Advertisement
ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ನೀರಸವಾಗಿ ಆಡಿದ್ದವು.ಆದರೆ ದ್ವಿತೀಯ ಅವಧಿಯಲ್ಲಿ ಜೈಪುರ ಮತ್ತು ಗುಜರಾತ್ ಭರ್ಜರಿಯಾಗಿ ಆಡಿದ್ದವು. ಇದರಿಂದ ಅಂಕ ಬಹುತೇಕ ಸಮಬಲದಿಂದಲೇ ಸಾಗಿದ್ದವು. ಆದರೆ ಪಂದ್ಯ ಮುಗಿಯಲು ಒಂದು ನಿಮಿಷ ವಿರುವಾಗ ಚಂದ್ರನ್ ರಂಜಿತ್ ಎರಡು ಅಂಕ ಪಡೆದು ಜೈಪುರವನ್ನು ಆಲೌಟ್ ಮಾಡಿಸಿದ್ದರಿಂದ ಗುಜರಾತ್ ಗೆಲ್ಲುವಂತಾಯಿತು.
Related Articles
ಅಂಕ ಖಾತೆ ತೆರೆದ ಗುಜರಾತ್ ಮೊದಲ ಎರಡು ನಿಮಿಷಗಳಲ್ಲಿ ಮೂರಂಕ ಗಳಿಸಿ ಮುನ್ನಡೆ ಸಾಧಿಸಿತು. ಆಬಳಿಕ ಉಭಯ ತಂಡಗಳು ನಿಧಾನಗತಿಯಲ್ಲಿ ಆಡಿದ್ದರಿಂದ ಮೊದಲ 10 ನಿಮಿಷ ಮುಗಿದಾಗ 5-5 ಸಮಬಲದಲ್ಲಿದ್ದವು. ಮೊದಲ ಅವಧಿಯ ಆಟ ಮುಗಿದಾಗ ಉಭಯ ತಂಡಗಳು ಮತ್ತೆ 11-11 ಸಮಬಲ ಸ್ಥಾಪಿಸಿದ್ದವು.
Advertisement
ದ್ವಿತೀಯ ಅವಧಿಯಲ್ಲಿಯೂ ಉಭಯ ತಂಡಗಳು ಸಮಬಲದ ಹೋರಾಟ ನೀಡಿದ್ದರಿಂದ ಅಂಕ ಕೂಡ ಒಂದೇ ರೀತಿ ಸಾಗಿದ್ದವು. ಆದರೆ ಪಂದ್ಯ ಮುಗಿಯಲು ಒಂದು ನಿಮಿಷವಿರುವಾಗ ಚಂದ್ರನ್ ರಂಜಿತ್ ಸೂಪರ್ ರೈಡ್ ಮೂಲಕ ಜೈಪುರವನ್ನು ಆಲೌಟ್ ಮಾಡಿಸಿದ್ದರಿಂದ ಗುಜರಾತ್ ಗೆಲುವಿನ ನಗೆ ಚೆಲ್ಲಿತು. ಈ ನಾಲ್ಕು ಅಂಕದಿಂದ ಗುಜರಾತ್ 28-22ರಿಂದ ಮುನ್ನಡೆ ಸಾಧಿಸಿತಲ್ಲದೇ ಅಂತಿಮವಾಗಿ 29-23ರಿಂದ ಜಯಭೇರಿ ಬಾರಿಸಿತು.
ಬೆಂಗಾಲ್‌ಗೆ 25-19 ಅಂತರದ ಗೆಲುವುದಿನದ ಎರಡನೇ ಪಂದ್ಯದಲ್ಲಿ ಎ ವಲಯದ ಮೂರನೇ ಸ್ಥಾನಿ ಪುನೇರಿ ಪಲ್ಟಾನ್ಸ್ ತಂಡವನ್ನು ಬಿ ವಲಯದ ಬೆಂಗಾಲ್ ವಾರಿಯರ್ ತಂಡವು 25-19 ಅಂಕಗಳಿಂದ ಉರುಳಿಸಿದೆ. ಈ ಸೋಲಿನಿಂದ ಪುನೇರಿ ತಂಡದ ಸತತ ಐದು ಗೆಲುವಿನ ಸರಮಾಲೆ ಅಂತ್ಯಗೊಂಡಿದೆ.