ಬೆಂಗಳೂರು: ಪ್ರೊ ಕಬಡ್ಡಿ ಲೀಗ್ ಹಂತದ ಅಂತಿಮ ದಿನದಾಟದ ಮೊದಲೆರೆಡು ಪಂದ್ಯಗಳಲ್ಲಿ ಪುನೇರಿ ಪಲ್ಟಾನ್ ಮತ್ತು ಗುಜರಾತ್ ಜೈಂಟ್ಸ್ ಗೆಲುವು ಸಾಧಿಸಿದವು. ಪಾಟ್ನಾ- ಹರ್ಯಾಣ ನಡುವಿನ ಅಂತಿಮ ಲೀಗ್ ಪಂದ್ಯಕ್ಕೂ ಮುನ್ನ ಮೊದಲ 6 ಸ್ಥಾನದಲ್ಲಿರುವ ತಂಡಗಳೆಂದರೆ ಪಾಟ್ನಾ (81), ದಿಲ್ಲಿ (75), ಯೋಧ (68), ಗುಜರಾತ್ (67), ಬುಲ್ಸ್ (66) ಮತ್ತು ಪುನೇರಿ (66). ಈ ಲೆಕ್ಕಾಚಾರದಲ್ಲಿ ಬೆಂಗಳೂರು ಬುಲ್ಸ್‌ಗೆ ಪ್ಲೇ ಆಫ್ ಟಿಕೆಟ್ ಸಿಕ್ಕಿದೆ.
ದಿನದ ಮೊದಲ ಪಂದ್ಯದಲ್ಲಿ ಪುನೇರಿ ಪಲ್ಟಾನ್ 37-30 ಅಂತ ರದಿಂದ ಜೈಪುರ್ ಪಿಂಕ್ ಪ್ಯಾಂಥರ್ ತಂಡವನ್ನು ಮಣಿಸಿತು. ಇದರೊಂದಿಗೆ ಪುನೇರಿ 12 ಜಯದೊಂದಿಗೆ ಲೀಗ್ ವ್ಯವಹಾರ ಮುಗಿಸಿತು. ತಂಡದ ಅಂಕ 66ಕ್ಕೆ ಏರಿತು. 10 ಪಂದ್ಯಗಳಲ್ಲಿ ಸೋತ ಜೈಪುರ್ ಅಂಕ 62ರಲ್ಲೇ ಉಳಿಯಿತು.
ಮೋಹಿತ್ ಗೋಯತ್ (14), ಅಸ್ಲಾಮ್ ಇನಾಮಾªರ್ (11) ಪುನೇರಿ ಗೆಲುವಿನ ಹೀರೋಗಳೆನಿಸಿದರು. ಜೈಪುರ್ ಪರ ರೈಡರ್ ಅರ್ಜುನ್ ದೇಶ್ವಾಲ್ ಅವರದು ಏಕಾಂಗಿ ಹೋರಾಟವಾಗಿತ್ತು. ಅವರು 18 ಅಂಕ ಗಳಿಸಿದರು.
ಮುಂಬಾಗೆ ಸೋಲು
ದ್ವಿತೀಯ ಮುಖಾಮುಖೀಯಲ್ಲಿ ಗುಜರಾತ್ ಜೈಂಟ್ಸ್ 36-33 ಅಂಕ ಗಳಿಂದ ಯು ಮುಂಬಾಗೆ ಸೋಲು ಣಿಸಿತು. ಗುಜರಾತ್ ಅಂಕವೀಗ 67ಕ್ಕೆ ಏರಿದೆ.
ಇದು ಯು ಮುಂಬಾಗೆ ಎದುರಾದ 10ನೇ ಸೋಲು. ಅದು ಗಳಿಸಿರುವ ಅಂಕ 55.