Advertisement
ಏನಾಗಿತ್ತು?:ಜಗದೀಶ್‌ಪುರ ಪೊಲೀಸ್ ಠಾಣೆನ ಕೊಠಡಿಯಲ್ಲಿ ಇರಿಸಲಾಗಿದ್ದ 25 ಲಕ್ಷ ರೂ. ಹಣ ಹಾಗೂ ಪಿಸ್ತೂಲುಗಳನ್ನು ಅಪಹರಿಸಿರುವುದಾಗಿ ಅರುಣ್ ಕುಮಾರ್ ಮೇಲೆ ಗುಮಾನಿಗೊಂಡಿದ್ದ ಪೊಲೀಸರು ಗುರುವಾರ ಆತನ ಮನೆಗೆ ಆಗಮಿಸಿ, ಆತನ ವಿಚಾರಣೆಗೆ ಮುಂದಾಗಿದ್ದರು. ಪೊಲೀಸರನ್ನು ನೋಡಿದ ಕೂಡಲೇ ಅರುಣ್ ಗಾಬರಿಗೊಂಡಿದ್ದ. ಪೊಲೀಸರು ಆತನ ವಿಚಾರಣೆ ಆರಂಭಿಸುತ್ತಿದ್ದಂತೆ ಅಸ್ವಸ್ಥನಾದ ಆತನನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾದರೆ ಆತ ಮೃತಪಟ್ಟನೆಂದು ಮೂಲಗಳು ತಿಳಿಸಿವೆ.
ಅರುಣ್ ಸಾವಿನ ಸುದ್ದಿ ವಿವಾದಕ್ಕೆ ತಿರುಗುತ್ತಿದ್ದಂತೆ, ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇವರಲ್ಲಿ ಆರು ಪೊಲೀಸ್ ಸಿಬ್ಬಂದಿ, ಓರ್ವ ಸ್ಟೇಷನ್ ಹೌಸ್ ಮಾಸ್ಟರ್ ಸೇರಿದ್ದಾರೆ. ಇದನ್ನೂ ಓದಿ:ಪಂಚಭಾಷಾ ಹಿರಿಯ ನಟಿ ಲಕ್ಷ್ಮೀ ಕೊಲ್ಲೂರು ಕ್ಷೇತ್ರ ಭೇಟಿ
Related Articles
ಸುದ್ದಿ ತಿಳಿದ ತಕ್ಷಣವೇ ಅಖಾಡಕ್ಕಿಳಿದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, ಅರುಣ್ ಕುಮಾರ್ ಅವರ ಕುಟುಂಬವನ್ನು ಭೇಟಿ ಮಾಡಲು ತೆರಳಿದ್ದರು. ಆದರೆ, ಅವರನ್ನು ಲಕ್ನೋ ಆಗ್ರಾ ಹೆದ್ದಾರಿಯಲ್ಲಿ ಪೊಲೀಸರು ತಡೆದಿದ್ದಾರೆ. ಇದು ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ. ಇದನ್ನು ಟ್ವಿಟರ್‌ನಲ್ಲಿ ಖಂಡಿಸಿರುವ ಪ್ರಿಯಾಂಕಾ ವಾದ್ರಾ, “ಅರುಣ್ ವಾಲ್ಮೀಕಿಯು ಪೊಲೀಸರ ವಿಚಾರಣೆ ವೇಳೆ ಸಾವನ್ನಪ್ಪಿದ್ದಾರೆ. ಆತನ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ಆತನ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುತ್ತಿದ್ದ ನನ್ನನ್ನು ಮಾರ್ಗ ಮಧ್ಯೆಯೇ ತಡೆಯಲಾಗಿದೆ. ಇದು ಏಕೆ? ಉತ್ತರ ಪ್ರದೇಶ ಸರ್ಕಾರ ನನಗೆ ಹೆದರುತ್ತದೆಯೇ?” ಎಂದು ಕೇಳಿದ್ದಾರೆ.
Advertisement