Advertisement

ಪ್ರೊ ಕಬಡ್ಡಿ: ಬೆಂಗಳೂರು –ಪಾಟ್ನಾ ಪಂದ್ಯ ಟೈ

06:20 AM Dec 20, 2018 | |

ಪಂಚಕುಲ: ಈಗಾಗಲೇ ಪ್ರೊ ಕಬಡ್ಡಿ 6ನೇ ಆವೃತ್ತಿ ನಾಕೌಟ್‌ ಸುತ್ತಿಗೆ ಲಗ್ಗೆ ಇಟ್ಟಿರುವ ಬೆಂಗಳೂರು ಬುಲ್ಸ್‌ ಬುಧವಾರ ಪಂಚಕುಲ ಚರಣದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ವಿರುದ್ಧ 40-40 ಅಂಕಗಳ ರೋಚಕ ಟೈ ಸಾಧಿಸಿತು. ಒಟ್ಟಾರೆ ಕೂಟದಲ್ಲಿ ಬೆಂಗಳೂರು ಸಾಧಿಸಿದ 2ನೇ ಟೈ. ಪಾಟ್ನಾಗೂ ಇದು 2ನೇ ಟೈ ಪಂದ್ಯವಾಗಿದೆ.

Advertisement

ಕೊನೆಯ 20 ಸೆಕೆಂಡ್‌ಗಳಲ್ಲಿ…
ಬೆಂಗಳೂರು ಪರ ತಾರಾ ಆಟಗಾರ ರೋಹಿತ್‌ ಕುಮಾರ್‌ (16 ಅಂಕ) ಹಾಗೂ ಪವನ್‌ ಸೆಹ್ರಾವತ್‌ (8 ಅಂಕ) ರೈಡಿಂಗ್‌ನಿಂದ ಮಿಂಚಿದರು. ಇವರಿಗೆ ಮಹೇಂದ್ರ ಸಿಂಗ್‌ (6 ಅಂಕ) ಅತ್ಯಾಕರ್ಷಕ ಟ್ಯಾಕಲ್‌ ಮೂಲಕ ಸಾಥ್‌ ನೀಡಿದರು. ಬೆಂಗಳೂರು ಪಡೆ ಬಹುತೇಕ ಗೆಲುವಿನ ಸಮೀಪಕ್ಕೆ ಬಂದಿತ್ತು. ಆದರೆ ಕೊನೆಯ 20 ಸೆಕೆಂಡ್‌ಗಳಲ್ಲಿ ಪಾಟ್ನಾ ತಂಡ ಪಂದ್ಯದ ಚಿತ್ರಣವನ್ನೇ ಪಾಟ್ನಾ ಬದಲಾಯಿಸಿತು. ಒಂದು ಅಂಕವನ್ನು ಟ್ಯಾಕಲ್‌ನಿಂದ ಹಾಗೂ 2 ಅಂಕವನ್ನು ರೈಡಿಂಗ್‌ನಿಂದ ತಂದ ವಿಕಾಸ್‌ ಜಗ್ಲಾನ್‌ (4 ಅಂಕ) ಬೆಂಗಳೂರು ಕೈಯಿಂದ ಗೆಲುವು ಕಸಿದುಕೊಂಡರು. ಪ್ರದೀಪ್‌ ನರ್ವಾಲ್‌ (17 ಅಂಕ) ಶ್ರೇಷ್ಠ ಮಟ್ಟದ ರೈಡಿಂಗ್‌ ನಡೆಸಿ ತಂಡದ ಪರ ವೈಯಕ್ತಿಕ ಶ್ರೇಷ್ಠ ಅಂಕ ಗಳಿಸಿರು.

Advertisement

Udayavani is now on Telegram. Click here to join our channel and stay updated with the latest news.

Next