Advertisement

ನಮಗೆ ಹಿಂದಿನದ್ದನ್ನು ಬದಲಾಯಿಸುವುದು ಅಸಾಧ್ಯವಾಗಿದೆ : PRK

11:07 AM Nov 20, 2021 | Team Udayavani |

ಕನ್ನಡಿಗರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ನಮ್ಮಿಂದ ದೂರ ಇದ್ದರೂ ಅವರ ನೆನಪುಗಳು ಮಾತ್ರ ಸದಾ ಜೀವಂತವಾಗಿವೆ. ಅವರು ಮಾಡಿರುವ ಕಲಾ ಸೇವೆ ಜನರ ಮನದಲ್ಲಿ ಜೀವಂತವಾಗಿದೆ. ಪುನೀತ್ ಒಡೆತನದಲ್ಲಿ ಪಿ.ಆರ್.ಕೆ ಸಂಸ್ಥೆ ನಿರ್ಮಾಣವಾಗಿತ್ತು. ಅಪ್ಪು ಅಕಾಲಿಕ ಮರಣದ ನಂತರ ಸಂಸ್ಥೆ ಪೂರ್ಣ ಜವಾಬ್ದಾರಿಯನ್ನು ಪುನೀತ್ ಪತ್ನಿ ಅಶ್ವಿನಿ ವಹಿಸಿಕೊಂಡಿದ್ದಾರೆ.

Advertisement

ಇದೀಗ ಪಿಆರ್ ಕೆ ಸಂಸ್ಥೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ಅಭಿಮಾನಿಗಳಲ್ಲಿ ಮತ್ತೆ ಉತ್ಸಾಹ ಮೂಡಿಸಿದೆ. ”ನಮಗೆ ಹಿಂದಿನದ್ದನ್ನು ಬದಲಾಯಿಸುವುದು ಅಸಾಧ್ಯವಾಗಿದೆ. ಆದರೆ ಪುನೀತ್ ರಾಜ್‌ಕುಮಾರ್ ಅವರು ನಮಗೆ ನೀಡಿರುವ ಉತ್ಸಾಹ ಹಾಗೂ ಸ್ಪೂರ್ತಿಯೊಂದಿಗೆ ಪಿಆರ್‌ಕೆ ಪ್ರೊಡಕ್ಷನ್ ಮತ್ತು ಪಿಆರ್‌ಕೆ ಆಡಿಯೋದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸಲು ಎದುರು ನೋಡುತ್ತೇವೆ. ನಮ್ಮ ಪ್ರಯಾಣವನ್ನು ಪುನರಾರಂಭಿಸುತ್ತಾ, ಅವರ ಕನಸುಗಳನ್ನು ನನಸಾಗಿಸುವಲ್ಲಿ ನಿಮ್ಮ ಬೆಂಬಲವನ್ನು ನಿರೀಕ್ಷಿಸುತ್ತೇವೆಎಂದಿದ್ದಾರೆ.

ಪಿಆರ್ ಕೆ ಸಂಸ್ಥೆಯಿಂದ ಈಗಾಗಲೇ  ‘ಕವಲುದಾರಿ’, ‘ಫ್ರೆಂಚ್ ಬಿರಿಯಾನಿ’, ಮಹಿಳಾ ಪ್ರಧಾನ ಸಿನಿಮಾ ‘ಲಾ’, ‘ಮಾಯಾಬಜಾರ್’ ಸಿನಿಮಾಗಳನ್ನು ನಿರ್ಮಾಣವಾಗಿವೆ. ಪ್ರಸ್ತುತ ‘ಫ್ಯಾಮಿಲಿ ಪ್ಯಾಕ್’ ಹೆಸರಿನ ಕೌಟುಂಬಿಕ ಹಾಸ್ಯ ಸಿನಿಮಾ, ‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯ ನಿರ್ದೇಶಿಸುತ್ತಿರುವ ‘ಮ್ಯಾನ್ ಆಫ್ ದಿ ಮ್ಯಾಚ್’ ಹೆಸರಿನ ಸಿನಿಮಾ, ರಾಘವ್ ನಾಯಕ್, ಪ್ರಶಾಂತ್ ರಾಜ್ ನಿರ್ದೇಶನದ ‘ಓ2’ ಹೆಸರಿನ ಭಿನ್ನ ಕತೆಯುಳ್ಳ ಸಿನಿಮಾಗಳು ನಿರ್ಮಾಣ ಹಂತದಲ್ಲಿದ್ದವು ಅಷ್ಟರಲ್ಲಿ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದರು.

Advertisement

Udayavani is now on Telegram. Click here to join our channel and stay updated with the latest news.

Next