Advertisement

ಪ್ರೊ ಕಬಡ್ಡಿ: ಚಾಂಪಿಯನ್‌ ಬುಲ್ಸ್‌ ಗೆ ಪಾಟ್ನಾ ಸವಾಲು

09:38 AM Jul 21, 2019 | Team Udayavani |

ಹೈದರಾಬಾದ್‌: ಪ್ರೊ ಕಬಡ್ಡಿ 7ನೇ ಆವೃತ್ತಿ ಶನಿವಾರದಿಂದ ಆರಂಭವಾಗಲಿದೆ. ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಮೊದಲ ಮುಖಾಮುಖೀಯಲ್ಲಿ ಪಾಟ್ನಾ ಪೈರೇಟ್ಸ್‌ ತಂಡವನ್ನು ಎದುರಿಸಲಿದೆ. ಇದಕ್ಕೂ ಮೊದಲು ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ತಂಡವನ್ನು ಯು ಮುಂಬಾ ಎದುರಿಸಲಿದೆ.

Advertisement

ಸವಾಲಿಗೆ ರೆಡಿ ಬುಲ್ಸ್‌
ಕಳೆದ ಸಲ ಚಾಂಪಿಯನ್‌ ಆಗಿರುವ ಬೆಂಗಳೂರು ಬುಲ್ಸ್‌ ಈ ಸಲವೂ ಕಪ್‌ ಗೆಲ್ಲುವ ನಿರೀಕ್ಷೆಯಲ್ಲಿದೆ. ಪವನ್‌ ಸೆಹ್ರಾವತ್‌, ರೋಹಿತ್‌ ಕುಮಾರ್‌ ಅವರಂತಹ ದಿಗ್ಗಜ ರೈಡರ್ ತಂಡದ ಬಲ. ಪವನ್‌ ಕಳೆದ ಆವೃತ್ತಿಯಲ್ಲಿ ಒಟ್ಟಾರೆ 271 ರೈಡಿಂಗ್‌ ಅಂಕ ಸಂಪಾದಿಸಿದ್ದರು. ಈ ಸಲವೂ ಅವರ ಮೇಲೆ ಬಹಳ ನಿರೀಕ್ಷೆ ಇಡಲಾಗಿದೆ. ಡಿಫೆಂಡರ್‌ ಮಹೇಂದ್ರ ಸಿಂಗ್‌ ಕೂಡ ತಂಡಕ್ಕೆ ನೆರವಾಗಬಲ್ಲರು.

ಪಾಟ್ನಾಗೆ ಜಯದ ನಿರೀಕ್ಷೆ
ಪಾಟ್ನಾ ಪೈರೇಟ್ಸ್‌ ಪ್ರೊ ಕಬಡ್ಡಿಯಲ್ಲಿ ಒಟ್ಟಾರೆ ಮೂರು ಸಲ ಚಾಂಪಿಯನ್‌ ಆಗಿದೆ. ಈ ಸಲವೂ ಕೂಟದ ಪ್ರಬಲ ತಂಡವಾಗಿದೆ. ಪ್ರದೀಪ್‌ ನರ್ವಾಲ್‌, ಜಾಂಗ್‌ ಕುನ್‌ ಲೀ ರೈಡಿಂಗ್‌ನಲ್ಲಿ ಜಾದೂ ಮಾಡಬಲ್ಲರು. ಆದರೆ ಡಿಫೆಂಡಿಂಗ್‌ ವಿಭಾಗದಲ್ಲಿ ತಂಡದ ಸಾಮರ್ಥ್ಯ ಸಾಲದು ಎಂಬಂತಿದೆ. ಲೆಫ್ಟ್ ಕಾರ್ನರ್‌ ಡಿಫೆಂಡರ್‌ ಜೈದೀಪ್‌ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ಗಮನ ಸೆಳೆಯಬಲ್ಲ
ಐದು ರೈಡರ್

ರಾಹುಲ್‌ ಚೌಧರಿ
ಈ ಸಲ ತಮಿಳ್‌ ತಲೈ ವಾಸ್‌ ತಂಡದ ಪರ ಆಡಲಿದ್ದಾರೆ. ಹಿಂದಿನ ಆವೃತ್ತಿಗಳಲ್ಲಿ ತೆಲುಗು ಟೈಟಾನ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಈ ಸಲ ರಾಹುಲ್‌ ಚೌಧರಿ ಕೂಡಿಕೊಂಡಿರುವುದರಿಂದ ತಂಡ ಮತ್ತಷ್ಟು ಬಲಿಷ್ಠವಾಗಿ ಗೋಚರಿಸಿದೆ.

Advertisement

ಪ್ರದೀಪ್‌ ನರ್ವಾಲ್‌
ಪಾಟ್ನಾ ಪೈರೇಟ್ಸ್‌ ತಾರಾ ಆಟಗಾರ ಪ್ರದೀ ಪ್‌ ನರ್ವಾಲ್‌. ಎದುರಾಳಿಗೆ ಇವರು ಕಬ್ಬಿಣದ ಕಡಲೆ. ಒಂದೇ ರೈಡ್‌ನ‌ಲ್ಲಿ ಎರಡು-ಮೂರು ಅಂಕಗಳನ್ನು ಒಟ್ಟಿಗೆ ತರುವಷ್ಟು ಮಟ್ಟಿಗೆ ಸಾಮರ್ಥ್ಯವಿದೆ. ಒಟ್ಟಾರೆ ರೈಡಿಂಗ್‌ನಿಂದ 858 ಅಂಕವನ್ನು ಪಡೆದಿರುತ್ತಾರೆ.

ಮಣಿಂದರ್‌ ಸಿಂಗ್‌
ಉದ್ದ ಕಾಲಿನಿಂದ ಎದುರಾಳಿ ಆಟಗಾರನ ಟಚ್‌ ಮಾಡಿ ಅಂಕ ಪಡೆಯುವುದರಲ್ಲಿ ಬೆಂಗಾಲ್‌ ವಾರಿಯರ್ ರೈಡರ್‌ ಮಣಿಂದರ್‌ ಸಿಂಗ್‌ ನಿಸ್ಸೀಮರು. ಕಳೆದ ಸಲ ಬೆಂಗಾಲ್‌ ಪರ ಪ್ರಚಂಡ ರೈಡಿಂಗ್‌ ಪ್ರದರ್ಶಿಸಿದ್ದರು.

ಅಜಯ್‌ ಠಾಕೂರ್‌
ಕಳೆದ ಸಲ ತಮಿಳ್‌ ಸ್ವಲ್ಪವಾದರೂ ಮಾನ ಉಳಿಸಿ ಕೊಂಡಿತ್ತು ಎಂದರೆ ಅದಕ್ಕೆ ಕಾರಣ ಅಜಯ್‌ ಠಾಕುರ್‌. ಯಾವುದೇ ಸಂದರ್ಭದಲ್ಲಿ ಎದುರಾಳಿಗಳನ್ನು ಔಟ್‌ ಮಾಡಿ ಅಂಕ ತರಬಲ್ಲ ಬಲ ಠಾಕುರ್‌ ಅವರಲ್ಲಿದೆ.

ಪವನ್‌ ಸೆಹ್ರಾವತ್‌
ಕಳೆದ ಆವೃತ್ತಿಯಲ್ಲಿ ಬೆಂಗಳೂರು ಚಾಂಪಿಯನ್‌ ಆಗಿದ್ದರೆ ಅದಕ್ಕೆ ಮುಖ್ಯ ಕಾರಣ ಪವನ್‌ ಸೆಹ್ರಾವತ್‌. ಈ ಸಲವೂ ಪವನ್‌ ಮಿಂಚಿನ ಆಟದಿಂದ ಎದುರಾಳಿಗೆ ಆಘಾತ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಒಟ್ಟಾರೆ ರೈಡಿಂಗ್‌ ಅಂಕ 271.

Advertisement

Udayavani is now on Telegram. Click here to join our channel and stay updated with the latest news.

Next