Advertisement

Pro Kabaddi Auction : ಸಚಿನ್‌, ರೇಝ ದುಬಾರಿ ಆಟಗಾರರು

11:15 PM Aug 15, 2024 | Team Udayavani |

ಮುಂಬಯಿ: ಗುರುವಾರದ ಪ್ರೊ ಕಬಡ್ಡಿ ಲೀಗ್‌ ಹರಾಜಿನಲ್ಲಿ ಇರಾನ್‌ನ ಮೊಹಮ್ಮದ್‌ ರೇಝ ಶಾದ್ಲೂಯಿ ಮತ್ತು ಭಾರತದ ಸ್ಟಾರ್‌ ಆಟಗಾರ ಸಚಿನ್‌ 2 ಕೋ. ರೂ. ಮೊತ್ತದ ಸೀಮೆಯನ್ನು ದಾಟಿದ್ದಾರೆ. ಗುಮಾನ್‌ ಸಿಂಗ್‌ 2 ಕೋ.ಗಡಿಗಿಂತ ಸ್ವಲ್ಪವೇ ಹಿಂದುಳಿದರು.

Advertisement

ಹರಾಜಿನಲ್ಲಿ “ಎ’ ವಿಭಾಗದ ಅಂತಾರಾಷ್ಟ್ರೀಯ ಆಟಗಾರರಿಗೆ ಮೊದಲ ಆದ್ಯತೆ ಲಭಿಸಿತು. ಇವರಲ್ಲಿ ಮೊಹಮ್ಮದ್‌ ರೇಝ 2.07 ಕೋಟಿ ರೂ. ಮೊತ್ತಕ್ಕೆ ಹರಿಯಾಣ ಪಾಲಾದರು. ಮುಂಬಾ 1.80 ಕೋಟಿ ರೂ. ತನಕ ಬಂದು ಹಿಂದೆ ಸರಿದ ಬಳಿಕ ಹರಿಯಾಣ ಕಣಕ್ಕೆ ಇಳಿದಿತ್ತು. ಇದರೊಂದಿಗೆ ಶಾದ್ಲೂಯಿ ಸತತ 2ನೇ ಪಿಕೆಎಲ್‌ ಹರಾಜಿನಲ್ಲೂ 2 ಕೋಟಿ ರೂ. ಮೊತ್ತದ ಗಡಿ ದಾಟಿದರು.

ಸಚಿನ್‌ ಅವರನ್ನು 2.15 ಕೋಟಿ ರೂ. ಮೊತ್ತಕ್ಕೆ ತಮಿಳ್‌ ತಲೈವಾಸ್‌ ಖರೀದಿಸಿತು. ಗುಮಾನ್‌ ಸಿಂಗ್‌ 1.97 ಕೋಟಿ ರೂ. ಮೊತ್ತಕ್ಕೆ ಗುಜರಾತ್‌ ತಂಡದ ಪಾಲಾದರು. ಜೈಪುರ್‌ ತಂಡದ ಮಾಜಿ ನಾಯಕ ಸುನೀಲ್‌ ಕುಮಾರ್‌ 1.015 ಕೋಟಿ ರೂ. ಮೊತ್ತಕ್ಕೆ ಯು ಮುಂಬಾ ತಂಡವನ್ನು ಸೇರಿಕೊಂಡರು. ಮಣಿಂದರ್‌ ಸಿಂಗ್‌ ಮತ್ತೆ ಬೆಂಗಾಲ್‌ ತಂಡದಲ್ಲಿ ಕಾಣಿಸಿಕೊಂಡರು.

ಇವರಿಗೆ ಲಭಿಸಿದ್ದು 1.15 ಕೋಟಿ ರೂ.ಪಿಕೆಎಲ್‌ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಪವನ್‌ ಸೆಹ್ರಾವತ್‌ ಅವರಿಗೆ ಬುಲ್ಸ್‌ ಮತ್ತು ಮುಂಬಾ ಪೈಪೋಟಿಗೆ ಇಳಿದವು. ಇವರು 1.72 ಕೋಟಿ ಮೊತ್ತಕ್ಕೆ ಮುಂಬಾ ಪಾಲಾದರೂ ಎಫ್ಬಿಎಂ (ಫೈನಲ್‌ ಬಿಡ್‌ ಮ್ಯಾಚ್‌) ಮೂಲಕ ಮರಳಿ ತೆಲುಗು ಟೈಟಾನ್ಸ್‌ ಸೇರಿಕೊಂಡರು. ಕಳೆದ ವರ್ಷ ಇವರಿಗೆ 2.60 ಕೋ. ರೂ. ಲಭಿಸಿತ್ತು. ಡಿಫೆಂಡರ್‌ ಕೃಷ್ಣನ್‌ ಕೂಡ ಟೈಟಾನ್ಸ್‌ ಸೇರಿಕೊಂಡರು. ಇವರಿಗೆ ಲಭಿಸಿದ್ದು 70 ಲಕ್ಷ ರೂ. ಇರಾನಿಯನ್‌ ಸುಲ್ತಾನ್‌’ ಫ‌ಜಲ್‌ ಅಟ್ರಾಚಲಿ ಮೂಲ ಬೆಲೆ 50 ಲಕ್ಷ ರೂ.ಗೆ ಬೆಂಗಾಲ್‌ ಪಾಲಾದರು.

Advertisement

Udayavani is now on Telegram. Click here to join our channel and stay updated with the latest news.

Next