Advertisement

ಹರ್ಯಾಣ ಆಟಕ್ಕೆ ಬೆಚ್ಚಿಬಿದ್ದ ಡೆಲ್ಲಿ!

07:00 AM Nov 26, 2018 | Team Udayavani |

ಪುಣೆ: ಪ್ರೊ ಕಬಡ್ಡಿ 6ನೇ ಆವೃತ್ತಿ ಪುಣೆಯಲ್ಲಿ ನಡೆಯುತ್ತಿರುವ ಬೆಂಗಳೂರು ಚರಣದ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ 34-27 ಅಂಕಗಳ ಅಂತರದಿಂದ ದಬಾಂಗ್‌ ಡೆಲ್ಲಿ ತಂಡವನ್ನು ಸೋಲಿಸಿತು. 

Advertisement

ಶಿವಛತ್ರಪತಿ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತೀರ ಕಳಪೆ ಆಟ ಪ್ರದರ್ಶಿಸಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿತು.

ಹರ್ಯಾಣ ಸಾಂ ಕ ಪ್ರದರ್ಶನ: ಒಟ್ಟಾರೆ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ ಸಾಂ ಕ  ಪ್ರದರ್ಶನ ನೀಡಿತು. ತಂಡದ ಪರ ರೈಡರ್‌ ವಿಕಾಸ್‌ ಕಾಂಡೋಲ (9 ಅಂಕ) ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದರು. ಮತ್ತೋರ್ವ ರೈಡರ್‌ ನವೀನ್‌ (5 ಅಂಕ) ಮಿಂಚಿದರು. ರಕ್ಷಣಾ ವಿಭಾಗದಲ್ಲಿ ಸಚಿನ ಶಿಂಗಡೆ (4 ಅಂಕ) ಡೆಲ್ಲಿ ರೈಡರ್‌ಗಳನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ಡೆಲ್ಲಿ ತಂಡದ ಪರ ರೈಡರ್‌ಗಳಾದ ನವೀನ್‌ ಕುಮಾರ್‌ (10  ಅಂಕ), ಚಂದ್ರನ್‌ ರಂಜಿತ್‌ (5 ಅಂಕ) ಹಾಗೂ ರವೀಂದರ್‌ ಪಾಹಲ್‌ (5 ಅಂಕ) ಟ್ಯಾಕಲ್‌ ನಡೆಸಿದರೂ ಸಂಘಟಿತ ಪ್ರದರ್ಶನದ ಕೊರತೆಯಿಂದ ಡೆಲ್ಲಿ ಸೋಲು ಅನುಭವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next