ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಪುತ್ರ ಆಯುಷ್ ಹುಟ್ಟು ಹಬ್ಬದ ಸಂಭ್ರಮದಲ್ಲಿ, ”ಡಿಟೆಕ್ವೀವ್ ತೀಕ್ಷ್ಣ” ಚಿತ್ರದ ಮೋಷನ್ ಪೋಸ್ಟರ್ ಲಾಂಚ್ ಮಾಡಲಾಗಿದೆ.
‘ಡಿಟೆಕ್ಟಿವ್ ತೀಕ್ಷ್ಣ’ ಪ್ರಿಯಾಂಕಾ ಉಪೇಂದ್ರ ನಟನೆಯ 50ನೇ ಸಿನಿಮಾ ಎನ್ನುವುದು ವಿಶೇಷವಾಗಿದ್ದು, ಬರೋಬ್ಬರಿ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿದೆ.
ಪತ್ನಿ ಪ್ರಧಾನ ಭೂಮಿಕೆಯಲ್ಲಿ ನಟಿಸುತ್ತಿರುವ ”ಡಿಟೆಕ್ವೀವ್ ತೀಕ್ಷ್ಣ” ಚಿತ್ರದ ಮೋಷನ್ ಪೋಸ್ಟರ್ ಲಾಂಚ್ ಮಾಡಿ ಮಾತನಾಡಿದ ಉಪ್ಪಿ,ವಯಸ್ಸು 20, ಚಿತ್ರ 50. ಕಾಲ ಎಷ್ಟು ಬೇಗ ಓಡುತ್ತಿದೆ ಅಂದರೆ, ಈಗಾಗಲೇ 50 ಮುಗಿಸಿದ್ದೀರಿ, ನಾನು 53 ಮುಗಿಸಿ 54ರಲ್ಲಿ ಇದ್ದೇನೆ. ನನಗಿಂತ ವೇಗವಾಗಿ ಹೋಗುತ್ತಿದ್ದೀರಿ ಎಂದರು.
”ಡಿಟೆಕ್ವೀವ್ ತೀಕ್ಷ್ಣ” ಕಥೆಯನ್ನು ಇನ್ನೂ ಉಪ್ಪಿಗೆ ಹೇಳಿಲ್ಲ. ಇದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಪ್ರಿಯಾಂಕಾ ಉಪೇಂದ್ರ ಸಂತಸವನ್ನು ಹಂಚಿಕೊಂಡಿದ್ದಾರೆ.
ತಿವಿಕ್ರಮ ರಘು ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ಇದು ಪತ್ತೆದಾರಿ ಚಿತ್ರ ಕಥೆ ಹೊಂದಿದೆ ಎಂದು ತಿಳಿದು ಬಂದಿದೆ. ಕ್ರಿಸ್ಮಸ್ ಹೊತ್ತಿಗೆ ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.