲಿ ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next