ಕಲಬುರಗಿ: ಲೋಕಸಭಾ ಚುನಾವಣಾ ರಣಕಣದ ಕಾವು ದಿನದಿಂದ ದಿನಕ್ಕೆ ಏರ ತೊಡಗಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳು ಜೋರಾಗತೋಡಗಿವೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ನಮೋ ಎಂದರೆ ನಮಗೆ ಮೋಸ ಮಾಡಿದವರು ಎಂದು ಹೇಳಿಕೆ ನೀಡಿದ್ದಾರೆ.
ಚಿಂಚೋಳಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು ಪ್ರಧಾನ ಮಂತ್ರಿ ಮೋದಿ ಅವರು ಚೌಕಿ ದಾರ್ ಅಲ್ಲ, ಚೋರ್, ಅವರು ಚೋರ್ ಗುರು ಆದರೆ ಅವರ ಚಾಂಡಾಳ ಶಿಷ್ಯ ಅಮಿತ್ ಶಾ ಎಂದು ತೀವ್ರ ವಾಗ್‌ಧಾಳಿ ನಡೆಸಿದರು.
ಹೈದರಾಬಾದ್ ಕರ್ನಾಟಕದ ವಿಶೇಷ ಮೀಸಲಾತಿ 371 (ಜೆ) ಮಸೂದೆ ಕುರಿತು ಮಾತನಾಡಿ,ಇದನ್ನು ಬಿಜೆಪಿ ತಿರಸ್ಕಾರ ಮಾಡಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅದನ್ನು ಜಾರಿ ಮಾಡಿ ಹಲವರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಉಮೇಶ್ ಜಾಧವ್ ವಿರುದ್ಧ ವೂ ತೀವ್ರ ಕಿಡಿ ಕಾರಿದರು.
ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದು, ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ.