ಹೊಸದಿಲ್ಲಿ : ಕೇವಲ ಒಂದು ಕಣ್ಣ ಹೊಡೆತದಿಂದ (ವಿಂಕ್) ಲಕ್ಷಾಂತರ ಹೃದಯಗಳನ್ನು ಗೆದ್ದು , ದಿನ ಬೆಳಗಾಗುವುದರೊಳಗೆ ಇಂಟರ್‌ನೆಟ್ ಸೆನೆÏàಸನ್ ಎನಿಸಿಕೊಂಡಿದ್ದ ಪ್ರಿಯಾ ವಾರಿಯರ್ ಇದೀಗ ಮತ್ತೆ ಇಂಟರ್‌ನೆಟ್‌ಗೆ ಕಿಚ್ಚು ಹಚ್ಚಿದ್ದಾರೆ ತನ್ನ ಲಿಪ್ ಲಾಕ್ kisssing ದೃಶ್ಯದ ಮೂಲಕ ! ಈ ಲಿಪ್ ಲಾಕ್ ದೃಶ್ಯ ಹೇಗೋ ಇಂಟರ್‌ನೆಟ್‌ಗೆ ಸೋರಿಕೆಯಾಗಿದ್ದು ಅದೀಗ ವೈರಲ್ ಆಗಿದೆ.
ಅಂತರ್ಜಾಲಕ್ಕೆ ಸೋರಿಕೆಯಾಗಿರುವ ಈ ರೋಮಾಂಚಕ ದೃಶ್ಯದಲ್ಲಿ ಪ್ರಿಯಾ ವಾರಿಯರ್ ಳನ್ನು ಸಹ ನಟ ರೋಶನ್ ಅಬ್ದುಲ್ ರೌಫ್ ತುಟಿ ಕಚ್ಚಿ ಚುಂಬಿಸುವ ದೃಶ್ಯ ಇದೆ.
ಈ ಲಿಪ್ ಲಾಕ್ ದೃಶ್ಯ ಇದೇ ಫೆ.14ರ ವೆಲೆಂಟೈನ್ ದಿನ ಅರ್ಥಾತ್ ಪ್ರೇಮಿಗಳ ದಿನದಂದೇ ತೆರೆ ಕಾಣಲಿರುವ ಪ್ರಿಯಾ ವಾರಿಯರ್ ನಟನೆಯ ಚೊಚ್ಚಲ “ಒರು ಅಡಾರ್ ಲವ್’ ಚಿತ್ರದ ಭಾಗವಾಗಿದೆಯೇ ಇಲ್ಲವೇ ಎಂಬುದು ಖಚಿತಗೊಂಡಿಲ್ಲ.
ಈ ಹಿಂದೆ ವಿಂಕ್ ವಿಡಿಯೋ ವೈರಲ್ ಆಗಿದ್ದ ಚಿತ್ರಿಕೆಯಲ್ಲಿ ಪ್ರಿಯಾ ಮತ್ತು ರೋಶನ್ ಯಾವ ಯುನಿಫಾರ್ಮ್ನಲ್ಲಿದ್ದರೋ ಅದೇ ಸಮವಸ್ತ್ರದ ಉಡುಪಿನಲ್ಲಿ ಈ ಲಿಪ್ ಲಾಕ್ ದೃಶ್ಯದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.