Advertisement

Pro Kabaddi: ಸೆಮಿಫೈನಲ್‌ ಪ್ರವೇಶಿಸಿದ ಪಾಟ್ನಾ , ಹರ್ಯಾಣ

11:27 PM Feb 26, 2024 | Team Udayavani |

ಹೈದರಾಬಾದ್‌: ಪಾಟ್ನಾ ಪೈರೆಟ್ಸ್‌ ಮತ್ತು ಹರ್ಯಾಣ ಸ್ಟೀಲರ್ ಪ್ರೊ ಕಬಡ್ಡಿ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿವೆ. ಸೋಮವಾರದ ಎಲಿಮಿನೇಟರ್‌ ಪಂದ್ಯಗಳಲ್ಲಿ ದಬಾಂಗ್‌ ಡೆಲ್ಲಿ ಮತ್ತು ಗುಜರಾತ್‌ ಟೈಟಾನ್ಸ್‌ ಪರಾಭವಗೊಂಡವು.

Advertisement

ಸೆಮಿಫೈನಲ್‌ನಲ್ಲಿ ಪಾಟ್ನಾ-ಪುನೇರಿ ಹಾಗೂ ಹರ್ಯಾಣ- ಜೈಪುರ್‌ ಸೆಣಸಲಿವೆ. ಎರಡೂ ಪಂದ್ಯಗಳು ಬುಧವಾರ ನಡೆಯಲಿವೆ.

ಪಾಟ್ನಾಕ್ಕೆ ರೋಚಕ ಜಯ
ಅತ್ಯಂತ ರೋಚಕವಾಗಿ ಸಾಗಿದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್‌ 37-35 ಅಂತರದಿಂದ ದಬಾಂಗ್‌ ಡೆಲ್ಲಿಯನ್ನು ಸೋಲಿಸಿತು.

ಪಾಟ್ನಾ ಪರ ರೈಡರ್‌ ಸಚಿನ್‌ ನಾಯಕನ ಆಟವಾಡಿ ಸರ್ವಾಧಿಕ 9 ಅಂಕ ತಂದಿತ್ತರು. ಮಂಜೀತ್‌, ಸುಧಾಕರ್‌ ಎಂ., ಸಂದೀಪ್‌ ಕುಮಾರ್‌ ತಲಾ 5 ಅಂಕ ಗಳಿಸಿದರು. ಇನ್ನೊಂದೆಡೆ ಡೆಲ್ಲಿ ನಾಯಕ ಆಶು ಮಲಿಕ್‌ಗೆ ಉಳಿದವರಿಂದ ಸೂಕ್ತ ಬೆಂಬಲ ಸಿಗದೇ ಹೋಯಿತು. ಏಕಾಂಗಿಯಾಗಿ ಹೋರಾಡಿದ ಅವರು 19 ಅಂಕ ಗಳಿಸಿ ಕೊಟ್ಟರು. ಲೀಗ್‌ ಅಂಕಪಟ್ಟಿಯಲ್ಲಿ ಪಾಟ್ನಾ 6ನೇ ಹಾಗೂ ಡೆಲ್ಲಿ 3ನೇ ಸ್ಥಾನದಲ್ಲಿತ್ತು.

ಹರ್ಯಾಣ ಆಕ್ರಮಣ
ದ್ವಿತೀಯ ಮುಖಾಮುಖಿ ಏಕಪಕ್ಷೀಯವಾಗಿ ಸಾಗಿತು. ಹರ್ಯಾಣ 42-25 ಅಂತರದಿಂದ ಗುಜರಾತ್‌ ತಂಡವನ್ನು ಬಗ್ಗುಬಡಿಯಿತು. ಹರ್ಯಾಣದ ರೈಡರ್‌ ವಿನಯ್‌ ಅಮೋಘ ಆಟವಾಡಿ 12 ಅಂಕ ಗಳಿಸಿದರು. ಲೀಗ್‌ನಲ್ಲಿ 4ನೇ ಸ್ಥಾನಿಯಾಗಿದ್ದ ಗುಜರಾತ್‌ ಇಲ್ಲಿ ಜೋಶ್‌ ತೋರಲು ವಿಫ‌ಲವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next