Advertisement

ಪ್ರೊ ಕಬಡ್ಡಿ ಆಟಗಾರ ಕಾಶಿಲಿಂಗ್‌ ಬಂಧನ

12:00 AM Apr 16, 2020 | Sriram |

ಸಾಂಗ್ಲಿ: ಖ್ಯಾತ ಪ್ರೊ ಕಬಡ್ಡಿ ಆಟಗಾರ ಕಾಶಿಲಿಂಗ್‌  ಜೂಜು ಕೇಂದ್ರದಲ್ಲಿ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ 19 ಪ್ರಕರಣ ದಿನದಿಂದ ದಿನಕ್ಕೆ ಏರುತ್ತಿವೆ. ಲಾಕ್‌ಡೌನ್‌ ಅಲ್ಲದೇ ಹಲವಾರು ಕಡೆ ಸೀಲ್‌ಡೌನ್‌ ಮಾಡಲಾಗಿದ್ದು ಸರಕಾರ ಕೋವಿಡ್ 19 ನಿಯಂತ್ರಣಕ್ಕೆ ಬಿಗಿ ಕ್ರಮ ತೆಗೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಕಾನೂನು ಉಲ್ಲಂ ಸಿ ಅಕ್ರಮವಾಗಿ ಜೂಜು ಆಡುತ್ತಿದ್ದ ಕಾಶಿಲಿಂಗ್‌  ಮತ್ತಿತರರನ್ನು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಬಂಧಿಸಿದ್ದಾರೆ. ಈ ವೇಳೆ 1.60 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮರಾಠಿ ಪತ್ರಿಕೆ ವರದಿ ಮಾಡಿದ್ದು ಕಾಶಿಲಿಂಗ್‌ ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

ಪ್ರೊ ಕಬಡ್ಡಿಯಲ್ಲಿ ತಾರಾ ಆಟಗಾರನಾಗಿ ಕಾಶಿಲಿಂಗ್‌ ಗುರುತಿಸಿಕೊಂಡಿದ್ದರು. ದಬಾಂಗ್‌ ಡೆಲ್ಲಿ ಪರ ನಾಲ್ಕು ಆವೃತ್ತಿಯಲ್ಲಿ ಆಡಿದ್ದರಲ್ಲದೇ ಯು ಮುಂಬಾ ತಂಡದ ಪರವಾಗಿಯೂ ಆಡಿದ್ದರು. 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ತಂಡದ ಪರ ಆಡಿದ್ದಾರೆ. ಪ್ರೊ ಕಬಡ್ಡಿ 5ನೇ ಆವೃತ್ತಿಯ ಮೊದಲ ಅವಧಿಯಲ್ಲಿ ರೈಡಿಂಗ್‌ನಿಂದ ಒಟ್ಟು 15 ಅಂಕ ಕಲೆ ಹಾಕಿದ್ದ ಮೊದಲ ಆಟಗಾರ ಎನಿಸಿಕೊಂಡಿದ್ದರು. ತೆಲುಗು ಟೈಟಾನ್ಸ್‌ ವಿರುದ್ಧ ಪಂದ್ಯವೊಂದರಲ್ಲಿ 24 ಅಂಕ ಕಲೆ ಹಾಕಿದ್ದ ಸಾಧನೆ ಮಾಡಿದ್ದರು. 2019ರ ಪ್ರೊ ಕಬಡ್ಡಿ ಹರಾಜಿನಲ್ಲಿ ಕಾಶಿಲಿಂಗ್‌ ಮಾರಾಟವಾಗದೆ ಉಳಿದಿದ್ದರು.

2015ರಲ್ಲಿ ಕಾಶಿಲಿಂಗ್‌ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಕಾಶಿಲಿಂಗ್‌ ಅಡೆRಯನ್ನು ಸಾಂಗ್ಲಿ ಪೊಲೀಸರು ಬಂಧಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ಮಹಿಳೆ ಜತೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದ ದೂರು ಕಾಶಿಲಿಂಗ್‌ ವಿರುದ್ಧ ದಾಖಲಾಗಿತ್ತು. ಮಾತ್ರವಲ್ಲ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿ ಇಲ್ಲದಿದ್ದರೆ ಕೊಲ್ಲುವುದಾಗಿ ಕಾಶಿಲಿಂಗ್‌ ಬೆದರಿಕೆ ಹಾಕಿದ್ದ ಎಂದು ಮಹಿಳೆ ಪೊಲೀಸ್‌ ದೂರಿನಲ್ಲಿ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next