Advertisement

ಕೇಂದ್ರದ ಆಯುಷ್ಮಾನ್‌ ಯೋಜನೆಗೆ ಪ್ರಮುಖ ಖಾಸಗಿ ಆಸ್ಪತ್ರೆಗಳ ಕ್ಯಾತೆ

11:33 AM Jun 02, 2018 | udayavani editorial |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಜನಕಲ್ಯಾಣ ಆರೋಗ್ಯ ಯೋಜನೆಯಾಗಿರುವ “ಆಯುಷ್ಮಾನ್‌ ಭಾರತ’ಕ್ಕೆ  ದೇಶದ ಕೆಲವು ಪ್ರಮಖ ಹಾಗೂ ದೊಡ್ಡ ಖಾಸಗಿ ಆಸ್ಪತ್ರೆಗಳು ವಿರೋಧ ವ್ಯಕ್ತಪಡಿಸುತ್ತಿರುವುದಾಗಿ ವರದಿಯಾಗಿದೆ. 

Advertisement

ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ದರದಲ್ಲಿ  ಕ್ಲಿಷ್ಟಕರ ವೈದ್ಯಕೀಯ ಸೇವೆಯನ್ನು ಕೂಡ ಒದಗಿಸುವ ಮಹತ್ವಾಕಾಂಕ್ಷೆಯ ಆಯುಷ್ಮಾನ್‌ ಭಾರತ ಯೋಜನೆಯನ್ನು ನಿರ್ವಹಿಸುವುದು ತಮಗೆ ಕಷ್ಟವೆಂಬ ನೆಪವನ್ನು ಈ ಖಾಸಗಿ ಆಸ್ಪತ್ರೆಗಳು ಮುಂದೊಡ್ಡುತ್ತಿವೆ. ಈ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಮುಖವಾಗಿ ಕಾಣಿಸುವುಗಳೆಂದರೆ ಫೋರ್ಟಿಸ್‌, ಅಪೋಲೋ, ಮೇದಾಂತಾ ಮತ್ತು ನಾರಾಯಣ ಮುಂತಾದ ಆಸ್ಪತ್ರೆಗಳು. 

ಜಟಿಲ ಹಾಗೂ ಹೆಚ್ಚು ವೆಚ್ಚದಾಯಕವಾಗಿರುವ ಕೆಲವೊಂದು ಚಿಕಿತ್ಸೆಗಳ ಸೇವಾ ಶುಲ್ಕವನ್ನು ಹೆಚ್ಚಿಸಬೇಕೆಂಬ ಆಗ್ರಹದೊಂದಿಗೆ ಈ ಖಾಸಗಿ ಆಸ್ಪತ್ರೆಗಳ ಸಮಿತಿ ನೀತಿ ಆಯೋಗ ಮತ್ತು ಕೇಂದ್ರ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿವೆ. ಜಟಿಲ ಮತ್ತು ವೆಚ್ಚದಾಯಕ ಆರೋಗ್ಯ ಸೇವೆಗಳಿಗೆ ದರ ನಿಗದಿ ಮಾಡುವ ಸ್ವಾತಂತ್ರ್ಯವನ್ನು ತಮಗೆ ನೀಡಬೇಕೆಂದು ಸಮಿತಿ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. 

ಬಡ ಜನರಿಗೆ ಕೈಗೆಟಕುವ ದರಗಳಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಆಯುಷ್ಮಾನ್‌ ಭಾರತ ಯೋಜನೆಯಡಿ ದೇಶಾದ್ಯಂತ ಏಕ ಪ್ರಕಾರದ ಆರೋಗ್ಯ ಸೇವಾ ವೆಚ್ಚಗಳನ್ನು ನಿಗದಿಸಲಾಗಿದೆ. ಅಂತಿರುವಾಗ ಯಾವುದೇ ದರ ವ್ಯತ್ಯಾಸವನ್ನು ಆಯಾ ರಾಜ್ಯ ಸರಕಾರಗಳೇ ನಿಭಾಯಿಸಬೇಕೆಂಬುದನ್ನು ಈ ಯೋಜನೆಯಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.  

Advertisement

Udayavani is now on Telegram. Click here to join our channel and stay updated with the latest news.

Next