Advertisement
ಜಿದ್ದಾಜಿದ್ದಿನಿಂದ ಕೂಡಿದ್ದ ಮೊದಲಾರ್ಧದಲ್ಲಿ ಬೆಂಗಾಲ್ 13-12 ಅಂತರದಿಂದ ಮುನ್ನಡೆ ಸಾಧಿಸಿತ್ತು. ಬಳಿಕ ದ್ವಿತಿಯಾರ್ಧದಲ್ಲಿ ತಿರುಗಿ ಬಿದ್ದ ಗುಜರಾತ್ ರೈಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಮಿಂಚಿತು. ಈ ಮೂಲಕ ಕೊನೆಯ 5 ನಿಮಿಷದಲ್ಲಿ ಬೆಂಗಾಲ್ ತಂಡವನ್ನು ಹಿಮ್ಮೆಟ್ಟಿಸಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಗುಜರಾತ್ ಗೆಲುವು ಒಲಿಸಿಕೊಂಡಿತು. ಗುಜರಾತ್‌ಗೆ 14ನೇ ಪಂದದಲ್ಲಿ ಒಲಿದ 5 ನೇ ಗೆಲುವು ಇದಾಗಿದೆ. ಗುಜರಾತ್ ಪರ ರಾಕೇಶ್ (4), ಓಸ್ತರಾಕ್ (4), ಅಂಕ ಗಳಿಸಿದರೆ ಬೆಂಗಾಲ್ ಪರ ನಾಯಕ ಮಣಿಂದರ್ ಸಿಂಗ್ (9), ರಾಣ್ ಸಿಂಗ್ (6), ನಬೀಭಕ್Ò (5) ಅಂಕ ಸಂಪಾದಿಸಿದರು.
ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ಬೆಂಗಳೂರು ಬುಲ್ಸ್ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಮಂಗಳವಾರದ ದ್ವಿತೀಯ ಪಂದ್ಯದಲ್ಲಿ ರೈಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಸರ್ವಾಂಗಿಣ ಪ್ರದರ್ಶನ ತೋರಿದ ಬುಲ್ಸ್ 31-26ಅಂತರದಿಂದ ಯುಪಿ ಯೋಧಾವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಬುಲ್ಸ್ ಪರ ನಾಯಕ ಪವನ್ ಸೆಹ್ರವಾತ್ (9), ಅಮನ್ (7), ಭರತ್ (6) ಅಂಕ ಗಳಿಸಿದರು.