Advertisement

Pro Kabaddi: ಪ್ರೊ ಕಬಡ್ಡಿ ಸೆಮಿಫೈನಲ್‌ ಫೈಟ್‌: ಪುನೇರಿ-ಪಾಟ್ನಾ , ಜೈಪುರ್‌-ಹರ್ಯಾಣ

08:46 AM Feb 28, 2024 | Team Udayavani |

ಹೈದರಾಬಾದ್‌: ಹತ್ತನೇ ಪ್ರೊ ಕಬಡ್ಡಿ ಲೀಗ್‌ ಅಂತಿಮ ಘಟ್ಟ ತಲುಪಿದ್ದು, ಬುಧವಾರ ಹೈದರಾಬಾದ್‌ನಲ್ಲಿ ಎರಡು ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ.

Advertisement

ಪುನೇರಿ ಪಲ್ಟಾನ್‌-ಪಾಟ್ನಾ ಪೈರೇಟ್ಸ್‌ ಮತ್ತು ಜೈಪುರ್‌ ಪಿಂಕ್‌ ಪ್ಯಾಂಥರ್- ಹರ್ಯಾಣ ಸ್ಟೀಲರ್ ತಂಡಗಳು ಸೆಣಸಾಡಲಿವೆ. ಇವುಗಳಲ್ಲಿ ಪುನೇರಿ ಮತ್ತು ಜೈಪುರ್‌ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿದ ತಂಡಗಳಾಗಿವೆ.

ಸೋಮವಾರದ ಎಲಿಮಿನೇಟರ್‌ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ವಿರುದ್ಧ ಪಾಟ್ನಾ ಪೈರೇಟ್ಸ್‌ 37-35 ಅಂತರದ ರೋಚಕ ಜಯ ದಾಖಲಿಸಿತ್ತು. ಬಳಿಕ ಹರ್ಯಾಣ 42-25ರಿಂದ ಗುಜರಾತ್‌ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತ್ತು.

ಲೀಗ್‌ ಹಂತದಲ್ಲಿ ಪುನೇರಿ 96 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿ ಸಿತ್ತು. ಪಾಟ್ನಾ 69 ಅಂಕಗಳೊಂದಿಗೆ 6ನೇ ಸ್ಥಾನ ಪಡೆದಿತ್ತು. ಆದರೆ ಪಿಕೆಎಲ್‌ ಇತಿಹಾಸ ಗಮನಿಸಿದರೆ ಪುನೇರಿಗಿಂತ ಪಾಟ್ನಾ ಬಲಿಷ್ಠ ತಂಡವಾಗಿ ಕಾಣಿಸುತ್ತದೆ. ಒಟ್ಟು 21 ಪಂದ್ಯಗಳಲ್ಲಿ ಪುನೇರಿ ಕೇವಲ 4 ಗೆಲುವು ದಾಖಲಿಸಿದರೆ, ಪಾಟ್ನಾ ಬರೋಬ್ಬರಿ 13 ಪಂದ್ಯಗಳಲ್ಲಿ ಜಯಶಾಲಿಯಾಗಿದೆ. 4 ಪಂದ್ಯಗಳು ಟೈ ಆಗಿವೆ.

ಜೈಪುರ್‌-ಹರ್ಯಾಣ ಕದನ
ಜೈಪುರ್‌-ಹರ್ಯಾಣ ನಡುವಿನ ಸೆಣಸಾಟವೂ ಕುತೂಹಲ ಮೂಡಿಸಿದೆ. ಲೀಗ್‌ ಹಂತದ 22 ಪಂದ್ಯಗಳಲ್ಲಿ 16 ಗೆದ್ದ ಜೈಪುರ್‌ ಎರಡನೇ ಬಲಿಷ್ಠ ತಂಡವಾಗಿ ಹೊರಹೊಮ್ಮಿತ್ತು. ಇನ್ನೊಂದೆಡೆ ಹರ್ಯಾಣ 22ರಲ್ಲಿ 13 ಪಂದ್ಯಗಳನ್ನು ಜಯಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು.

Advertisement

ಪ್ರೊ ಕಬಡ್ಡಿಯಲ್ಲಿ ಒಟ್ಟು 14 ಬಾರಿ ಜೈಪುರ್‌-ಹರ್ಯಾಣ ಮುಖಾಮುಖೀ ಯಾಗಿವೆ. ಇದರಲ್ಲಿ ಜೈಪುರ್‌ 9 ಗೆಲುವು ಕಂಡಿದ್ದರೆ, ಸ್ಟೀಲರ್ ಕೇವಲ 3ರಲ್ಲಿ ಗೆದ್ದಿದೆ. ಉಳಿದ 2 ಪಂದ್ಯಗಳು ಟೈ ಆಗಿವೆ.

ಇದನ್ನೂ ಓದಿ: Bear: ಶಿವಮೊಗ್ಗ ನಗರದಲ್ಲಿ ಬೆಳ್ಳಂಬೆಳಗ್ಗೆ ವಾಕಿಂಗ್ ಹೋದವರ ಮೇಲೆ ಕರಡಿ ದಾಳಿ…

Advertisement

Udayavani is now on Telegram. Click here to join our channel and stay updated with the latest news.

Next