Advertisement

ಸನ್ನಿ, ದೀಪಿಕಾಳನ್ನೂ ಮೀರಿಸಿದ ಪ್ರಿಯಾ!

09:28 AM Feb 14, 2018 | Team Udayavani |

ಹೊಸದಿಲ್ಲಿ: ಬರೀ ಒಂದು ಕಣ್‌ಸನ್ನೆಯಿಂದ ರಾತ್ರೋರಾತ್ರಿ ಜನಪ್ರಿಯತೆ ಪಡೆದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಇದೀಗ ಅಂತರ್ಜಾಲದಲ್ಲಿ ಬಾಲಿವುಡ್‌ ನಟಿಯರನ್ನೂ ಮೀರಿಸಿದ್ದಾರೆ. 

Advertisement

ಬಾಲಿವುಡ್‌ ನಟಿ ಸನ್ನಿ ಲಿಯೋನ್‌, ದೀಪಿಕಾ ಪಡುಕೋಣೆ ಹಾಗೂ ಅಲಿಯಾ ಭಟ್‌ಗಿಂತ ಹೆಚ್ಚು ಜನರು ಗೂಗಲ್‌ನಲ್ಲಿ ಈ “ಕಣ್‌ಸನ್ನೆ ಪ್ರಿಯಾ’ ಬಗ್ಗೆ ಹುಡುಕಾಟ ನಡೆಸಿದ್ದಾರೆ. “ಒರು ಅಡಾರ್‌ ಲವ್‌’ ಸಿನೆಮಾದಲ್ಲಿ ಪ್ರಿಯಾ ನಟಿಸಿದ್ದು, ಈ ಸಿನೆಮಾದ ದೃಶ್ಯವೊಂದು ಅಂತರ್ಜಾಲದಲ್ಲಿ ಭಾರೀ ಸೆನ್ಸೇಶನ್‌ ಸೃಷ್ಟಿಸಿದೆ. ಫೆಬ್ರವರಿ 11ರಿಂದ ಇವರ ಬಗ್ಗೆ ಗೂಗಲ್‌ನಲ್ಲಿ ಹೆಚ್ಚಿನ ಜನರು ಸರ್ಚ್‌ ಮಾಡುತ್ತಿದ್ದು, ಸನ್ನಿ ಲಿಯೋನ್‌ಗಿಂತಲೂ ಹೆಚ್ಚು ಬಾರಿ ಇವರ ಹೆಸರನ್ನು ಜನರು ನಮೂದಿಸಿ ಹುಡುಕಾಟ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next