Advertisement
ರೈಡರ್ ದೇವಾಂಕ್ 14 ಅಂಕ ಗಳಿಸಿ ಪಾಟ್ನಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಜೈಪುರ್ ಪರ ನಾಯಕ ಅರ್ಜುನ್ ದೇಶ್ವಾಲ್ 7 ಅಂಕ ತಂದಿತ್ತರು. ಇದು 17 ಪಂದ್ಯಗಳಲ್ಲಿ ಪಾಟ್ನಾ ಸಾಧಿಸಿದ 10ನೇ ಜಯ. ಜೈಪುರ್ 17 ಪಂದ್ಯಗಳಲ್ಲಿ 7ನೇ ಸೋಲನುಭವಿಸಿತು.
ಜಿದ್ದಾಜಿದ್ದಿಯಿಂದ ಕೂಡಿದ 2ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಕೇವಲ ಒಂದಂಕದಿಂದ ಯು ಮುಂಬಾವನ್ನು ಕೆಡವಿತು (34-33). ವಿಜೇತ ತಂಡದ ಪರ ನಾಯಕ ಗುಮಾನ್ ಸಿಂಗ್ ಮತ್ತು ರೈಡರ್ ರಾಕೇಶ್ 10 ಅಂಕಗಳೊಂದಿಗೆ ಮಿಂಚಿದರು. ಇದು 17 ಪಂದ್ಯಗಳಲ್ಲಿ ಗುಜರಾತ್ ಸಾಧಿಸಿದ ಕೇವಲ 5ನೇ ಜಯ. ಮುಂಬಾದ ರೈಡರ್ ಅಜಿತ್ ಚೌಹಾಣ್ 14 ಅಂಕ ತಂದಿತ್ತರು.