ಪುಣೆ: ಮುಂಬರುವ 7ನೇ ಪ್ರೊ ಕಬಡ್ಡಿ ಹಣಾಹಣಿಯಲ್ಲಿ ಡಿಫೆಂಡರ್ ಸುರ್ಜಿತ್ ಸಿಂಗ್ ಅವರಿಗೆ ಪುನೇರಿ ಪಲ್ಟಾನ್ ತಂಡದ ನಾಯಕತ್ವವನ್ನು ವಹಿಸಲಾಗಿದೆ. ತಂಡದ ಪ್ರಧಾನ ಕೋಚ್ ಅನೂಪ್ ಕುಮಾರ್ ಬುಧವಾರ ಈ ವಿಷಯವನ್ನು ತಿಳಿಸಿದರು. ಇದೇ ವೇಳೆ ತಂಡದ ನೂತನ ಜೆರ್ಸಿಯನ್ನು ಬಿಡುಗಡೆಗೊಳಿಸಲಾಯಿತು.
“ಸುರ್ಜಿತ್ ಸಿಂಗ್ ಪುನೇರಿ ತಂಡದ ಆಸ್ತಿ. ಅವರು ಖಂಡಿತವಾಗಿಯೂ ತಂಡವನ್ನು ಯಶಸ್ಸಿನ ಪಥದತ್ತ ಕೊಂಡೊ ಯ್ಯುವರೆಂಬ ನಂಬಿಕೆ ಇದೆ’ ಎಂದು ಅನೂಪ್ ಹೇಳಿದರು.
ಇದು ಸುರ್ಜಿತ್ ಸಿಂಗ್ ಪುನೇರಿ ಪಲ್ಟಾನ್ ತಂಡವನ್ನು ಪ್ರತಿನಿಧಿಸುತ್ತಿರುವುದು ಇದು ಎರಡನೇ ಸಲ. ಸೀಸನ್ ಮೂರರ ವೇಳೆ ಅವರು ಇದೇ ತಂಡದಲ್ಲಿದ್ದರು.
ನಿತಿನ್ ತೋಮರ್, ಗಿರೀಶ್ ಎರ್ನಾಕ್, ಪವನ್ ಕುಮಾರ್, ದರ್ಶನ್ ಕಾದಿಯನ್ ಅವರೆಲ್ಲ ಪುಣೆ ತಂಡದ ಪ್ರಮುಖ ಆಟಗಾರರರಾಗಿದ್ದಾರೆ.