Advertisement

ಸಂತ್ರಸ್ತರ ಭೇಟಿಯಾದ ಪ್ರಿಯಾಂಕಾ

09:20 AM Jul 22, 2019 | Team Udayavani |

ಲಕ್ನೋ: ಉತ್ತರ ಪ್ರದೇಶದ ಸೋನಭದ್ರದಲ್ಲಿ ಕಳೆದ ವಾರ ಹತ್ಯೆಗೀಡಾದವರ ಕುಟುಂಬ ಸದಸ್ಯರನ್ನು ಕೊನೆಗೂ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಭೇಟಿ ಮಾಡಿದ್ದಾರೆ. ಸೋನಭದ್ರಕ್ಕೆ ತೆರಳಲು ಶನಿವಾರ ಪೊಲೀಸರು ಅಡ್ಡಿಪಡಿಸಿದ್ದರಿಂದಾಗಿ, ರಸ್ತೆ ಮಧ್ಯದಲ್ಲೇ ಪ್ರತಿಭಟನೆ ನಡೆಸಿ ಮಿರ್ಜಾಪುರ ಗೆಸ್ಟ್‌ ಹೌಸ್‌ಗೆ ವಾಪಸಾಗಿದ್ದರು. ಮಿರ್ಜಾಪುರ ಗೆಸ್ಟ್‌ ಹೌಸ್‌ನಲ್ಲೇ ಸಂತ್ರಸ್ತರ ಕುಟುಂಬಸ್ಥರನ್ನು ಪ್ರಿಯಾಂಕಾ ಭೇಟಿ ಮಾಡಿದ್ದಾರೆ.

Advertisement

ಈ ಬಗ್ಗೆ ಮಾತನಾಡಿದ ಪ್ರಿಯಾಂಕಾ, ನಾನು ಇಲ್ಲಿಗೆ ಆಗಮಿಸಿದ ಉದ್ದೇಶ ಪೂರೈಸಿದೆ. ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದೇನೆ. ಸದ್ಯ ನಾನು ವಾಪಸಾಗುತ್ತಿದ್ದೇನೆ. ಆದರೆ ಮತ್ತೂಮ್ಮೆ ಆಗಮಿಸುತ್ತೇನೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಮಿರ್ಜಾಪುರದಿಂದ ತೆರಳಿದ ಪ್ರಿಯಾಂಕಾ ಕಾಶಿ ವಿಶ್ವನಾಥ ದೇಗುಲ ಮತ್ತು ಕಾಳ ಭೈರವ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ತನ್ನ ವೈಫ‌ಲ್ಯ ಮುಚ್ಚಿಡಲು ಸೆಕ್ಷನ್‌ ಜಾರಿ ಮಾಡಿದೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.

ಸೋನಭದ್ರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಅಲ್ಲಿಗೆ ಯಾರೂ ಭೇಟಿ ನೀಡಲು ಅವಕಾಶವಿಲ್ಲ ಎಂಬ ಕಾರಣಕ್ಕೆ ಮಾರ್ಗ ಮಧ್ಯೆ ಮಿರ್ಜಾಪುರದ ನಾರಾಯಣಪುರದಲ್ಲೇ ಪ್ರಿಯಾಂಕಾ ಹಾಗೂ ಇತರ ಕಾಂಗ್ರೆಸ್‌ ಮುಖಂಡರನ್ನು ಪೊಲೀಸರು ತಡೆದಿದ್ದರು. ಅವರನ್ನು ವಶಕ್ಕೆ ಪಡೆದು ಮಿರ್ಜಾಪುರ ಗೆಸ್ಟ್‌ಹೌಸ್‌ಗೆ ಕರೆತಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next