ಹೊಸದಿಲ್ಲಿ: ಅಮೇಠಿ ತೊರೆದು ರಾಯ್‌ಬರೇಲಿಯಿಂದ ಸಂಸದ ರಾಹುಲ್ ಗಾಂಧಿ ಸ್ಪರ್ಧಿಸಿರುವುದನ್ನು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಸಮರ್ಥಿಸಿಕೊಂಡಿದ್ದಾರೆ. ಅತ್ಯಂತ ಸೂಕ್ಷ್ಮವಾಗಿ ವಿಮರ್ಶೆ ಮಾಡಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಹುಲ್ ಪರಂಪರೆಯ ಕಾರಣದಿಂದ ರಾಯ್‌ಬರೇಲಿಯಲ್ಲಿ ಸ್ಪರ್ಧಿಸಿಲ್ಲ. ಹೊಣೆಗಾರಿಕೆಯಿಂದ ಸ್ಪರ್ಧಿಸಿದ್ದಾರೆ. ದೀರ್ಘ ಚುನಾವ ಣೆಯ ಹಂತದಲ್ಲಿ ಕೆಲವೊಂದು ಚದುರಂಗದಾಟದ ಹಂತಗಳು ಇರುತ್ತವೆ ಎಂದರು. ಪ್ರಿಯಾಂಕಾ ಸ್ಪರ್ಧಿಸದಿರುವುದನ್ನು ಸಮರ್ಥಿಸಿಕೊಂಡ ಅವರು, “ಮುಂದಿನ ದಿನಗಳಲ್ಲಿ ನಡೆ ಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಬಹುದು ಎಂದರು.
ರಾಜೀವ್ ಗಾಂಧಿ ಅವಧಿಯಲ್ಲಿ ಕಾಂಗ್ರೆಸ್‌ಗೆ ಸಿಕ್ಕಿದ್ದು ಶೇ. 84 ಮತ
ಅಮೇಠಿ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಹೌದಾದರೂ ಆ ಪಕ್ಷಕ್ಕೆ ಅತ್ಯಧಿಕ ಮತ, ಶೇ.81ರಷ್ಟು ಪ್ರಾಪ್ತವಾದದ್ದು 1981ರಲ್ಲಿ. ಆ ಸಂದರ್ಭದಲ್ಲಿ ರಾಜೀವ್ ಗಾಂಧಿಯವರು ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. 1998ರಲ್ಲಿ ಕಾಂಗ್ರೆಸ್‌ಗೆ ಕನಿಷ್ಠವೆಂದರೆ ಶೇ.31.1 ಮತ ಪ್ರಾಪ್ತಿಯಾಗಿತ್ತು. ಈ ಕ್ಷೇತ್ರದಿಂದ ಕಾಂಗ್ರೆಸ್ 11 ಬಾರಿ ಜಯ ಸಾಧಿಸಿದೆ.