Advertisement

ಪಾಟ್ನಾಕ್ಕೆ ಪೆಟ್ಟು ಕೊಟ್ಟ ಯು ಮುಂಬಾ

01:07 AM Aug 17, 2019 | Team Udayavani |

ಅಹ್ಮದಾಬಾದ್‌: ಪ್ರಚಂಡ ಹೋರಾಟ ತೋರ್ಪಡಿಸಿದ ಹೊರತಾಗಿಯೂ ಪಾಟ್ನಾ ಪೈರೇಟ್ಸ್‌ ಸೋಲಿನ ಸುಳಿಗೆ ಸಿಲುಕಿದೆ. ಯು ಮುಂಬಾ 34-30 ಅಂತರದಿಂದ ಪಾಟ್ನಾಕ್ಕೆ ಪೆಟ್ಟು ಕೊಟ್ಟಿದೆ.ಪಾಟ್ನಾ ಪೈರೇಟ್ಸ್‌-ಯು ಮುಂಬಾ,ಪ್ರೊ ಕಬಡ್ಡಿ ಪಂದ್ಯ

Advertisement

ಅಹ್ಮದಾಬಾದ್‌ನ ಟ್ರ್ಯಾನ್ಸ್‌ ಸ್ಟೇಡಿಯಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶುಕ್ರವಾರದ ಮೊದಲ ಪ್ರೊ ಕಬಡ್ಡಿ ಪಂದ್ಯ ಅತ್ಯಂತ ರೋಚಕವಾಗಿ ಸಾಗಿತು. ಅಂತಿಮವಾಗಿ ಯು ಮುಂಬಾ ಗೆಲುವಿನ ನಗು ಬೀರಿತು.

ಇದಕ್ಕಿಂತ ಹೆಚ್ಚು ರೋಮಾಂಚಕಾರಿಯಾಗಿ ಸಾಗಿದ ದ್ವಿತೀಯ ಮುಖಾಮುಖೀಯಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ 22-19 ಅಂತರದಿಂದ ಆತಿಥೇಯ ಗುಜರಾತ್‌ಗೆ ಆಘಾತವಿಕ್ಕಿತು.

ಯು ಮುಂಬಾ ಗರ್ಜನೆ
ಮೊದಲ ಅವಧಿಯಲ್ಲಿ ಯು ಮುಂಬಾ ತಂಡ ಪ್ರಬಲ ಆಟ ಪ್ರದರ್ಶಿಸಿತು. 22-9 ಅಂತರದ ದೊಡ್ಡ ಅಂತರದ ಮುನ್ನಡೆ ಪಡೆಯಿತು. ರೋಹಿತ್‌ ಬಲಿಯಾನ್‌ (9 ಅಂಕ) ರೈಡಿಂಗ್‌ನಲ್ಲಿ ಅಬ್ಬರಿಸಿದರು. ಒಟ್ಟು 14 ಸಲ ಪಾಟ್ನಾ ಕೋಟೆಯೊಳಗೆ ನುಗ್ಗಿದ ರೋಹಿತ್‌ 6 ಟಚ್‌ ಪಾಯಿಂಟ್‌, 3 ಬೋನಸ್‌ ಅಂಕವನ್ನು ತಂದುಕೊಡುವಲ್ಲಿ ಯಶಸ್ವಿಯಾದರು. ತಂಡದ ಮೊತ್ತೂಬ್ಬ ರೈಡರ್‌ ಅತುಲ್‌ (8 ಅಂಕ) ಪಾಟ್ನಾ ಮೇಲೆ ಏಕಾಏಕಿ ಎರಗಿದರು. ಸಂದೀಪ್‌ ನರ್ವಾಲ್‌ (6 ಅಂಕ) ಅದ್ಭುತ ಟ್ಯಾಕಲ್‌ ನಡೆಸಿದರು. ಉಳಿದಂತೆ ಅರ್ಜುನ್‌ ದೆಶ್ವಾಲ್‌ (4 ಅಂಕ)ಗಳಿಸಿ ತಂಡಕ್ಕೆ ನೆರವಾದರು.

ಆದರೆ ತಾರಾ ಆಟಗಾರ, ರಕ್ಷಣಾ ವಿಭಾಗದ ಮುಂಚೂಣಿಯ ಆಟಗಾರ ಫ‌ಜಲ್‌ ಅಟ್ರಾಚಲಿ (3 ಅಂಕ) ಕ್ಲಿಕ್‌ ಆಗಲಿಲ್ಲ. ಹೀಗಾಗಿ ಎರಡನೇ ಅವಧಿಯಲ್ಲಿ ಪಾಟ್ನಾ ಎಚ್ಚೆತ್ತುಕೊಂಡು ಆಡಲು ಇದು ಸಹಾಯಕವಾಯಿತು.

Advertisement

ಪರ್‌ದೀಪ್‌ ನರ್ವಾಲ್‌ (6 ಅಂಕ), ಮೊಹಮ್ಮದ್‌ ಇಸ್ಮಾಯಿಲ್‌ (6 ಅಂಕ) ಎರಡನೇ ಅವಧಿಯಲ್ಲಿ ಉತ್ತಮ ರೈಡಿಂಗ್‌ ಸಂಘಟಿಸಿದರು. ಇದರಿಂದ ಸೋಲಿನ ಅಂತರ ಕುಗ್ಗಿತು, ಅಷ್ಟೇ.

Advertisement

Udayavani is now on Telegram. Click here to join our channel and stay updated with the latest news.

Next