Advertisement

ಪ್ರಿಯಾಂಕ್‌ ಖರ್ಗೆ v/s ಪ್ರತಾಪ್‌ ಸಿಂಹ:ಯುವ ನಾಯಕರ ಟ್ವೀಟರ್‌ ವಾರ್‌!

03:07 PM Apr 15, 2017 | Team Udayavani |

ಮೈಸೂರು : ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಸಂಸದ ಪ್ರತಾಪ್‌ ಸಿಂಹ ನಡುವೆ ಟ್ವೀಟರ್‌ನಲ್ಲಿ  ಭಾರೀ ಟ್ವೀಟ್‌ ಸಮರ ನಡೆದಿದ್ದು, ಇಬ್ಬರೂ ಪೈಪೋಟಿಗೆ ಬಿದ್ದು ಕಿತ್ತಾಟ ನಡೆಸಿಕೊಂಡಿದ್ದಾರೆ. 

Advertisement

ಉಪಚುನಾವಣೆ ಫ‌ಲಿತಾಂಶಗಳ ಕುರಿತಾಗಿನ ಚರ್ಚೆ ವೇಳೆ ಅಂಬೇಡ್ಕರ್‌ ಜಯಂತಿಯಂದು ಪ್ರತಾಪ್‌ ರನ್ನು ‘ಪೇಪರ್‌ ಸಿಂಹ’ ಎಂದು ಪ್ರಿಯಾಂಕ್‌ ಬರೆದಿದ್ದು, ಇದಕ್ಕೆ ಉತ್ತರವಾಗಿ ‘ನಿಮ್ಮ ಹೆಸರೇ ನೆಹರೂ ಕುಟುಂಬದ ಜೀತವನ್ನು ಸೂಚಿಸುತ್ತದೆ. ಪದಗಳ ಬಳಕಗೆ ಅವಕಾಶವಿದೆ. ಆದರೆ ಅವುಗಳನ್ನು ಬಳಸುವಾಗ ಎಚ್ಚರವಿರಲಿ’ ಎಂದು ಬರೆದಿದ್ದಾರೆ.

‘ನಿಮ್ಮ ತಂದೆ ಗುರುಮಿಟಕಲ್‌ನಿಂದ ಚಿತ್ತಾಪುರಕ್ಕೆ ಪಲಾಯನ ಮಾಡಿದ್ದಾರೆ. ನಿಮಗೆ ಸಾಮರ್ಥ್ಯ  ಇದ್ದರೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಥಿಸಿ ಆವಾಗ ನಿಮ್ಮ ಅರ್ಹತೆ ತಿಳಿಯುತ್ತದೆ’ ಎಂದು ಪ್ರತಾಪ್‌ ಸವಾಲು ಹಾಕಿದ್ದಾರೆ. 

‘ಮೀಸಲಾತಿ ಅಸಂವಿಧಾನಿಕವೆ? ಸಂವಿಧಾನವನ್ನು ತಿಳಿಯಿರಿ. ಪ್ರಧಾನಿ ಮೋದಿ ಅವರಿಗೆ ಹೇಳಿ ಎಲ್ಲಾ  ಸಂವಿಧಾನ ತಿದ್ದು ಪಡಿ ಮಾಡಿ ಎಲ್ಲಾ ಕೇತ್ರಗಳ ಮೀಸಲಾತಿ ತೆಗೆದು ಹಾಕಲು ಹೇಳಿ’ ಎಂದು ಪ್ರಿಯಾಂಕ್‌ ಬರೆದರು. 

ಪ್ರತ್ಯುತ್ತರವಾಗಿ ಪ್ರತಾಪ್‌ ‘1952 ,1953 ರಲ್ಲಿ ಅಂಬೇಡ್ಕರ್‌ ಅವರನ್ನು ಸೋಲಿಸಿದ ನಿಮಗೆ ಅವರ ಬಗ್ಗೆ ಮಾತನಾಡುವ ಹಕ್ಕಿಲ್ಲ’ ಎಂದು ಬರೆದಿದ್ದಾರೆ. 

Advertisement

ಇದರಿಂದ ಕೆದರಿದ ಪ್ರಿಯಾಂಕ್‌ ‘ನಿಮ್ಮ ಕಾಲು ಬಾಯಿ ರೋಗದಿಂದ ಉಪ ಚುನಾವಣೆಯಲ್ಲಿ ಸೋಲಾಗಿದೆ..’ಎಂದು ಬರೆದಿದ್ದಾರೆ. 

‘ನೀವು ಒಂದೆ  ವಿಷಯಗಳನ್ನು ಒಪ್ಪಿಕೊಳ್ಳಿ ,ಗೆಲುವಿನ ಸಂಭ್ರಮದಲ್ಲಿ  ಕಾಲೆಳೆದಿದ್ದು ನೀವೆ’ ಎಂದು ಪ್ರತಾಪ್‌ ಬರೆದಿದ್ದಾರೆ.

‘ನೀವೊಮ್ಮೆ ಈ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಬನ್ನಿ ,ಕಾಲೆಳೆಯುವುದರಿಂದ ಪ್ರಯೋಜನವಿಲ್ಲ’ ಎಂದು ಪ್ರಿಯಾಂಕ್‌ ಆಹ್ವಾನ ನೀಡಿದ್ದಾರೆ. 

‘ನಿಮಗೆ ನಿಮ್ಮ ತಂದೆ ಟಿಕೆಟ್‌ ಕೊಡಿಸಿ ಶಾಸಕರನ್ನಾಗಿ ಮಾಡಿ ಸಚಿವ ಸ್ಥಾನ ಕೊಡಿಸಿದ್ದಾರೆ. ನಾನು ಇಲ್ಲಿ ನನ್ನ ಕಠಿಣ ಶ್ರಮ ಮತ್ತು ಮೈಸೂರು-ಕೊಡಗು ಜನರ ನಂಬಿಕೆಯಿಂದ ಇಲ್ಲಿದ್ದೇನೆ’ ಎಂದು ಪ್ರತಾಪ್‌ ಬರೆದಿದ್ದಾರೆ.

ಪ್ರತ್ಯುತ್ತರವಾಗಿ ಪ್ರಿಯಾಂಕ್‌ ‘ಎಲ್ಲರಿಗೂ ಗೊತ್ತಿದೆ ನೀವು ಹೇಗೆ ಟಿಕೇಟ್‌ ಪಡೆದಿರಿ ಎಂದು. ಜನರೇನಾದ್ರು ನಿಮಗೆ ಟಿಕೇಟ್‌ ಕೊಡಿ ಎಂದಿದ್ದರೆ’ ಎಂದು ಬರೆದರು. 

ಕೊನೆಯಲ್ಲಿ ಪ್ರತಾಪ್‌ ಸಿಂಹ  ‘ನಮ್ಮ ನಡುವಿನ ಚರ್ಚೆಗೆ ಸಮಯ ಸ್ಥಳ ನಿಗದಿ ಪಡಿಸಿ’ ಎಂದು ಬರೆದರು. 

‘ನನ್ನ ಅನೇಕ ಪ್ರಶ್ನೆಗಳಿಗೆ ನೀವು ಉತ್ತರಿಸಿಲ್ಲ. ಅಂದಹಾಗೆ ನಾನು ನಿಮಗೆ ಸಂವಿಧಾನ ಓದುವಂತೆ ಸಲಹೆ ನೀಡುತ್ತೇನೆ. ಆವಾಗಲಾದರೂ ನಿಮಗೆ ಅಂಬೇಡ್ಕರ್‌ ಬಗ್ಗೆ ತಿಳಿಯಬಹುದು’ ಎಂದು ಪ್ರಿಯಾಂಕ್‌ ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next